ಅಕ್ಷಯ ತೃತೀಯ: ಆನ್‌ಲೈನಲ್ಲಿ ಚಿನ್ನ ಕೊಂಡು, ಕ್ಯಾಶ್ ಬ್ಯಾಕ್ ಪಡೀರಿ

Published : Apr 26, 2025, 05:39 PM ISTUpdated : Apr 27, 2025, 07:53 AM IST
ಅಕ್ಷಯ ತೃತೀಯ: ಆನ್‌ಲೈನಲ್ಲಿ ಚಿನ್ನ ಕೊಂಡು, ಕ್ಯಾಶ್ ಬ್ಯಾಕ್ ಪಡೀರಿ

ಸಾರಾಂಶ

ಅಕ್ಷಯ ತೃತೀಯದಂದು ಚಿನ್ನ ಖರೀದಿ ದುಬಾರಿಯಾಗಿದೆ. ಆದರೆ ಫೋನ್‌ಪೇ, ಪೇಟಿಎಂನಲ್ಲಿ ಡಿಜಿಟಲ್ ಚಿನ್ನ ಖರೀದಿಸಿದರೆ ಕ್ಯಾಶ್‌ಬ್ಯಾಕ್, ರಿಯಾಯಿತಿ ಲಭ್ಯ. ಫೋನ್‌ಪೇನಲ್ಲಿ ₹2000 ಕ್ಕಿಂತ ಹೆಚ್ಚಿನ ಚಿನ್ನ ಖರೀದಿಸಿದರೆ 1% ಕ್ಯಾಶ್‌ಬ್ಯಾಕ್. ಪೇಟಿಎಂನಲ್ಲಿ ₹500ಕ್ಕಿಂತ ಹೆಚ್ಚಿನ ಹೂಡಿಕೆಗೆ 5% ರಿವಾರ್ಡ್ ಪಾಯಿಂಟ್ಸ್ ಸಿಗಲಿದೆ. ಕ್ಯಾರೆಟ್‌ಲೇನ್‌ನಲ್ಲಿ ರಿಡೀಮ್ ಮಾಡಿದರೆ ಹೆಚ್ಚಿನ ರಿಯಾಯಿತಿಗಳು ಲಭ್ಯ.

ಈ ಬಾರಿ ಏಪ್ರಿಲ್ 30 ರಂದು ಅಕ್ಷಯ ತೃತೀಯ (Akshaya Tritiya) ಆಚರಿಸಲಾಗ್ತಿದೆ.  ಅಕ್ಷಯ ತೃತೀಯದಂದು ಬಂಗಾರ (Gold), ಬೆಳ್ಳಿ, ವಜ್ರ (diamond)ದಂತ ದುಬಾರಿ ವಸ್ತುಗಳನ್ನು ಮನೆಗೆ ತರೋದು ಸಂಪ್ರದಾಯ. ಈ ವರ್ಷ ಅಕ್ಷಯ ತೃತೀಯದಂದು ಬಂಗಾರ ಖರೀದಿ ಮಾಡೋದು ಕನಸಿನ ಮಾತು ಎನ್ನುವಂತಾಗಿದೆ. ಜನರು ಸಾಂಪ್ರದಾಯದಂತೆ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ಖರೀದಿ ಮಾಡ್ತಿದ್ದರು. ಈಗ ಚಿನ್ನದ ಬೆಲೆ ಗಗನಕ್ಕೇರಿರುವ ಕಾರಣ, ಚಿನ್ನ ಮುಟ್ಟಿದ್ರೆ ಕೈ ಸುಡುತ್ತೆ ಎನ್ನುವ ಸ್ಥಿತಿ ಇದೆ. ಸಂಪ್ರದಾಯ ಮುರಿಯುವಂತಿಲ್ಲ, ಬಂಗಾರ ಖರೀದಿಗೆ ಹಣ ಸಾಲ್ತಿಲ್ಲ ಎನ್ನುವವರಿಗೆ ನೆಮ್ಮದಿ ಸುದ್ದಿಯೊಂದಿದೆ. ನೀವು ಮನೆಯಲ್ಲೇ ಕುಳಿತು ಚಿನ್ನ ಖರೀದಿ ಮಾಡುವ ಜೊತೆಗೆ ಭರ್ಜರಿ ಕ್ಯಾಶ್ ಬ್ಯಾಕ್ ಪಡೆಯಬಹುದು. ಜೊತೆಗೆ ಒಂದಿಷ್ಟು ವಿಶೇಷ ಉಡುಗೊರೆ ನಿಮಗೆ ಲಭ್ಯವಿದೆ. ಯಾರು ಕ್ಯಾಶ್ ಬ್ಯಾಕ್ ನೀಡ್ತಿದ್ದಾರೆ, ಏನೆಲ್ಲ ಆಫರ್ ಇದೆ ಎನ್ನುವ ಮಾಹಿತಿ ಇಲ್ಲಿದೆ. 

