ವಂತಾರಾದಲ್ಲಿ ಅನಂತ್ ಅಂಬಾನಿ ಹೋಳಿ, ಪ್ರಾಣಿ ಪ್ರಿಯರ ಕಣ್ಣಿಗೆ ಹಬ್ಬ

ಅನಂತ್ ಅಂಬಾನಿ ತಮ್ಮ ಆಪ್ತ ಸ್ನೇಹಿತರ ಜೊತೆ ಈ ಬಾರಿ ಹೋಳಿ ಆಚರಿಸಿಕೊಂಡಿದ್ದಾರೆ. ವಂತಾರಾದಲ್ಲಿ ಅವರ ಹೋಳಿ ಸಂಭ್ರಮದ ವಿಡಿಯೋ ವೈರಲ್ ಆಗಿದೆ.  
 


ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಮಗ ಅನಂತ್ ಅಂಬಾನಿ (Anant Ambani )ಗೆ ಪ್ರಾಣಿಗಳೆಂದ್ರೆ ಪ್ರಾಣ. ವಂತಾರಾ ವನ್ಯಜೀವಿ ಕೇಂದ್ರ (Vantara Wildlife Centre) ಅವರ ಇನ್ನೊಂದು ಮನೆ. ತಮ್ಮ ಡ್ರೀಮ್ ಪ್ರಾಜೆಕ್ಟ್ ವಂರಾರಾವನ್ನು ಅತಿ ಹೆಚ್ಚು ಪ್ರೀತಿಸುವ ಅನಂತ್ ಅಂಬಾನಿ, ತಮ್ಮ ಬಹುತೇಕ ಸಮಯವನ್ನು ಅಲ್ಲಿ ಕಳೆಯಲು ಇಷ್ಟಪಡ್ತಾರೆ. ಅಲ್ಲಿನ ಪ್ರಾಣಿಗಳನ್ನು ಕುಟುಂಬಸ್ಥರಂತೆ ನೋಡುವ ಅನಂತ್ ಅಂಬಾನಿ ಈ ಬಾರಿ ಹೋಳಿಯನ್ನೂ ಅಲ್ಲಿನ ಪ್ರಾಣಿ – ಪಕ್ಷಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೋಳಿ ಸಂಭ್ರಮದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. 

ವಂತಾರಾದಲ್ಲಿ ಅನಂತ್ ಅಂಬಾನಿ ಹೋಳಿ  ಎಂಬ ಶೀರ್ಷಿಕೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಅನಂತ್ ಅಂಬಾನಿ ಬಿಳಿ ಬಣ್ಣದ ಜುಬ್ಬಾ- ಪೈಜಾಮಾ ಹಾಕಿದ್ದು, ಅದ್ರ ಮೇಲೆ ಬಣ್ಣಗಳನ್ನು ನೀವು ನೋಡ್ಬಹುದು. ಮೊದಲು ಎರಡು ಪಕ್ಷಿಗಳು ಅವರ ಭುಜದ ಮೇಲೆ ಬಂದು ಕುಳಿತುಕೊಳ್ತವೆ. ನಂತ್ರ ಆನೆ ಜೊತೆ ಅನಂತ್ ಅಂಬಾನಿ ನಿಂತುಕೊಳ್ತಾರೆ. ಅವರ ಮುಂದೆ ಬಣ್ಣಗಳಿದ್ದು, ಆನೆಗೂ ಬಣ್ಣ ಬಳಿಯಲಾಗಿದೆ. ಇನ್ನೂ ಅನೇಕ ಪ್ರಾಣಿಗಳ ಜೊತೆ ಅನಂತ್ ಅಂಬಾನಿ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಪ್ರಾಣಿ ಪ್ರೇಮಿಗಳು ಅನಂತ್ ಕೆಲಸವನ್ನು ಮೆಚ್ಚಿದ್ದಾರೆ. ಆದ್ರೆ ಮತ್ತೆ ಕೆಲವರು, ಇದು ಶ್ರೀಮಂತರಿಗೆ ಪ್ರೈವೇಟ್ ಝೂ. ಇದ್ರಲ್ಲಿ ಸಾಮಾನ್ಯರಿಗೆ ಪ್ರವೇಶ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. 

