
ಬೆಂಗಳೂರು: ಈ ವರ್ಷದ ಅಮೆಜಾನ್ ಪ್ರೈಮ್ ಡೇ ಸೇಲ್ಸ್ (Amazon Prime Day Sale) ಜುಲೈ 20 ಮತ್ತು ಜುಲೈ 21ರಂದು ನಡೆಯಲಿದೆ. ಬಿಗ್ ಸೇಲ್ ಆಫರ್ ಜುಲೈ 20ರ ಮಧ್ಯರಾತ್ರಿ 12 ಗಂಟೆಯಿಂದಲೇ ಆರಂಭವಾಗಲಿದೆ. ಈ ಬಾರಿ ಪ್ರೈಮ್ ಡೇ ಸೇಲ್‌ನಲ್ಲಿ ಹಲವು ರಿಯಾಯ್ತಿ ಲಭ್ಯವಾಗಲಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣ, ಬಟ್ಟೆ ಸೇರಿದಂತೆ ಎಲ್ಲಾ ವಿಧದ ವಸ್ತುಗಳ ಮೇಲೆ ದೊಡ್ಡಮಟ್ಟದ ರಿಯಾಯ್ತಿ, ಇಎಂಐ ಸೌಲಭ್ಯ ಹಾಗೂ ಆಕರ್ಷಕ ಕೊಡುಗೆಗಳು ಗ್ರಾಹಕರಿಗೆ ಸಿಗಲಿವೆ ಎಂದು ಅಮೆಜಾನ್ ಹೇಳಿಕೊಂಡಿದೆ. ಜುಲೈ 20 ಮತ್ತು 21ರಂದು ಪ್ರೈಮ್ ಡೇ ಸೇಲ್ ನಡೆಯಲಿದೆ. Amazon Echo ಸಾಧನಗಳು ದೊಡ್ಡ ರಿಯಾಯಿತಿಯಲ್ಲಿ ಲಭ್ಯವಿದೆ.
ಈ ಬ್ಯಾಂಕ್ ಕಾರ್ಡ್ ಬಳಕೆ ಮೇಲೆ ರಿಯಾಯ್ತಿ
Intel, Samsung, OnePlus, Iqoo, Honor, Sony, Asus ನಂತಹ ಭಾರತೀಯ ಮತ್ತು ವಿದೇಶಿ ಬ್ರ್ಯಾಂಡ್‌ಗಳು ಸೇರಿದಂತೆ 450 ಕ್ಕೂ ಹೆಚ್ಚು ಬ್ರಾಂಡ್‌ಗಳ ಉತ್ಪನ್ನಗಳು ಅಮೆಜಾನ್ ಪ್ರೈಮ್ ಡೇನಲ್ಲಿ ಮಾರಾಟಕ್ಕೆ ಇರಲಿವೆ. ನಿಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಖರೀದಿಸುವ ಅವಕಾಶವನ್ನು ಅಮೆಜಾನ್ ನೀಡುತ್ತಿದೆ. ಈ ಸೇಲ್‌ನಲ್ಲಿ, SBI, ICICI ಬ್ಯಾಂಕ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ EMI ವಹಿವಾಟುಗಳ ಮೇಲೆ 10% ರಿಯಾಯಿತಿ ಸಿಗಲಿದೆ.
ಅಮೇಜಾನ್‌ನಲ್ಲಿ ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಮೂರು; ಆದ್ರೂ ಗ್ರಾಹಕ ಫುಲ್ ಅಪ್ಸೆಟ್
ಇವರಿಗೆಲ್ಲಾ ಸಿಗಲಿದೆ ಗಿಫ್ಟ್!
Amazon ICICI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸ್ವಾಗತ ಬಹುಮಾನವಾಗಿ ರೂ.2500 ಸಿಗುತ್ತದೆ. ಪ್ರೈಮ್ ಗ್ರಾಹಕರು 300 ರೂಪಾಯಿ ಕ್ಯಾಶ್‌ಬ್ಯಾಕ್ ಮತ್ತು 2,200 ರೂಪಾಯಿ ಮೌಲ್ಯದ ಬಹುಮಾನಗಳನ್ನು ಪಡೆಯಬಹುದು. ಇದರ ಜೊತೆಗೆ 30 ದಿನದ ಮೆಂಬರ್‌ಶಿಪ್ ತೆಗೆದುಕೊಳ್ಳುವ ಗ್ರಾಹಕರಿಗೆ ಕೊಡುಗೆಗಳು ಸಿಗುವ ಸಾಧ್ಯತೆಗಳಿರುತ್ತವೆ.
Amazon Prime ತಿಂಗಳ ಸದಸ್ಯತ್ವಕ್ಕೆ 299 ರೂ, ಮೂರು ತಿಂಗಳಿಗೆ 599 ರೂ ಮತ್ತು ವರ್ಷಕ್ಕೆ 1,499 ರೂಪಾಯಿ ಪಾವತಿಸಬೇಕು. ಮೆಜಾನ್ ಪ್ರೈಮ್ ಶಾಪಿಂಗ್ ಎಡಿಷನ್ ಪ್ಲಾನ್ ಬೆಲೆ 399 ರೂಪಾಯಿ ಆಗಿದೆ. ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಉಚಿತ ಮತ್ತು ಸ್ಪೀಡ್ ಡೆಲಿವರಿ ಸೌಲಭ್ಯ ಸಿಗುತ್ತದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ಆಪ್‌ನಲ್ಲಿ ಉಚಿತವಾಗಿ ಸಿನಿಮಾ, ವೆಬ್ ಸಿರೀಸ್, ಹಾಡುಗಳನ್ನು ನೋಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.