ಅಲಿಬಾಬಾ ಅಧ್ಯಕ್ಷ ಸ್ಥಾನದಿಂದ ಇಂದು ಜಾಕ್ ಮಾ ನಿವೃತ್ತಿ| ಈ ಹಿಂದೆ ಘೋಷಿಸಿದಂತೆ ಮಾ ನಿವೃತ್ತಿ| ಸಂಪಾದನೆಯನ್ನು ಶಿಕ್ಷಣಕ್ಕೆ ವಿನಿಯೋಗಿಸುವ ಸಾಧ್ಯತೆ
ಶಾಂಘೈ[ಸೆ.10]: ಜಾಗತಿಕ ಉದ್ಯಮ ದೈತ್ಯ ದೈತ್ಯ ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ ಮಂಗಳವಾರ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈ ಹಿಂದೆಯೇ ಘೋಷಿಸಿದಂತೆ ತಮ್ಮ 55ನೇ ಹುಟ್ಟು ಹಬ್ಬದಂದೇ ಅಧ್ಯಕ್ಷ ಸ್ಥಾನ ತ್ಯಜಿಸಲಿದ್ದು, ಸಲಹಾ ಕಾರ್ಯಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಚೆಂಜ್ ಇಲ್ಲ ಅನ್ನೋಂಗಿಲ್ಲ.. ಭಿಕ್ಷುಕರ ಮೇಲೆ ಅಲಿಬಾಬಾ ಮ್ಯಾಜಿಕ್!
ಚೀನಾದ ಶ್ರೀಮಂತ ಉದ್ಯಮಿಯಾಗಿರುವ ಜಾಕ್ ಮಾ, ಉದ್ಯಮಕ್ಕೆ ಕಾಲಿಡುವ ಮುನ್ನ ಆಂಗ್ಲ ಶಿಕ್ಷಕರಾಗಿದ್ದರು. ಉದ್ಯಮಕ್ಕೆ ಕಾಲಿಟ್ಟಬಳಿಕವೂ ಶಾಲಾ ಕಾಲೇಜುಗಳಿಗೆ ತೆರಳಿ ಪಾಠ ಪ್ರವಚನ ಮಾಡುತ್ತಿದ್ದ ಅವರು, ನಿವೃತ್ತಿ ಬಳಿಕ ಶಿಕ್ಷಣ ಕ್ಷೇತ್ರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟು 3 ಲಕ್ಷ ಕೋಟಿ ರು.ಗಳ ಒಡೆಯನಾಗಿರುವ ಜಾಕ್ ಮಾ ತನ್ನ ಸ್ಪೂರ್ತಿ ಚಿಲುಮೆ ಬಿಲ್‌ಗೇಟ್ಸ್‌ರಂತೆ ಸಂಪಾದನೆಯನ್ನು ಸಾಮಾಜಿಕ ಚಟುವಟಿಕೆಗೆ ವಿನಿಯೋಗಿಸುವ ಸಾಧ್ಯತೆ ಇದ್ದು, ಬಹುಪಾಲು ಹಣವನ್ನು ಶಿಕ್ಷಣಕ್ಕೆ ಮೀಸಲಿಡಲಿದ್ದಾರೆ ಎನ್ನಲಾಗಿದೆ. 1999ರಲ್ಲಿ 17 ಜನ ಸ್ನೇಹಿತರು ಆರಂಭಿಸಿದ್ದ ಚಿಲ್ಲರೆ ಉದ್ಯಮ ಈಗ ಜಗತ್ತಿನ 200 ದೇಶಗಳಲ್ಲಿ, ವಿವಿಧ ಕ್ಷೇತ್ರದಲ್ಲಿ ಹರಡಿಕೊಂಡಿದೆ.
ವಾರಕ್ಕೆ 6 ದಿನ 6 ಬಾರಿ ಸೆಕ್ಸ್: ಸಿಬ್ಬಂದಿಗೆ ಜಾಕ್ ಮಾ ಕರೆ!
ಜಾಕ್ ಮಾ ಅವರು ಕಂಪನಿಯ ಹೊಣೆಯನ್ನು ತಮ್ಮ ನಂಬಿಕಸ್ಥ ಸಿಇಒ ಡೇನಿಯಲ್ ಝಾಂಗ್ ಮತ್ತು ಸಹ ಸಂಸ್ಥಾಪಕ ಜೋಸೆಫ್ ಅವರಿಗೆ ವಹಿಸಿಕೊಟ್ಟು ತೆರಳುತ್ತಿದ್ದಾರೆ.