ದಿವಾಳಿ ಅಂಚಿಗೆ ಬಂದ ವಿಶ್ವದ ದೊಡ್ಡ ಕಂಪನಿ; ಎಲ್ಲಾ ಕೊರೋನಾ ಅವತಾರ!

Published : Oct 14, 2020, 05:33 PM IST
ದಿವಾಳಿ ಅಂಚಿಗೆ ಬಂದ ವಿಶ್ವದ ದೊಡ್ಡ ಕಂಪನಿ; ಎಲ್ಲಾ ಕೊರೋನಾ ಅವತಾರ!

ಸಾರಾಂಶ

ಕೊರೋನಾ ಮತ್ತು ಲಾಕ್ ಡೌನ್ ಪರಿಣಾಮ/ ಕೊರೋನಾ ಕಾಟ; ವಿಶ್ವದ ದೊಡ್ಡ ಮನರಂಜನಾ ಕಂಪನಿ ದಿವಾಳಿ ಅಂಚಿಗೆ/ ಸಿನಿಮಾ ಮಂದಿರಕ್ಕೆ ಜನ ಬರುತ್ತಿಲ್ಲ/ ಮುಂದಿನ ವರ್ಷವೂ ಇದೆ ಪರಿಸ್ಥಿತಿ/ ಪಾತಾಳಕ್ಕೆ ಇಳಿದ ಕಂಪನಿ ಷೇರುಗಳು

ನ್ಯೂಯಾರ್ಕ್(ಅ. 14)  ಜಗತ್ತಿನಲ್ಲಿಯೇ ಹೆಸರು  ಮಾಡಿರುವ ಎಎಂಸಿ ಎಂಟರ್ ಟೈನ್ ಮೆಂಟ್ ಎಚ್ಚರಿಕೆಯೊಂದನ್ನು  ನೀಡಿದೆ.  ಜನರ ಬಳಿ ಹಣದ ವಹಿವಾಟು ಕಡಿಮೆಯಾಗಿದ್ದು ಮನರಂಜನಾ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆ ನೀಡಿದೆ.

ಕೊರೋನಾ ಪರಿಣಾಮ ಎಎಂಸಿಯ ಷೇರುಗಳು ಕುಸಿದಿವೆ.   ಮನರಂಜನಾ ಕ್ಷೇತ್ರದ ಮೇಲೆ ಮುಂದಿನ ವರ್ಷವೂ ಜನರ ನಿರಾಸಕ್ತಿ ಮುಂದುವರಿಯಲಿದ್ದು ಪರಿಣಾಮ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದಿದೆ.

ಚೀನಾ ಆರ್ಥಿಕತೆ ಹಿಂದಿಕ್ಕಲಿದೆ ಭಾರತ

ದಿವಾಳಿತನನವೇ ಪರಿಹಾರ ಎಂಬ ಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ಸಂದರ್ಶನವೊಂದರಲ್ಲಿ  ಕ್ರೆಡಿಟ್ ಸೈಟ್ ಅನಾಲಿಸ್ಟ್ ಮಾಟ್ ಜ್ಲೋಟೋ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದು  ಗೋಡೆ ಮೇಲಿನ ಬರಹದಂತೆ ಮುಂದಿನ ದಿನಗಳಲ್ಲಿ ಗೊತ್ತಾಗುವುದು ಎಂದಿದ್ದರು.

ವಾಣಿಜ್ಯ ವ್ಯವಹಾರದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಒಂದು ವರ್ಷದ ಅವಧಿಯಲ್ಲಿ ಶೇ.  85 ರಷ್ಟು ಕುಸಿದಿದೆ. ಕರೋನಾ ವೈರಸ್ ಎಎಮ್‌ಸಿಯ ಮೇಲೆ ಪರಿಣಾಮ ಬೀರಿದೆ.  ಜನ ಸಿನಿಮಾ ವೀಕ್ಷಣೆಯನ್ನು ನಿಲ್ಲಿಸಿದ್ದಾರೆ.  ಚಲನಚಿತ್ರ ಪ್ರೇಕ್ಷಕರ ಸಂಖ್ಯೆ ಶೇ.  81 ಕುಸಿತ ಕಂಡಿದೆ ಎಂದು ಅಂಕಿ ಅಂಶವನ್ನು ಕಂಪನಿ ನೀಡಿದೆ. 

ಮುಗ್ಗರಿಸಿದ ಚಿನ್ನ; ಹೊಸ ದರ ಕಣ್ಣು ತುಂಬಿಕೊಳ್ಳಿ

ಕಂಪನಿ ಸಹ ದಿವಾಳಿಯ ಹಾದಿಗೆ ತೆರಳುತ್ತಿದ್ದು ಪರ್ಯಾಯ ಕ್ರಮಗಳ ಆಲೋಚನೆ ಮಾಡಿದೆ. ಜಾಯಿಂಟ್ ವೆಂಚರ್ಸ್ ಗಳ ಮಾರಾಟಕ್ಕೂ ಮುಂದಾಗಿದೆ. ಆದರೆ ಇದು ಸುಲಭದಲ್ಲಿ ಸಾಧ್ಯವಿಲ್ಲ. ಅನೇಕ ಅಡ್ಡಿಗಳು ಎದುರಾಗುತ್ತವೆ. ಸಾಲ ಮರುಪಾವತಿ ಮತ್ತು ಥಿಯೇಟರ್  ಬಾಡಿಗೆ ನೀಡಿರುವವರ ಜತೆಯೂ ಮಾತುಕತೆ ನಡೆಸಿದೆ.

ಒಂದು ಕಡೆ ತನ್ನ ಷೇರಿನ ಮುಖಬೆಲೆ ಕುಸಿತ, ಇನ್ನೊಂದು ಕಡೆ ಥಿಯೇಟರ್ ಬಾಡಿಗೆ, ಸಾಲ, ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬಾರದಿರುವುದು ಹೀಗೆ ಹತ್ತು ಹಲವು ಅಂಶಗಳು ಕಂಪನಿಯನ್ನು ದಿವಾಳಿ ಹಂತಕ್ಕೆ ತಂದಿದ್ದು ಹಣದ ವಹಿವಾಟಿಗೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