ಫೋನ್ ಪೇ  (PhonePe )ನಲ್ಲಿ ಭರ್ಜರಿ ಆಫರ್ : ಅಕ್ಷಯ ತೃತೀಯದಂದು ಫೋನ್ ಪೇ ನಿಮಗೆ ಆಫರ್ ನೀಡ್ತಿದೆ. ನೀವು ಡಿಜಿಟಲ್ ಚಿನ್ನವನ್ನು ಖರೀದಿ ಮಾಡ್ಬೇಕು. ನೀವು 24 ಕ್ಯಾರೆಟ್ ಅಂದರೆ ಶೇಕಡಾ 99.99 ರಷ್ಟು ಶುದ್ಧ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಿದ್ರೆ ನಿಮಗೆ ಶೇಕಡಾ ಒಂದರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಇದಕ್ಕೊಂದು ಷರತ್ತನ್ನು ಫೋನ್ ಪೇ ವಿಧಿಸಿದೆ. ನೀವು ಒಂದೇ ಬಾರಿ 2,000 ರೂಪಾಯಿ  ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಚಿನ್ನವನ್ನು ಖರೀದಿಸಿದರೆ ಮಾತ್ರ ನಿಮಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ. ಅಕ್ಷಯ ತೃತೀಯದ ದಿನ ನೀವು ಮಾಡಿದ ಖರೀದಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ,  ಇದು SIP ಆಧಾರಿತ ಖರೀದಿಗೆ ಸಿಗೋದಿಲ್ಲ. 

ಇಳಿಕೆ ಹಾದಿಯಲ್ಲಿ ಚಿನ್ನ, ಕಡಿಮೆಯಾದ ಬಂಗಾರದ ಬೆಲೆ; 5

ಇಷ್ಟೇ ಅಲ್ಲ, ಕ್ಯಾರೆಟ್ಲೇನ್ ಅಂಗಡಿ ಅಥವಾ ವೆಬ್ಸೈಟ್ನಲ್ಲಿ ಡಿಜಿಟಲ್ ಚಿನ್ನವನ್ನು ರಿಡೀಮ್ ಮಾಡುವ ಗ್ರಾಹಕರು ಉತ್ತಮ ರಿಯಾಯಿತಿ ಪಡೆಯಲಿದ್ದಾರೆ. ಚಿನ್ನದ ನಾಣ್ಯಗಳ ಮೇಲೆ ಶೇಕಡಾ 2 ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಸ್ಟಡ್ಡ್ ಆಭರಣಗಳ ಮೇಲೆ ಶೇಕಡಾ 5 ರಷ್ಟು ರಿಯಾಯಿತಿ ಮತ್ತು ಸ್ಟಡ್ಡ್ ಇಲ್ಲದ ಆಭರಣಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿ ಸಿಗಲಿದೆ. ಫೋನ್ ಪೇ ಚಿನ್ನವನ್ನು MMTC-PAMP, SafeGold ಮತ್ತು CaratLane ನಂತಹ ವಿಶ್ವಾಸಾರ್ಹ ಬ್ರ್ಯಾಂಡ್ಗಳಿಂದ ಪಡೆಯಲಾಗುತ್ತದೆ. ಇದು ಶುದ್ಧತೆ ಮತ್ತು ಸುರಕ್ಷತೆ ಎರಡನ್ನೂ ಖಾತರಿಪಡಿಸುತ್ತದೆ. ನೀವು ಎಸ್ ಐಪಿ ಮೂಲಕವೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಇದು ಕೇವಲ 5 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 

ಪೇಟಿಎಂ ಆಫರ್ : ಡಿಜಿಟಲ್ ಚಿನ್ನದ ಉಳಿತಾಯವನ್ನು ಉತ್ತೇಜಿಸಲು ಪೇಟಿಎಂ 'ಗೋಲ್ಡನ್ ರಶ್' ಅಭಿಯಾನವನ್ನು ಸಹ ಪ್ರಾರಂಭಿಸಿದೆ. ಪೇಟಿಎಂ ಗೋಲ್ಡ್ನಲ್ಲಿ 500 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಬಳಕೆದಾರರಿಗೆ ವಹಿವಾಟಿನ ಮೌಲ್ಯದ ಶೇಕಡಾ 5 ರಷ್ಟು ರಿವಾರ್ಡ್ ಪಾಯಿಂಟ್ ಗಳಾಗಿ ನೀಡಲಾಗುವುದು.   

ಚಿನ್ನಕ್ಕೆ ಇನ್ನು ಬೆಲೆಯಿಲ್ಲ! ಅಕ್ಷಯ ತೃತೀಯದಂದು ಕಡಿಮೆ ಬೆಲೆಗೆ

ಫೋನ್‌ ಪೇನಲ್ಲಿ ಚಿನ್ನ ಖರೀದಿ ಹೇಗೆ? : ಮೊದಲು ಫೋನ್ ಪೇ  ಅಪ್ಲಿಕೇಶನ್ ತೆರೆಯಿರಿ.  ಚಿನ್ನದ ಸೆಕ್ಷನ್ ಗೆ ಹೋಗಿ.  ಚಿನ್ನದ ಪೂರೈಕೆದಾರರನ್ನು (MMTC-PAMP, SafeGold, CaratLane) ಆರಿಸಿ. ಏಪ್ರಿಲ್ 30, 2025 ರಂದು ಒಂದು ಬಾರಿಯ ವಹಿವಾಟಿನಲ್ಲಿ 2,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನವನ್ನು ಖರೀದಿಸಿ. ಯುಪಿಐ,ವ್ಯಾಲೆಟ್ ಅಥವಾ ಉಡುಗೊರೆ ಕಾರ್ಡ್ ಬಳಸಿ ಹಣವನ್ನು ಪಾವತಿಸಿ. ಶೇಕಡಾ 1 ರಷ್ಟು ಅಂದ್ರೆ 2,000 ವರೆಗೆ ಕ್ಯಾಶ್ಬ್ಯಾಕ್ ಪಡೆಯಿರಿ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