Latest Videos

BSNL ಬಳಕೆದಾರರಿಗೆ ಗುಡ್‌ನ್ಯೂಸ್; 4 ರೂಪಾಯಿಯ ಪ್ಲಾನ್ ಕಂಡು ಖಾಸಗಿ ಕಂಪನಿಗಳು

ಪ್ರಾಣಿಗಳನ್ನು ಸ್ನೇಹಿತರಂತೆ ನೋಡುವ ಅನಂತ್ ಅಂಬಾನಿಗೆ ವಂತಾರಾ ಫೆವರೆಟ್ ಪ್ಲೇಸ್. ಗುಜರಾತ್‌ನ ರಿಲಯನ್ಸ್ ಜಾಮ್‌ನಗರದಲ್ಲಿ ನಿರ್ಮಿಸಲಾದ ವನ್ಯಜೀವಿ ಸಂರಕ್ಷಣಾ ಯೋಜನೆ ವಂತಾರಾ. ಇದನ್ನು ಅನಂತ್ ಅಂಬಾನಿ ಪ್ರಾರಂಭಿಸಿದ್ದಾರೆ. 3,000 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಈ ಕೇಂದ್ರವು ಸ್ಟಾರ್ ಆಫ್ ದಿ ಫಾರೆಸ್ಟ್ ಎಂದೇ ಹೆಸರುಪಡೆದಿದೆ. ವನ್ಯಜೀವಿ ರಕ್ಷಣೆ ಮತ್ತು ಅವುಗಳ ಸಂರಕ್ಷಣೆಯ ಕ್ಷೇತ್ರದಲ್ಲಿ ಪ್ರಪಂಚದಾದ್ಯಂತ ಹೆಸರು ಮಾಡಿದ್ದು ವಂತಾರಾ.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಂತಾರಾಗೆ ಭೇಟಿ ನೀಡಿ, ಇದನ್ನು ಉದ್ಘಾಟಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಯ ನಿರ್ದೇಶಕ ಅನಂತ್ ಅಂಬಾನಿ ಅವ್ರ ಜೊತೆಗಿದ್ದು, ವಂತಾರಾ ಪರಿಚಯಿಸಿದ್ರು. ವಂತಾರಾದಲ್ಲಿ ಭಾರತ  ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಿಂದಲೂ ವನ್ಯಜೀವಿಗಳನ್ನು ರಕ್ಷಿಸಿ ತಂದು ಆರೈಕೆ ಮಾಡಲಾಗುತ್ತದೆ. ವಂತಾರಾವನ್ನು ನಿರ್ದಿಷ್ಟವಾಗಿ ಗಾಯಗೊಂಡ, ಸಂಕಷ್ಟದಲ್ಲಿರುವ ಅಥವಾ ಬೇಟೆಯಾಡುವಿಕೆ ಮತ್ತು ಕಳ್ಳಸಾಗಣೆಯಿಂದ ಗಾಯಗೊಂಡ ಪ್ರಾಣಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.  ಇಲ್ಲಿ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸುವ ಜೊತೆಗೆ ಆಧುನೀಕ ಸೌಲಭ್ಯಗಳನ್ನು ಒದಗಿಸಲಾಗಿದೆ.  

ಅಂಬಾನಿ ರೀತಿ ಕೋಟಿ ಆದಾಯಗಳಿಸ ಬೇಕಾ? ಉದ್ಯಮಿಯ ಯಶಸ್ಸಿನ ಸೂತ್ರ ಹೇಳಿದ ಗೊಯೆಂಕಾ

ಯಾವೆಲ್ಲ ಪ್ರಾಣಿಗಳು ಇಲ್ಲಿವೆ? : ದಕ್ಷಿಣ ಆಫ್ರಿಕಾದ ಹುಲಿ, ಶ್ರೀಲಂಕಾದ ಪಿಗ್ಮಿ ಹಿಪ್ಪೋ, ಮೆಕ್ಸಿಕೋ ಮತ್ತು ವೆನೆಜುವೆಲಾದ ವನ್ಯಜೀವಿಗಳನ್ನು ಇಲ್ಲಿ ಕಾಣಬಹುದು. ತಮಿಳುನಾಡಿನ 1,000 ಕ್ಕೂ ಹೆಚ್ಚು ಮೊಸಳೆಗಳನ್ನು ಇಲ್ಲಿಡಲಾಗಿದೆ. ವಿವಿಧ ರಾಜ್ಯಗಳ 200 ಕ್ಕೂ ಹೆಚ್ಚು ಚಿರತೆ ವಂತರಾದಲ್ಲಿ ವಾಸಿಸುತ್ತವೆ. 200 ಕ್ಕೂ ಹೆಚ್ಚು ಆನೆಗಳನ್ನು ರಕ್ಷಿಸಲಾಗಿದೆ. ಆನೆಗಳ ಜೊತೆ ಮಾವುತರಿಗೂ ಇಲ್ಲಿ ವಾಸಕ್ಕೆ ಅವಕಾಶ ನೀಡಲಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ಇರುವ 43ಕ್ಕೂ ಹೆಚ್ಚು ಜಾತಿಗಳ 2,000 ಕ್ಕೂ ಹೆಚ್ಚು ಪ್ರಾಣಿಗಳನ್ನು ಇಲ್ಲಿಕಾಣಬಹುದು.  

ಅನಂತ್ ರಾಧಿಕಾ ಮೊದಲ ಹೋಳಿ : ವಂತಾರಾದಲ್ಲಿ ಮಾತ್ರವಲ್ಲ ಅನಂತ್ ಅಂಬಾನಿ ತಮ್ಮ ಮುದ್ದಿನ ಮಡದಿ ರಾಧಿಕಾ ಜೊತೆ ಮದುವೆ ನಂತ್ರದ ಮೊದಲ ಹೋಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಕುಟುಂಬಸ್ಥರ ಜೊತೆ ಅನಂತ್ ಅಂಬಾನಿ ಬಣ್ಣದಲ್ಲಿ ಮಿಂದೆದ್ದಿದ್ದಾರೆ. 

click me!