ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್: ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ

Published : Aug 05, 2026, 08:43 AM IST
Amazon Great Freedom Sale 2026 Starts August 7

ಸಾರಾಂಶ

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, ಅಮೆಜಾನ್ ಪೇ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ₹1,500 ಮೇಲಿನ ಖರೀದಿಗೆ ಬಡ್ಡಿರಹಿತ 'ಪೇ-ಇನ್-3' ಸೌಲಭ್ಯ, ಪ್ರವಾಸ ಬುಕಿಂಗ್‌ಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಯುಪಿಐ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಸೇರಿವೆ.

ಬೆಂಗಳೂರು: ಅಮೆಜಾನ್‌ನ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವಗೆ ನಡೆಯಲಿದ್ದು, ಅದರ ಭಾಗವಾಗಿ ಅಮೆಜಾನ್ ಪೇ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ಪ್ರಕಟಿಸಿದೆ. ಪ್ರವಾಸ, ಶಾಪಿಂಗ್ ಮತ್ತು ದೈನಂದಿನ ಡಿಜಿಟಲ್ ಪಾವತಿಗಳ ಮೇಲೆ ಗ್ರಾಹಕರು ಭಾರಿ ಆಫರ್‌ಗಳನ್ನು ಪಡೆಯಬಹುದಾಗಿದೆ.

ಪೇ-ಇನ್-3 ಸೌಲಭ್ಯ

ಪ್ರಮುಖವಾಗಿ, ಪ್ರತಿಯೊಬ್ಬ ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಪೇ-ಇನ್-3 ಸೌಲಭ್ಯವನ್ನು ಪರಿಚಯಿಸಲಾಗಿದೆ. ₹1,500ಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಖರೀದಿಯನ್ನಾದರೂ ಮೂರು ಕಂತುಗಳಲ್ಲಿ ಬಡ್ಡಿ ಮತ್ತು ಪ್ರೊಸೆಸಿಂಗ್ ಶುಲ್ಕವಿಲ್ಲದೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆಗಸ್ಟ್ 7 ರಿಂದ 9ರವರೆಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಳ ಮೇಲೆ ಶೇ. 6 ರಷ್ಟು ರಿಯಾಯಿತಿ ಸಿಗಲಿದೆ. ಹೊಸ ಗ್ರಾಹಕರಿಗೆ ಹೆಚ್ಚುವರಿ ಶೇ. 10ರವರೆಗೆ ಉಳಿತಾಯದ ಅವಕಾಶವಿದೆ.

ಶೇ. 60ರವರೆಗೆ ಉಳಿತಾಯ ಸಾಧ್ಯತೆ

ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಇದ್ದು, ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಶೇ. 5 ರಿಯಾಯಿತಿ ಲಭ್ಯ. ಒಟ್ಟಾರೆಯಾಗಿ ಶೇ. 60ರವರೆಗೆ ಉಳಿತಾಯ ಮಾಡಬಹುದು. ಬಸ್ ಟಿಕೆಟ್ ಬುಕಿಂಗ್‌ಗೆ ಶೇ. 17ರವರೆಗೆ ರಿಯಾಯಿತಿ ಹಾಗೂ ₹100 ಕ್ಯಾಶ್‌ಬ್ಯಾಕ್ ದೊರೆಯಲಿದೆ.

ಈ ಮೊದಲು ಕೇವಲ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮಾತ್ರ ಸೀಮಿತವಾಗಿದ್ದ ನೋ-ಕಾಸ್ಟ್ ಇಎಮ್‌ಐ ಆಯ್ಕೆಯನ್ನು, ಈಗ ಪೇ-ಇನ್-3 ಮೂಲಕ ಗ್ರೋಸರಿ, ಫ್ಯಾಷನ್, ಗೃಹಬಳಕೆಯ ವಸ್ತುಗಳು ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ವಿಸ್ತರಿಸಲಾಗಿದೆ. ನಿರ್ದಿಷ್ಟ ವಸ್ತುವಿಗೆ ಮಾತ್ರವಲ್ಲದೆ, ಇಡೀ ಕಾರ್ಟ್ ಮೌಲ್ಯಕ್ಕೆ ಈ ಸೌಲಭ್ಯ ಅನ್ವಯವಾಗಲಿದೆ. ಯಾವುದೇ ವಾರ್ಷಿಕ ಶುಲ್ಕವಿಲ್ಲದ ಈ ಕಾರ್ಡ್ ಬಳಕೆದಾರರಿಗೆ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಮಾಡುವ ಪ್ರತಿ ಖರೀದಿಯ ಮೇಲೆಯೂ ಶೇ. 5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಸಿಗಲಿದೆ.

ಅಮೆಜಾನ್ ಪೇ ಯುಪಿಐ ಮೂಲಕ ಕನಿಷ್ಠ ₹1 ಪಾವತಿಸುವ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಬಳಕೆದಾರರು ಮುಂದಿನ ಆರ್ಡರ್‌ನಲ್ಲಿ ₹50 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಮೊಬೈಲ್ ರೀಚಾರ್ಜ್ ಮಾಡುವವರಿಗೂ ₹50 ರವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ.

ಇದನ್ನೂ ಓದಿ: Iphone ಪ್ರಿಯರಿಗೆ ಭರ್ಜರಿ ಆಫರ್: ಐಫೋನ್ 17 ಪ್ರೋ ಬೆಲೆಯಲ್ಲಿ ಭಾರಿ ಇಳಿಕೆ; ಬರೋಬ್ಬರಿ ₹17,000 ಉಳಿತಾಯ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Iphone ಪ್ರಿಯರಿಗೆ ಭರ್ಜರಿ ಆಫರ್: ಐಫೋನ್ 17 ಪ್ರೋ ಬೆಲೆಯಲ್ಲಿ ಭಾರಿ ಇಳಿಕೆ; ಬರೋಬ್ಬರಿ ₹17,000 ಉಳಿತಾಯ!
ಜಿಂದಾಲ್‌ನಿಂದ ಕರ್ನಾಟಕಕ್ಕೆ ಬಿಗ್ ಗಿಫ್ಟ್; ₹1.20 ಲಕ್ಷ ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿ!