
ಮುಂಬೈ(ಏ.08): ಕೊರೋನಾ ವೈರಸ್ ಲಾಕ್‌ಡೌನ್ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ದೇಶಾದ್ಯಂತ ಅನೇಕ ಉದ್ದಿಮೆಗಳು ನೌಕರರ ವೇತನ ಕಡಿತಗೊಳಿಸಲು ಯೋಚಿಸುತ್ತಿದ್ದರೆ ಕೇರಳ ಮೂಲದ ಬಾಬಿ ಚೆಮ್ಮನೂರ್ ಗ್ರೂಪ್ ತನ್ನ ನೌಕರರ ವೇತನವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇದೇ ವೇಳೆ, ಮಹಾರಾಷ್ಟ್ರದ ನಾಡಿಯಾದ್ವಾಲಾ ಗ್ರಾಂಡ್‌ಸನ್ ಎಂಟರ್‌ಟೇನ್ಮೆಂಟ್ ಕಂಪನಿ ತನ್ನ ನೌಕರರಿಗೆ ಬೋನಸ್ ಘೋಷಿಸಿದೆ.
ಜ್ಯುವೆಲ್ಲರಿ, ಫೈನಾನ್ಸ್, ರೆಸಾಟ್ಸ್‌ರ್ ಮುಂತಾದ ಉದ್ದಿಮೆಗಳನ್ನು ನಡೆಸುವ ಬಾಬಿ ಚೆಮ್ಮನೂರ್ ಗ್ರೂಪ್ ತನ್ನ ಚೆಮ್ಮನೂರ್ ಜ್ಯುವೆಲ್ಲರಿ ಕಂಪನಿಯ ನೌಕರರಿಗೆ ಆರಂಭಿಕವಾಗಿ ಶೇ.25ರಷ್ಟುವೇತನ ಏರಿಕೆ ಮಾಡುವುದಾಗಿ ಘೋಷಿಸಿದೆ. ಅಲ್ಲದೆ, ಹಂತಹಂತವಾಗಿ ಇತರ ಕಂಪನಿಗಳ ನೌಕರರ ವೇತನವನ್ನೂ ಏರಿಕೆ ಮಾಡುವುದಾಗಿ ಪ್ರಕಟಿಸಿದೆ. ಬಾಬಿ ಚೆಮ್ಮನೂರ್ ಗ್ರೂಪ್‌ನಲ್ಲಿ ಒಟ್ಟಾರೆ 5 ಲಕ್ಷ ನೌಕರರಿದ್ದಾರೆ.
ಸೆನ್ಸೆಕ್ಸ್ 2476 ಅಂಕ ಏರಿಕೆ: ಸಾರ್ವಕಾಲಿಕ ದಾಖಲೆ!
ಇದೇ ವೇಳೆ, ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಅವರು ತಮ್ಮ ಕಂಪನಿಯ 400 ನೌಕರರಿಗೆ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ, ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರಿಗೆ 10,000 ರು. ಧನಸಹಾಯ ಹಾಗೂ ಬೋನಸ್ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಅಲ್ಲದೆ, ತಮ್ಮ ಕಂಪನಿಯಿಂದ ಚಿತ್ರರಂಗದ ವಿವಿಧ ಸಂಘಗಳು, ಪಿಎಂ ಕೇರ್ಸ್ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.