ನಿರುದ್ಯೋಗ: ಚಾ ಅಂಗಡಿ ತೆರೆದ ಅರ್ಥಶಾಸ್ತ್ರ ಪದವೀಧರೆ

By Anusha Kb  |  First Published Apr 20, 2022, 3:41 PM IST
  • ನಿರುದ್ಯೋಗ ಸಮಸ್ಯೆಗೆ ಬಾಯ್ ಹೇಳಿದ ಯುವತಿ
  • ಸ್ವಂತ ಚಹಾ ಉದ್ಯಮ ಸ್ಥಾಪಿಸಿ ಸೈ
  • ಬಿಹಾರದ ಪ್ರಿಯಾಂಕಾ ಸಾಹು ಈಗ ಇಂಟರ್‌ನೆಟ್ ಸೆನ್ಸೇಷನ್‌

ಪಾಟ್ನಾ: ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಸ್ಪರ್ಧೆಯ ಪರಿಣಾಮ ನಿರುದ್ಯೋಗ ಇಂದು ದೇಶದ ಬಹುತೇಕ ಯುವ ಜನರ ಸಮಸ್ಯೆಯಾಗಿದೆ. ಆದರೆ ನಿರುದ್ಯೋಗ ಇದೆ ಎಂದು ಧೈರ್ಯಗುಂದದೇ ಅನೇಕರು ಇಂದು ಸ್ವ ಉದ್ಯಮ ಸ್ಥಾಪಿಸಿ ಅದರಲ್ಲಿ ಯಶಸ್ವಿಯಾಗಿ ಸ್ವಾಭಿಮಾನದ ಬದುಕು ಬದುಕುತ್ತಿದ್ದಾರೆ. ಅಂತಹ ಯುವ ಸಮೂಹದ ಸಾಲಿಗೆ ಸೇರುತ್ತಿದ್ದಾರೆ ಬಿಹಾರದ ಯುವತಿ ಪ್ರಿಯಾಂಕಾ ಗುಪ್ತಾ (Priyanka Gupta). ಅರ್ಥಶಾಸ್ತ್ರದ ಪದವಿಯ (economics graduate) ಬಳಿಕ ಎರಡು ವರ್ಷಗಳ ಕಾಲ ಕೆಲಸಕ್ಕಾಗಿ ಅಲೆದಾಡಿದ ಪ್ರಿಯಾಂಕಾ ಗುಪ್ತಾಗೆ ಕೆಲಸದ ಕನಸು ಮರೀಚಿಕೆಯಾಯಿತು. ಹಾಗೆಂದು ಆಕೆ ದೃತಿಗೆಟ್ಟು ಮನೆಯಲ್ಲೇ ಕೂರಲಿಲ್ಲ.

ಸ್ವಂತ ಉದ್ಯಮದ ಕನಸು ಕಂಡರು ಹಾಗೂ ಅದನ್ನು ಸಾಧಿಸಿದರು. ಉದ್ಯೋಗ ಯಾವುದಾದರೇನು ಕೆಲಸ ಮಾಡುವ ಮನಸ್ಥಿತಿ ಇರಬೇಕಷ್ಟೇ. ಇದೇ ರೀತಿಯ ಚಿಂತನೆಯನ್ನು ಹೊಂದಿದ್ದ ಪ್ರಿಯಾಂಕಾ ಗುಪ್ತಾ ರಸ್ತೆ ಬದಿ ಚಹಾ ಮಾರುವ ಕೆಲಸಕ್ಕೆ ಇಳಿದರು. ಪಾಟ್ನಾದ ಮಹಿಳಾ ಕಾಲೇಜು ಬಳಿ ಚಹಾ ಉದ್ಯಮ ಆರಂಭಿಸಿದ ಅವರು ಅದರಲ್ಲಿ ಯಶಸ್ಸು ಕಂಡಿದ್ದಾರೆ. 

