ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳ ಸಾಲದ ಬಡ್ಡಿದರ ಏರಿಕೆ

Published : Apr 20, 2022, 07:31 AM IST
ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳ ಸಾಲದ ಬಡ್ಡಿದರ ಏರಿಕೆ

ಸಾರಾಂಶ

* ಗೃಹ, ವಾಹನ ಸಾಲದ ಮಾಸಿಕ ಕಂತೂ ಹೆಚ್ಚಳ * ಸಾಲದ ಮೇಲಿನ ಬಡ್ಡಿ ಹೆಚ್ಚಳ 3 ವರ್ಷದಲ್ಲೇ ಮೊದಲು * ಎಸ್‌ಬಿಐ, ಬಿಒಬಿ, ಆ್ಯಕ್ಸಿಸ್‌, ಕೋಟಕ್‌ನಿಂದ ಏರಿಕೆ * ಶೀಘ್ರ ಇತರ ಬ್ಯಾಂಕ್‌ಗಳಿಂದಲೂ ಈ ಕ್ರಮ ಸಾಧ್ಯತೆ

ನವದೆಹಲಿ(ಏ.20): ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳಾದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ), ಆ್ಯಕ್ಸಿಸ್‌, ಕೋಟಕ್‌ ಮಹೀಂದ್ರಾ ತಮ್ಮ ಸಾಲದ ಮೇಲಿನ ಬಡ್ಡಿ ದರಗಳನ್ನು ಶೇ.0.1ರಷ್ಟುಹೆಚ್ಚಿಸಿವೆ. ಇದು ಏ.15ರಿಂದ ಜಾರಿಗೆ ಬರಲಿದೆ. ಪರಿಣಾಮ, ಸಾಲದ ಇಎಂಐಗಳು ಏರಿಕೆಯಾಗಲಿವೆ.

ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್‌ಗಳು ಏರಿಸಿದ್ದು 3 ವರ್ಷದಲ್ಲಿ ಇದೇ ಮೊದಲು. ಶೀಘ್ರದಲ್ಲೇ ಇತರ ಬ್ಯಾಂಕುಗಳೂ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಯಿದೆ.

ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್‌್ಸ ಆಧಾರಿತ ಸಾಲದ ಬಡ್ಡಿ ದರ (ಎಂಸಿಎಲ್‌ಆರ್‌)ಗಳಿಗೆ ಮಾತ್ರ ಎಸ್‌ಬಿಐನ ಈಗಿನ ಏರಿಕೆ ಅನ್ವಯಿಸಲಿದೆ. ಇನ್ನಿತರ ಮಾನದಂಡ ಆಧಾರಿತ ಬಡ್ಡಿ ದರಗಳು ಏರಿಕೆಯಾಗಿಲ್ಲ. ಬಡ್ಡಿ ದರ ಏರಿಕೆಯೊಂದಿಗೆ ಒಂದು ವರ್ಷದ ಎಂಸಿಎಲ್‌ಆರ್‌ ದರ ಶೇ.7.1ಕ್ಕೂ, ಮೂರು ತಿಂಗಳ ಎಂಸಿಎಲ್‌ಆರ್‌ ದರ ಶೇ.6.75ಕ್ಕೂ, ಆರು ತಿಂಗಳ ಎಂಸಿಎಲ್‌ಆರ್‌ ದರ ಶೇ.7.05ಕ್ಕೂ ಏರಿಕೆಯಾಗಿದೆ. ಬ್ಯಾಂಕ್‌ ಆಫ್‌ ಬರೋಡಾ, ಆ್ಯಕ್ಸಿಸ್‌ ಹಾಗೂ ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗಳು ಕುಡ ಎಂಸಿಎಲ್‌ಆರ್‌ ದರವನ್ನು ಶೇ.0.5ರಷ್ಟುಹೆಚ್ಚಿಸಿವೆ. ಹೀಗಾಗಿ ಎಂಸಿಎಲ್‌ಆರ್‌ ಆಧರಿತ ಸಾಲದ ಇಎಂಐ ಹೆಚ್ಚಲಿದೆ.

ಬ್ಯಾಂಕ್‌ ಲಾಕರ್‌ಗಳಿಗೆ ಹೊಸ ನಿಯಮ ಜಾರಿ

 

ಬ್ಯಾಂಕ್‌ ಲಾಕರ್‌ನಲ್ಲಿ ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ಇಟ್ಟಿರುವವರಿಗೆ ಹಾಗೂ ಇಡಲು ಬಯಸುವವರಿಗೆ ಖುಷಿಯ ಸುದ್ದಿ. ಒಂದು ವೇಳೆ ಲಾಕರ್‌ನಲ್ಲಿನ ವಸ್ತು ನಾಪತ್ತೆಯಾದರೆ ಲಾಕರ್‌ ಬಾಡಿಗೆಯ 100 ಪಟ್ಟು ಪರಿಹಾರವನ್ನು ಗ್ರಾಹಕರಿಗೆ ಬ್ಯಾಂಕ್‌ಗಳೇ ನೀಡಬೇಕು ಎಂಬ ಅಂಶ ಸೇರಿ ಹಲವು ಗ್ರಾಹಕ ಸ್ನೇಹಿ ಕ್ರಮಗಳನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಜಾರಿಗೊಳಿಸಿದೆ.

