ಆಲಿಬಾಬ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಕೃತ್ಯ ಸೋರಿಕೆ ಮಾಡಿದ 10 ಉದ್ಯೋಗಿಗಳು ವಜಾ!

By Suvarna NewsFirst Published Aug 30, 2021, 3:23 PM IST
Highlights
  • ಆಲಿಬಾಬ ಕಂಪನಿ ಮಾಜಿ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಮಾಹಿತಿ ಸೋರಿಕೆ ಆರೋಪ
  • ಆಲಿಬಾಬ್ 10 ಉದ್ಯೋಗಿಗಳ ಅಮಾನತು ಮಾಡಿದ ಕಂಪನಿ
  • ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳಾ ಉದ್ಯೋಗಿ

ಬೀಜಿಂಗ್(ಆ.30):  ವಿಶ್ವದಲ್ಲಿ ಅತೀ ಹೆಚ್ಚು ವಹಿವಾಟು ನಡೆಸುವ ಕಂಪನಿಗಳ ಪೈಕಿ ಚೀನಾದ ಆಲಿಬಾಬ ಕಂಪನಿಯೂ ಸ್ಥಾನ ಪಡೆದುಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವಹಿವಾಟು ನಡೆಸುವ ಆಲಿಬಾಬ ಕಂಪನಿ ಮ್ಯಾನೇಜರ್ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪ ಭಾರಿ ಸದ್ದು ಮಾಡಿತ್ತು. ಇದೀಗ ಈ ಲೈಂಗಿಕ ದೌರ್ಜನ್ಯ ಮಾಹಿತಿ ಸಾರ್ವಜನಿಕವಾಗಿ ಸೋರಿಕೆ ಮಾಡಿದ ಆರೋಪದಡಿ ಆಲಿಬಾಬ ಕಂಪನಿ ತನ್ನ 10 ಉದ್ಯೋಗಿಗಳನ್ನು ವಜಾ ಮಾಡಿದೆ.

ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

ಆಲಿಬಾಬಾ ಮಾಜಿ ಮ್ಯಾನೇಜರ್ ವಿರುದ್ಧ ಮಹಿಳಾ ಉದ್ಯೋಗಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಳು. ಈ ಪ್ರಕರಣ ವಿಶ್ವದಲ್ಲಿ ಭಾರಿ ಸಚಂಲನ ಮೂಡಿಸಿತ್ತು. ಈ ಮಹಿಳಾ ಉದ್ಯೋಗಿ ತನಗಾದ ಲೈಂಗಿಕ ದೌರ್ಜನ್ಯ ಕುರಿತ ಫೋನ್ ಚಾಟ್ ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಈ ಪೋಸ್ಟ್‌ಗಳನ್ನು ಕಂಪನಿಯ 10 ಉದ್ಯೋಗಿಗಳು ಶೇರ್ ಮಾಡಿಕೊಂಡಿದ್ದರು. ಇಷ್ಟೇ ಅಲ್ಲ ಈ ಲೈಂಗಿಕ ದೌರ್ಜನ್ಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡಿಸಿದ್ದರು. ಹೀಗಾಗಿ 10 ಉದ್ಯೋಗಿಗಳನ್ನು ಆಲಿಲಾಬಾ ಕಂಪನಿ ವಜಾ ಮಾಡಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

2 ತಿಂಗಳಿನಿಂದ ನಾಪತ್ತೆಯಾಗಿದ್ದ ಜಾಕ್‌ ಮಾ ಪತ್ತೆ!

ಮಹಿಳಾ ಉದ್ಯೋಗಿ ತನಗಾದ ಲೈಂಗಿಕ ದೌರ್ಜನ್ಯ ಕುರಿತು 10 ಪುಟಗಳ ಪೋಸ್ಟ್ ಮಾಡಿದ್ದಳು. ಕೆಲ ಚಾಟಿಂಗ್ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಳು. ಈ ಎಲ್ಲಾ ಪೋಸ್ಟ್‌ಗಳನ್ನು 10 ಉದ್ಯೋಗಿಗಳು ಶೇರ್ ಮಾಡಿಕೊಂಡು ಹೆಚ್ಚಿನ ಪ್ರಚಾರ ಮಾಡಿದ್ದಾರೆ. ಇದು ಕಂಪನಿ ಇಂಟರ್ನಲ್ ಪಾಲಿಸಿಗೆ ವಿರುದ್ಧವಾಗಿದೆ. ಹೀಗಾಗಿ 10 ಉದ್ಯೋಗಿಗಳ ಮೇಲೆ ಕ್ರಮ ಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