Bihar: Priyanka Gupta, an economics graduate sets up a tea stall near Women's College in Patna

I did my UG in 2019 but was unable to get a job in the last 2 yrs. I took inspiration from Prafull Billore. There are many chaiwallas, why can't there be a chaiwali?, she says pic.twitter.com/8jfgwX4vSK

— ANI (@ANI)

Latest Videos

undefined

ನಾನು 2019ರಲ್ಲಿ ನನ್ನ ಪದವಿಯನ್ನು ಪೂರ್ತಿಗೊಳಿಸಿದೆ. ನಂತರ ಎರಡು ವರ್ಷಗಳ ಕಾಲ ಕೆಲಸಕ್ಕಾಗಿ ಅಲೆದಾಡಿದೆ. ಆದರೆ ಕೆಲಸ ಸಿಗಲಿಲ್ಲ ಹೀಗಾಗಿನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟ ನಾನು ನನ್ನದೇ ಸ್ವಂತ ಚಹಾ ಉದ್ಯಮ ಆರಂಭಿಸಿದೆ. ಈಗಾಗಲೇ ಚಹಾ ಉದ್ಯಮ ಆರಂಭಿಸಿ ಯಶಸ್ವಿಯಾಗಿರುವ ಪ್ರಫುಲ್‌ ಬಿಲ್ಲೊರೆ ಅವರನ್ನು ನನ್ನ ಸ್ಪೂರ್ತಿಯಾಗಿಸಿಕೊಂಡೆ. ಈಗಾಗಲೇ ಅನೇಕ ಚಾಯ್‌ವಾಲಾಗಳಿದ್ದಾರೆ. ಆದರೆ ಚಾಯ್‌ವಾಲಿಗಳಿಲ್ಲ. ಏಕೆ ಚಾಯ್‌ವಾಲಿ ಆಗಬಾರದು ಎಂದುಕೊಂಡೆ ಎಂದು ಸುದ್ದಿ ಸಂಸ್ಥೆ ಎಎನ್‌ಯ ಜೊತೆ ಪ್ರಿಯಾಂಕಾ ಗುಪ್ತಾ ಹೇಳಿಕೊಂಡಿದ್ದಾರೆ. 

ಪ್ರಫುಲ್ ಬಿಲ್ಲೋರ್ ಎಂಬಿಎ ಶಿಕ್ಷಣವನ್ನು ತೊರೆದು ಚಹಾ ಮಾರಾಟದ ಉದ್ಯಮವನ್ನು ಪ್ರಾರಂಭಿಸಿದ್ದರು ಮತ್ತು ಈಗ ಈ ಚಹಾ ಮಾರಾಟದಲ್ಲೇ  4 ಕೋಟಿ ರೂ ವಹಿವಾಟು ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಗುಪ್ತಾ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ಮಾಡಿದ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಪ್ರಫುಲ್ಲಾ ಬಿಲ್ಲೂರ್(Prafull Billore)  ಅವರು ಪ್ರಿಯಾಂಕಾ ಗುಪ್ತಾ ಅವರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. 

ಮೋದಿ ಹಾದಿ ಹಿಡಿದ್ರಾ ಮಮತಾ? ನಂದಿಗ್ರಾಮದಲ್ಲಿ ಚಾಯ್‌ವಾಲಿ ಆದ ದೀದಿ!

ಏತನ್ಮಧ್ಯೆ, ಬಿಹಾರದಲ್ಲಿ(Bihar)  ಮಾರ್ಚ್ ತಿಂಗಳಲ್ಲಿ ನಿರುದ್ಯೋಗ ದರವು ಶೇಕಡಾ 14.4 ರಷ್ಟಿತ್ತು. ಡಿಸೆಂಬರ್ 2021ರಲ್ಲಿ, ಬಿಹಾರದಲ್ಲಿ ನಿರುದ್ಯೋಗ ದರವು ಕಠೋರವಾದ 16 ಪ್ರತಿಶತವನ್ನು ಮುಟ್ಟಿತು. ಇದು ಜನವರಿಯಲ್ಲಿ 13.3 ಪ್ರತಿಶತಕ್ಕೆ ಇಳಿದಿದೆ. ಆದರೆ ಫೆಬ್ರವರಿ (February) 2022 ರಲ್ಲಿ ಮತ್ತೆ 14 ಪ್ರತಿಶತಕ್ಕೆ ಏರಿತು. ಜನವರಿ ಮತ್ತು ಡಿಸೆಂಬರ್‌ನಲ್ಲಿ 6.57% ಮತ್ತು 7.91% ಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಭಾರತದ ನಿರುದ್ಯೋಗ ದರವು (unemployment rate)ಆರು ತಿಂಗಳ ಗರಿಷ್ಠ 8.10% ತಲುಪಿದೆ.

ಚಾಯ್‌ವಾಲಾಗೆ ₹100 ಕೋಟಿ ಕೋವಿಡ್ ಸೆಂಟರ್‌ ಗುತ್ತಿಗೆ: ಮಹಾ ಸರ್ಕಾರ ವಿರುದ್ಧ ಕಿರೀಟ್ ಸೋಮಯ್ಯ ಆರೋಪ!

 

click me!