ರಾತ್ರೋ ರಾತ್ರಿ ಬಿಲಿಯನೇರ್ ಆದ 24 ವರ್ಷದ ಯುವಕ| ನೋಡ ನೋಡುತ್ತಿದ್ದಂತೆಯೇ ಶ್ರೀಮಂತನಾದ ಈತ ಅಮೆರಿಕಾ ಅಧ್ಯಕ್ಷರನ್ನೇ ಹಿಂದಿಕ್ಕಿದ| ಅಷ್ಟಕ್ಕೂ ಇಷ್ಟೊಂದು ಮೌಲ್ಯದ ಆಸ್ತಿ ಆತನ ಖಾತೆ ಸೇರಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಬೀಜಿಂಗ್[ಅ.26]: ಎರಿಕ್ ಸೆ, 24 ವರ್ಷ. ಈತನ ತಂದೆ ಚೀನಾದ ಪ್ರಸಿದ್ಧ ಮೆಡಿಸಿನ್ ಕಂಪೆನಿಯ ನಿರ್ದೇಶಕರು. ಇವರ ಜೀವನ ಸಾಮಾನ್ಯರಂತೆ ನಡೆಯುತ್ತಿತ್ತು. ಆದರೆ ಕಳೆದ ಕೆಲ ದಿನಗಳಲ್ಲಿ ಅಚಾನಕ್ಕಾಗಿ ಎರಿಕ್ ವಿಶ್ವದ ಗಮನ ಸೆಳೆದಿದ್ದಾರೆ. ರಾತ್ರೋ ರಾತ್ರಿ ಅವರ ಹೆಸರು 3.8 ಡಾಲರ್ ಅಂದರೆ 2,69,19,20,00,000 ರೂ. ಮೌಲ್ಯದ ಸಂಪತ್ತು ಅವರ ಪಾಲಾಗಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತಲೂ ಅಧಿಕ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಯಾಕಂದ್ರೆ ಟ್ರಂಪ್ ಬಳಿ ಇರುವುದು 3.1 ಬಿಲಿಯನ್ ಡಾಲರ್ ಆಸ್ತಿಯಷ್ಟೆ.
ತಂದೆ ತಾಯಿ ಉಡುಗೊರೆಯಾಗಿ ನೀಡಿದ್ರು ಕಂಪೆನಿ ಶೇರುಗಳು
ಹೌದು ತಾಯಿ Cheung Ling Cheng ಹಾಗೂ ತಂದೆ Tse Ping ತಮ್ಮ ಹೆಸರಿನ ಔಷಧ ಕಂಪೆನಿಯ ಶೇರುಗಳ ಅತ್ಯಧಿಕ ಭಾಗವನ್ನು ತಮ್ಮ ಮಗನ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಶೇರುಗಳ ಮೌಲ್ಯ ಮಾರುಕಟ್ಟೆಯಲ್ಲಿ 3.8 ಬಿಲಿಯನ್ ಡಾಲರ್ ಇದೆ. ಪ್ರಸಿದ್ಧ ಬ್ಯುಸಿನೆಸ್ ಮ್ಯಾಗಜೀನ್ 'ಫೋರ್ಬ್ಸ್' ಅನ್ವಯ 2019ರ ಸೆಪ್ಟೆಂಬರ್ ವರೆಗೆ ಟ್ರಂಪ್ ಒಡೆತನದ ಒಟ್ಟು ಆಸ್ತಿ 3.1 ಬಿಲಿಯನ್ ಡಾಲರ್ ಮೌಲ್ಯದ್ದೆಂದು ತಿಳಿದು ಬಂದಿದೆ.
ಈ ಅಪಾರ ಸಂಪತ್ತಿನೊಂದಿಗೆ ಮತ್ತೊಂದು ಪ್ರಮುಖ ಜವಾಬ್ದಾರಿಯೂ ಎರಿಕ್ ಹೆಗಲೇರಿದೆ. ಹೌದು ಅವರನ್ನು ಕಂಪೆನಿಯ ಆಡಳಿತ ಮಂಡಳಿಯ ಕಾರ್ಯಕಾರಿ ನಿರ್ದೆಶಕರನ್ನಾಗಿ ನೇಮಕ ಮಾಡಲಾಗಿದೆ. ಅಂದ್ರೆ ಸಂಪತ್ತಿನೊಂದಿಗೆ, ಅದನ್ನು ಮತ್ತಷ್ಟು ಹೆಚ್ಚು ಮಾಡಬೇಕಾದ ಜಬವಾಬ್ದಾರಿಯೂ ಇದೆ. ಇನ್ನು ಎರಿಕ್ ಇನ್ಸ್ಟಾಗ್ರಾಂ ಅನ್ವಯ ಅವರು ರಿಹಾನಾ[ಪ್ರಖ್ಯಾತ ಗಾಯಕಿ, ನಟಿ ಹಾಗೂ ಫ್ಯಾಷನ್ ಡಿಸೈನರ್] ಹಾಗೂ ಬೆಲ್ಲಾ ಹದೀದ್ ಗೆಳೆಯ ಎಂದೂ ತಿಳಿದು ಬಂದಿದೆ. ಬೆಲ್ಲಾ ಹದೀದ್ ಕೆಲ ದಿನಗಳ ಹಿಂದಷ್ಟೇ ವಿಜ್ಞಾನದ ಅನ್ವಯ ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಪಟ್ಟ ಗಳಿಸಿದ್ದಾರೆ.
ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತೀ ಸುಂದರ ಮಹಿಳೆ!
ವಾಷಿಂಗ್ಟನ್ ನಲ್ಲಿ ಜನಿಸಿದ ಎರಿಕ್ ಕಲಿತದ್ದು ಚೀನಾದಲ್ಲಿ
ಇನ್ನು ಎರಿಕ್ ಜನಿಸಿದ್ದು ವಾಷಿಂಗ್ಟನ್ ನಲ್ಲಿ ಆದರೆ ಶಿಕ್ಷಣ ಮಾತ್ರ ಹಾಂಕಾಂಗ್ ಹಾಗೂ ಬೀಜಿಂಗ್ ನಲ್ಲಿ ಪೂರೈಸಿದ್ದಾರೆ. ಇತ್ತೀಚೆಗಷ್ಟೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಪದವಿಯನ್ನೂ ಪಡೆದಿದ್ದಾರೆ.