100 ಪಟ್ಟು ಪರಿಹಾರ:

ಲಾಕರ್‌ನಲ್ಲಿ ಇಟ್ಟವಸ್ತು ಬ್ಯಾಂಕ್‌ ನಿರ್ಲಕ್ಷ್ಯದಿಂದ ನಾಪತ್ತೆಯಾದರೆ ಅಥವಾ ಕಳೆದರೆ ಅದಕ್ಕೆ ಬ್ಯಾಂಕ್‌ ಹೊಣೆ. ಗ್ರಾಹಕನಿಗೆ ಬ್ಯಾಂಕುಗಳು ಬ್ಯಾಂಕ್‌ ಲಾಕರ್‌ ಬಾಡಿಗೆಯ 100 ಪಟ್ಟಿಗೆ ಸಮನಾದ ಪರಿಹಾರ ಮೊತ್ತವನ್ನು ನೀಡಬೇಕಾಗುತ್ತದೆ.

ಖಾಲಿ ಲಾಕರ್‌ ಮಾಹಿತಿ ಕಡ್ಡಾಯ:

ಈವರೆಗೆ ಬ್ಯಾಂಕ್‌ನಲ್ಲಿ ಎಷ್ಟುಲಾಕರ್‌ ಖಾಲಿ ಇವೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ಬ್ಯಾಂಕ್‌ಗಳು ನೀಡುತ್ತಿರಲಿಲ್ಲ. ಆದರೆ ಇನ್ನು ಮುಂದೆ ಎಷ್ಟುಲಾಕರ್‌ಗಳು ಖಾಲಿ ಇವೆ ಎಂದು ಶಾಖೆಯ ಫಲಕದಲ್ಲಿ ಬ್ಯಾಂಕ್‌ಗಳು ಪ್ರದರ್ಶಿಸಬೇಕು. ಹೊಸ ಅರ್ಜಿದಾರನಿಂದ ಅರ್ಜಿ ಸ್ವೀಕರಿಸಿದಾಗ ವೇಟಿಂಗ್‌ ಲಿಸ್ಟ್‌ ನಮೂದಿಸುವಿಕೆ ಕಡ್ಡಾಯ.

ಎಸ್ಸೆಮ್ಮೆಸ್‌, ಇಮೇಲ್‌ ಅಲರ್ಟ್‌

ಪ್ರತಿ ಬಾರಿ ಗ್ರಾಹಕನು ಲಾಕರ್‌ಗೆ ಭೇಟಿ ನೀಡಿದಾಗ ಆ ದಿನದ ಅಂತ್ಯದೊಳಗೆ ಬ್ಯಾಂಕ್‌ಗಳು ಗ್ರಾಹಕನಿಗೆ ಎಸ್ಸೆಮ್ಮೆಸ್‌ ಹಾಗೂ ಇ-ಮೇಲ್‌ ಅಲರ್ಚ್‌ ಸಂದೇಶ ಕಳಿಸಬೇಕು. ಇದರಿಂದ ಅನ್ಯರು ಭೇಟಿ ನೀಡಿ ಎಸಗುವ ವಂಚನೆ ತಪ್ಪುತ್ತದೆ.

180 ದಿನದ ಸಿಸಿಟೀವಿ ಕಡ್ಡಾಯ:

ಬ್ಯಾಂಕ್‌ಗಳು ಲಾಕರ್‌ ಸಿಸಿಟೀವಿ ವಿಡಿಯೋ ಚಿತ್ರಿಕೆಗಳನ್ನು 180 ದಿನ ಸಂರಕ್ಷಿಸಿ ಇಡುವುದು ಕಡ್ಡಾಯ. ಇದರಿಂದ ಅನ್ಯರು ಲಾಕರ್‌ಗೆ ಭೇಟಿ ನೀಡಿ ವಂಚನೆ ಎಸಗಿದ್ದರೆ, ಸುಲಭ ಪತ್ತೆ ಸಾಧ್ಯ. ಗ್ರಾಹಕರಿಗೆ 6 ತಿಂಗಳವರೆಗೂ ದೂರಲು ಅವಕಾಶ ಲಭಿಸುತ್ತದೆ.

ಗರಿಷ್ಠ 3 ವರ್ಷದ ಬಾಡಿಗೆ ‘ಠೇವಣಿ’

ಗ್ರಾಹಕರಿಗೆ ಬ್ಯಾಂಕ್‌ಗಳು ಲಾಕರ್‌ ಠೇವಣಿ ಇಡುವ ಮೊತ್ತಕ್ಕೆ ಆರ್‌ಬಿಐ ಮಿತಿ ಹೇರಿದೆ. ಗರಿಷ್ಠ 3 ವರ್ಷದ ಬಾಡಿಗೆ ಮೊತ್ತವನ್ನು ಠೇವಣಿ ರೂಪದಲ್ಲಿ ಇಡಬಹುದಾಗಿದೆ. ಉದಾಹರಣೆಗೆ: ವರ್ಷಕ್ಕೆ 4 ಸಾವಿರ ರು. ಲಾಕರ್‌ ಬಾಡಿಗೆಯನ್ನು ಗ್ರಾಹಕ ಕಟ್ಟುತ್ತಿದ್ದರೆ, 12 ಸಾವಿರ ರು.ಗಳನ್ನು ಮಾತ್ರ ಠೇವಣಿಯಾಗಿ ಬ್ಯಾಂಕ್‌ಗಳು ಇರಿಸಿಕೊಳ್ಳಬೇಕು. ಇನ್ನೂ ಹೆಚ್ಚು ಮೊತ್ತ ಕೇಳುವಂತಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!