ಚಿನ್ನದ ಬೇಡಿಕೆ ಭಾರೀ ಕುಸಿತ, ಇಂದಿನ ದರವೆಷ್ಟು?

By Suvarna NewsFirst Published Apr 7, 2020, 2:25 PM IST
Highlights

ದೇಶಾದ್ಯಂತ ಲಾಕ್‌ಡೌನ್‌ ಹೇರಿಕೆ| ಕೊರೋನಾ ಹಾವಳಿ ನಡುವೆ, ಮದುವೆ ಸಮಾರಂಭಳಿಗೆ ಬ್ರೇಕ್, ಚಿನ್ನದ ಬೇಡಿಕೆ ಕುಸಿತ| ಹಾಗಾದ್ರೆ ಚಿನ್ನದ ದರವೆಷ್ಉ? ಇಲ್ಲಿದೆ ಮಾಹಿತಿ

ಬೆಂಗಳೂರು(ಏ.07): ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿರುವ ಪರಿಣಾಮ ಚಿನ್ನದ ಆಮದು ಮಾರ್ಚ್‌ನಲ್ಲಿ ಏಕಾಏಕಿ ಶೇ.73ರಷ್ಟುಕುಸಿತ ಕಂಡಿದೆ. ಹೀಗಿರುವಾಗ ಚಿನ್ನದ ಬೆಲೆ ಹೇಗಿದೆ? ಇಳಿಕೆಯಾಗಿದ್ಯಾ? ಇಲ್ಲಿದೆ ವಿವರ

ಹೌದು ಕಳೆದ ಆರೂವರೆ ವರ್ಷದಲ್ಲಿ ಚಿನ್ನದ ಆಮದು ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಸೋಮವಾರ ಸರ್ಕಾರದ ಮೂಲಗಳು ತಿಳಿಸಿವೆ. ವರ್ಷದಿಂದ ವರ್ಷಕ್ಕೆ ಚಿನ್ನದ ಆಮದು ಮಾರುಕಟ್ಟೆಯಲ್ಲಿ ಗಣನೀಯ ಕುಸಿತ ಕಾಣುತ್ತಿದ್ದ ಬೆನ್ನಲ್ಲೇ ಈಗ ಮತ್ತೊಂದು ಹೊಡೆತ ಬಿದ್ದಿದೆ. ಹೀಗಿದ್ದರೂ ಚಿನ್ನದ ಬೆಲೆ ಮಾತ್ರ ಇಳಿಕೆಯಾಗಿಲ್ಲ. 

ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆಯೇ ಇಲ್ಲ!

ಸತತ ನಾಲ್ಕು ದಿನಗಳಿಂದ ಏರಿಕೆ ಕಾಣುತ್ತಲೇ ಇದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಂದು ಯಾವುದೆ ಬದಲಾವಣೆ ಆಗಿಲ್ಲ. 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 39,580 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ  43,960 ರೂಪಾಯಿ ಇದೆ. ಇತ್ತ ಬೆಳ್ಳಿ ಬೆಲೆ ಕೆಜಿಗೆ 40, 360 ರೂಪಾಯಿ ನಿಗದಿಯಾಗಿದೆ.

ಲಾಕ್‌ಡೌನ್‌ ಮುಗಿಯಲು ಇನ್ನೂ ಒಂದು ವಾರ ಬಾಕಿ ಇದೆ. ಹೀಗಿರುವಾಗ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

click me!