10 ಉದ್ಯೋಗಿಗಳು ಹಂಚಿಕೊಂಡ ಮಹಿಳಾ ಉದ್ಯೋಗಿಯ ಲೈಂಗಿಕ ದೌರ್ಜನ್ಯ ಆರೋಪದ ಪೋಸ್ಟ್‌ಗೆ ಕಮೆಂಟ್ ಮಾಡಿದ ಇತರ ಮೂವರು ಉದ್ಯೋಗಿಗಳಿಗೆ ಕಂಪನಿ ವಾರ್ನಿಂಗ್ ನೀಡಿದೆ. ಆದರೆ ಆಲಿಬಾಬ ಕಂಪನಿ ಈ ವರದಿಯನ್ನು ನಿರಾಕರಿಸಿದೆ. ಈ ರೀತಿಯ ಬೆಳವಣಿಗೆ ಕಂಪನಿಯಲ್ಲಿ ನಡೆದಿಲ್ಲ. 10 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಆದರೆ ಕಾರಣ ಇದಲ್ಲ ಎಂದು ಆಲಿಬಾಬ ಕಂಪನಿ ಸ್ಪಷ್ಟನೆ ನೀಡಿದೆ.

ಆಲಿಬಾಬಾ ಕಂಪನಿ ಮಹಿಳಾ ಉದ್ಯೋಗಿ ಆಗಸ್ಟ್ ತಿಂಗಳ ಆರಂಭದಲ್ಲಿ ತನಗಾದ ಲೈಂಗಿಕ ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಳು. ಕಂಪನಿ ಮ್ಯಾನೇಜರ್ ಹಾಗೂ ಕ್ಲೈಂಟ್ ತನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಈ ಕುರಿತು ಮಾನವ ಸಂಪನ್ಮೂಲ(HR)ವಿಭಾಗಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ತನ್ನನ್ನೇ ಬೆದರಿಸಿ ಕೆಲಸದಿಂದ ತೆಗೆದು ಹಾಕುವುದಾಗಿ ಎಚ್ಚರಿಸಿದ್ದಾರೆ ಎಂದು ಹೇಳಿಕೊಂಡಿದ್ದಳು.

ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾಗೆ ಹರ್ಯಾಣ ಕೋರ್ಟ್‌ ಸಮನ್ಸ್‌!

ಮಹಿಳಾ ಉದ್ಯೋಗಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವು ಮಾಧ್ಯಮಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಸದ್ದು ಮಾಡಿತು. ಇದರ ಬೆನ್ನಲ್ಲೇ ಆಲಿಬಾಬ ಕಂಪನಿ ಆಂತರಿಕ ತನಿಖೆಗೆ ಆದೇಶಿಸಿತು. ಇಷ್ಟೇ ಅಲ್ಲ ಮ್ಯಾನೇಜರ್‌ನನ್ನು ಅಮಾನತು ಮಾಡಿತು. ಆತಂಕರಿಕ ತನಿಖೆಯಲ್ಲಿ ಮಹಿಳಾ ಉದ್ಯೋಗಿಯ ಫೇಸ್‌ಬುಕ್ ಪೋಸ್ಟ್ ವೈರಲ್ ಮಾಡಿದ ಹಾಗೂ ಮಾಧ್ಯಮದ ಕೈಗೆ ಸಿಗುವಂತೆ ಮಾಡಿರುವುದು ಆಲಿಬಾಬ ಕಂಪನಿಯ 10 ಉದ್ಯೋಗಿಗಳು ಎಂದು ಉಲ್ಲೇಖಿಸಲಾಗಿದೆ. ಈ ವರದಿ ಆಧರಿಸಿ ಆಲಿಬಾಬ ಕಂಪನಿ ಕ್ರಮ ತೆಗೆದುಕೊಂಡಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ.

click me!