ಒಂದೇ ದಿನದಲ್ಲಿ ಪುಟಿದೆದ್ದ ಜೆಫ್: ಗೇಟ್ಸ್‌ನಿಂದ ಶ್ರೀಮಂತ ಪಟ್ಟ ಕಸಿದ ಬೆಜೋಸ್!

By Web DeskFirst Published Oct 26, 2019, 4:29 PM IST
Highlights

ಒಂದೇ ದಿನದಲ್ಲಿ ಮತ್ತೆ ಪುಟಿದೆದ್ದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್| ಮತ್ತೆ ವಿಶ್ವದ ಅಗ್ರ ಶ್ರೀಮಂತ ಪಟ್ಟ ತಮ್ಮದಾಗಿಸಿಕೊಂಡ ಜೆಫ್ ಬೆಜೋಸ್| ಅಮೆಜಾನ್ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಮತ್ತೆ ಏರಿಕೆ| ಬಿಲ್ ಗೇಟ್ಸ್ ಅವರಿಂದ ಮತ್ತೆ ಶ್ರೀಮಂತ ಪಟ್ಟ ಕಸಿದುಕೊಂಡ ಜೆಫ್ ಬೆಜೋಸ್| ಅಮೆಜಾನ್ ಪ್ರತಿ ಷೇರಿನ ಮೌಲ್ಯ 1,760.78 ಡಾಲರ್ ಏರಿಕೆ| ಜೆಫ್ ಸಂಪತ್ತಿನ ಮೌಲ್ಯ ಬೋಬ್ಬರಿ 109.9 ಶತಕೋಟಿ ಡಾಲರ್|

ಸ್ಯಾನ್‌ಫ್ರಾನ್ಸಿಸ್ಕೊ(ಅ.26): ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದ್ದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್, ಕೇವಲ ಒಂದೇ ದಿನದಲ್ಲಿ ಮತ್ತೆ ನಂಬರ್ ಒನ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ 7 ಶತಕೋಟಿ ಡಾಲರ್ ಕಳೆದುಕೊಂಡಿದ್ದ ಜೆಫ್, ಇದೀಗ ಮತ್ತೆ ತಮ್ಮ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಈ ಮೂಲಕ ಕೇವಲ ಒಂದೇ ದಿನದಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರಿಂದ ಶ್ರೀಮಂತ ಪಟ್ಟವನ್ನು ಮರಳಿ ಪಡೆದಿದ್ದಾರೆ.

Latest Videos

ರಾತ್ರೋ ರಾತ್ರಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಜೆಫ್ ಬೆಜೋಸ್: ಮತ್ಯಾರೀಗ ಸಿರಿವಂತ?

ಷೇರು ಮಾರುಕಟ್ಟೆಯಲ್ಲಿ ಅಮೆಜಾನ್ ಷೇರು ಮೌಲ್ಯ ಶೇ. 1ರಷ್ಟು ಏರಿಕೆ ಕಂಡ ಪರಿಣಾಮ ಪ್ರತಿ ಷೇರಿನ ಮೌಲ್ಯ 1,760.78 ಡಾಲರ್ ಆಗಿದೆ. ಇದೀಗ ಜೆಫ್ ಸಂಪತ್ತಿನ ಮೌಲ್ಯ ಬೋಬ್ಬರಿ 109.9 ಶತಕೋಟಿ ಡಾಲರ್ ಆಗಿದೆ.

ಈ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನದಲ್ಲಿ ಜೆಫ್ ಬೆಜೋಸ್ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ನಂಬರ್ 1 ಸ್ಥಾನ ಗಳಿಸಿದರು.

click me!