Airtel Vs Jio Vs Vi: ಅತ್ಯಂತ ಕಡಿಮೆ ಬೆಲೆಯಲ್ಲಿ OTT ಪ್ಲಾನ್ ನೀಡೋರು ಯಾರು?

Published : Jul 22, 2025, 03:09 PM IST
Airtel Vs Jio Vs Vi:

ಸಾರಾಂಶ

ಏರ್‌ಟೆಲ್, ಜಿಯೋ ಮತ್ತು Vi ತಮ್ಮ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ OTT ಸಬ್‌ಸ್ಕ್ರಿಪ್ಷನ್‌ಗಳನ್ನು ನೀಡುತ್ತಿವೆ. ಯಾವ ಕಂಪನಿಯ ಪ್ಲಾನ್ ಹೆಚ್ಚು ಡೇಟಾ, OTT ಪ್ರಯೋಜನಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತದೆ ಎಂಬುದನ್ನು ಹೋಲಿಸಲಾಗಿದೆ.

ನವದೆಹಲಿ: ಇಂದು ಜನರು OTTಯ ಹುಚ್ಚರಾಗುತ್ತಿದ್ದಾರೆ. OTTಯಲ್ಲಿಯೇ ಇಂದು ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದನ್ನರಿತರಿಸುವ ಭಾರತದ ನಾಲ್ಕು ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಪ್ಲಾನ್ ಜೊತೆಯಲ್ಲಿ ಹಲವು OTT ಆಫರ್ ನೀಡುತ್ತಿವೆ. ಈ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿಯೂ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೈಲ್ ಮತ್ತು ವೊಡಾಫೋನ್ ಐಡಿಯಾ ಅಗ್ಗದ ದರದಲ್ಲಿ ಪ್ರಿಪೇಯ್ಡ್ ಪ್ಲಾನ್ ನೀಡೋದರ ಜೊತೆಯಲ್ಲಿ ಉಚಿತವಾಗಿ OTT ಆಕ್ಸೆಸ್ ನೀಡುತ್ತಿವೆ. ಈ ಮೂರು ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಯಾರು ಉತ್ತಮ ಪ್ಲಾನ್ ನೀಡುತ್ತಿದ್ದಾರೆ ಎಂದು ನೋಡೋಣ ಬನ್ನಿ.

Airtel Rs.301 Prepaid Plan

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್, 301 ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ OTT ಆಕ್ಸೆಸ್ ನೀಡುತ್ತಿದೆ. 301 ರೂ. ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 1GB 5G ಡೇಟಾ ನೀಡುತ್ತದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ವಿಶೇಷವಾಗಿ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಜಿಯೋ ಸಿನಿಮಾ ಆಕ್ಸೆಸ್ ಲಭ್ಯವಾಗುತ್ತದೆ. ಈ ಪ್ಲಾಟ್‌ಫಾರಂನಲ್ಲಿ ಸಿನಿಮಾಗಳ ಜೊತೆ ಸ್ಫೋರ್ಟ್ಸ್ ಆನಂದಿಸಬಹುದಾಗಿದೆ. ಇನ್ನುಳಿದಂತೆ ಪ್ರತಿದಿನ ಡೇಟಾ ಖಾಲಿಯಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 16kbps ಗೆ ಇಳಿಯುತ್ತದೆ.

Reliance Jio Rs. 299 Prepaid Plan

ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ 299 ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ OTT ಆಕ್ಸೆಸ್ ನೀಡುತ್ತಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ದಿನಕ್ಕೆ 1.5GB ಟ್ರೂ 5G ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, ಪ್ರತಿದಿನ ಫ್ರಿಯಾಗಿ 100 ಎಸ್ಎಂಎಸ್ ಕಳುಹಿಸಬಹುದಾಗಿದೆ. ಜಿಯೋದ ಯಾವುದೇ ಪ್ರಿಪೇಯ್ಡ್ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೂ ನಿಮಗೆ ಜಿಯೋಸಿನಿಮಾದ ಆಕ್ಸೆಸ್ ಉಚಿತವಾಗಿ ಲಭ್ಯವಾಗುತ್ತದೆ.

ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರು JioTV ಮತ್ತು Jio AICloud (50GB ಸ್ಟೋರೇಜ್) ಉಚಿತ ಆಕ್ಸೆಸ್ ಪಡೆದುಕೊಳ್ಳಬಹುದಾಗಿದೆ. ದಿನದ ಡೇಟಾ ಲಿಮಿಟ್ ಖಾಲಿಯಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 64kbps ಆಗುತ್ತದೆ. ಈ OTT ಆಕ್ಸೆಸ್ ಮುಂದುವರಿಸಲು ಈ ಪ್ಲಾನ್ ವ್ಯಾಲಿಡಿಟಿ ಮುಗಿದ 48 ಗಂಟೆಯೊಳಗೆ ಈ ರೀಚಾರ್ಜ್ ಮಾಡಿಕೊಳ್ಳಬೇಕು.

Vodafone Idea Rs. 239 Prepaid Plan

ವೊಡಾಫೋನ್ ಐಡಿಯಾ ಕಡಿಮೆ ಬೆಲೆಯಲ್ಲಿ OTT ಆಕ್ಸೆಸ್ ನೀಡುತ್ತಿದೆ. ಕೇವಲ 239 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಒಂದು ತಿಂಗಳ ಅವಧಿಗೆ ಜಿಯೋಸಿನಿಮಾ ಆಕ್ಸೆಸ್ ನೀಡುತ್ತಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಟ್ಟು ಡೇಟಾ 2GB, ಒಟ್ಟು 300 ಎಸ್ಎಂಎಸ್ ನೀಡುತ್ತಿದೆ. ಈ ಪ್ಲಾನ್‌ನಲ್ಲಿ 28 ದಿನಗಳವರೆಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು.

ರಿಲಯನ್ಸ್ ಮತ್ತು ಏರ್‌ಟೆಲ್ ನೀಡುವಂತೆ ಪ್ರತಿದಿನ ಡೇಟಾ ಪ್ಯಾಕ್‌ನ್ನು ವೊಡಾಫೋನ್ ಐಡಿಯಾ ನೀಡುವುದಿಲ್ಲ. 239 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಕೇವಲ 2GB ಡೇಟಾ ನೀಡುತ್ತದೆ. ನಂತರದ ಬಳಕೆಗೆ ಡೇಟಾ ಶುಲ್ಕ ರೂ. 0.5/MB ಆಗಿದೆ. ನಿಮಗೆ ಹೆಚ್ಚಿನ ಡೇಟಾ ಅಗತ್ಯವಿದ್ದರೆ, Vi ಯ ರೂ. 399 ಯೋಜನೆ ಉತ್ತಮವಾಗಿರುತ್ತದೆ, ಇದರಲ್ಲಿ 2GB ದೈನಂದಿನ ಡೇಟಾ, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು ಅದೇ ಒಂದು ತಿಂಗಳ OTT ಚಂದಾದಾರಿಕೆ ಸೇರಿವೆ.

ಮೂರರಲ್ಲಿ ಯಾವ ಪ್ಲಾನ್ ಬೆಸ್ಟ್?

ಏರ್‌ಟೆಲ್‌ನ 301 ರೂ. ಯೋಜನೆ ಓಕೆ ಅಂತಾ ಹೇಳಿದರೂ ಇದು ಕೊಂಚ ದುಬಾರಿಯಾಗುತ್ತದೆ. ವೊಡಾಫೋನ್ ಐಡಿಯಾ 239 ರೂ. ಗೆ ಕಡಿಮೆ ಬೆಲೆ ಹೊಂದಿದ್ದರೆ, ಡೇಟಾದ ಲಾಭ ಗ್ರಾಹಕರಿಗೆ ಲಭ್ಯವಾಗಲ್ಲ. ರಿಲಯನ್ಸ್ ಜಿಯೋದ 299 ರೂ. ಯೋಜನೆಯು ಉತ್ತಮ ಡೇಟಾ, ಮೂರು ತಿಂಗಳ OTT ಪ್ರವೇಶ, JioTV ಮತ್ತು ಕ್ಲೌಡ್ ಸ್ಟೋರೇಜ್‌ನೊಂದಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನೀವು OTT ಮತ್ತು ಡೇಟಾ ಎರಡರ ಉತ್ತಮ ಸಂಯೋಜನೆಯನ್ನು ಬಯಸಿದರೆ, ಜಿಯೋದ 299 ರೂ. ಯೋಜನೆಯು ಅತ್ಯಂತ ಸಮಂಜಸವಾದ ಆಯ್ಕೆಯಾಗಿದೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!