ರಿಲಯನ್ಸ್, ಜಿಯೋ ಮಾತ್ರವಲ್ಲ: ಮುಕೇಶ್ ಅಂಬಾನಿ ಒಡೆತನದಲ್ಲಿರೋ ಕಂಪನಿಗಳ ಹೆಸರು ಕೇಳಿದ್ರೆ ಶಾಕ್ ಆಗ್ತೀರಿ

Published : Jul 22, 2025, 02:12 PM ISTUpdated : Jul 22, 2025, 02:14 PM IST
Mukesh Ambani

ಸಾರಾಂಶ

The secret of Mukesh Ambani's empire: ಏಷ್ಯಾದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ವ್ಯಾಪಾರ ಸಾಮ್ರಾಜ್ಯದ ಬಗ್ಗೆ ಒಂದು ನೋಟ. ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಹಿಡಿದು ಜಿಯೋವರೆಗೆ, ಅವರ ವ್ಯಾಪಾರದ ವಿಸ್ತಾರ ಮತ್ತು ಅವರ ದೈನಂದಿನ ಆದಾಯದ ಅಗಾಧತೆಯನ್ನು ತಿಳಿಯಿರಿ.

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ನಂಬರ್ ಒನ್ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್ ಅಂಬಾನಿ, 2024ರಲ್ಲಿ ಮಗ ಅನಂತ್ ಅಂಬಾನಿ ಮದುವೆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಬರೋಬ್ಬರಿ ಮೂರು ತಿಂಗಳ ಕಾಲ ನಡೆದ ಮದುವೆಗೆ ಜಾಗತೀಕ ಗಣ್ಯರೆಲ್ಲಾ ಭಾಗಿಯಾಗಿದ್ದರು. ಮಗನ ಮದುವೆಗಾಗಿ ಬರೋಬ್ಬರಿ 5 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರು ಎಂದು ವರದಿಯಾಗಿತ್ತು. ಮುಕೇಶ್ ಅಂಬಾನಿ ಎಲ್ಲಾ ವಲಯದಲ್ಲಿಯೂ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ.

ಕೆಲಸದ ವಿಷಯದಲ್ಲಿ ನೋ ಕಾಂಪ್ರಮೈಸ್

ಮುಕೇಶ್ ಅಂಬಾನಿ ಕೇವಲ ಒಂದೇ ಉದ್ಯಮವನ್ನು ನಂಬಿಕೊಂಡು ಕುಳಿತವರಲ್ಲ. ಒಂದು ವೇಳೆ ಹಾಗೆ ಒಂದೇ ಉದ್ಯಮ ಅಥವಾ ವಲಯದಲ್ಲಿದ್ದರೆ ದೇಶದ ನಂಬರ್ ಒನ್ ಶ್ರೀಮಂತ ಎಂಬ ಹಿರಿಮೆ ಅವರದ್ದಾಗುತ್ತಿರಲಿಲ್ಲ. ವಿವಿಧ ವಲಯಗಳಲ್ಲಿ ವಿಸ್ತರಿಸುವ ಎಲ್ಲಾ ವ್ಯವಹಾರದ ಮೇಲೆಯೂ ಮುಕೇಶ್ ಅಂಬಾನಿ ಅವರ ಕಣ್ಣೀಟ್ಟಿರುತ್ತಾರೆ. ವರದಿಗಳ ಪ್ರಕಾರ, ಪ್ರತಿನಿತ್ಯವೂ ಮುಕೇಶ್ ಅಂಬಾನಿ ತಮ್ಮ ಎಲ್ಲಾ ವ್ಯವಹಾರಗಳ ಸಂಕ್ಷಿಪ್ತ ಮಾಹಿತಿಯನ್ನು ತಪ್ಪದೇ ಪಡೆದುಕೊಳ್ಳುತ್ತಿರುತ್ತಾರೆ. ಹಾಗೆಯೇ ಕೆಲಸ ವಿಷಯದಲ್ಲಿ ಮುಕೇಶ್ ಅಂಬಾನಿ ಎಂದಿಗೂ ರಾಜಿ ಮಾಡಿಕೊಳ್ಳಲ್ಲ ಎಂದು ಹೇಳುತ್ತಾರೆ.

ಹಲವು ದೈತ್ಯ ಕಂಪನಿಗಳ ಮುಖ್ಯಸ್ಥ

ಮುಕೇಶ್ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ತೈಲ ಮತ್ತು ಪೆಟ್ರೋಕೆಮಿಕಲ್ಸ್‌ನಿಂದ ಡಿಜಿಟಲ್ ಮತ್ತು ಗ್ರಾಹಕ ಸೇವೆಗಳನ್ನು ನೀಡುತ್ತಿದೆ. ಅಂಬಾನಿ ಕೇವಲ ಒಂದೆರಡು ಅಲ್ಲ. ಸಾವಿರಾರು ಕೋಟಿ ಮೌಲ್ಯವುಳ್ಳ ಕಂಪನಿಗಳನ್ನು ಮುಕೇಶ್ ಅಂಬಾನಿ ಹೊಂದಿದ್ದಾರೆ. ಸಾಮಾನ್ಯ ಜನರು ಮುಕೇಶ್ ಅಂಬಾನಿ ಅಂದ್ರೆ ರಿಲಯನ್ಸ್ ಮತ್ತು ಜಿಯೋ ಎಂದು ಹೇಳುತ್ತಾರೆ. ಇವುಗಳನ್ನು ಹೊರತಾಗಿಯೂ ಮುಕೇಶ್ ಅಂಬಾನಿ ಹಲವು ದೈತ್ಯ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಭಾರತದ ಪ್ರಮುಖ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ಎಷ್ಟು ಕಂಪನಿಗಳನ್ನು ಹೊಂದಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಮುಕೇಶ್ ಅಂಬಾನಿ ಮಾಲೀಕತ್ವದ ಪ್ರಮುಖ ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಜಿಯೋ ಫೈನಾನ್ಷಿಯಲ್ ಸರ್ವೀಸಸ್, ನೆಟ್‌ವರ್ಕ್ 18, ವಯಾಕಾಮ್ 18, ಜಿಯೋ ಹಾಟ್‌ಸ್ಟಾರ್, ಜಿಯೋ ಸಾವನ್ ನೆಟ್‌ವರ್ಕ್, ಡೆನ್ ನೆಟ್‌ವರ್ಕ್ಸ್, ಹ್ಯಾಥ್‌ವೇ ಕೇಬಲ್ ಮತ್ತು ಡಾಟಾಕಾಮ್, ಇಂಡಿಪೆಂಡೆನ್ಸ್ ಸೇರಿದಂತೆ ಹಲವು ಕಂಪನಿಗಳ ಮಾಲೀಕರಾಗಿದ್ದಾರೆ ಮುಕೇಶ್ ಅಂಬಾನಿ.

ಇದಲ್ಲದೆ, ಅವರು ಜಸ್ಟ್ ಡಯಲ್, ಅಲೋಕ್ ಇಂಡಸ್ಟ್ರೀಸ್, ಸ್ಟರ್ಲಿಂಗ್ & ವಿಲ್ಸನ್ ನವೀಕರಿಸಬಹುದಾದ ಇಂಧನ, ಅರ್ಬನ್ ಲ್ಯಾಡರ್, ಜಿಟಿಪಿಎಲ್ ಹ್ಯಾಥ್‌ವೇ, ನೆಟ್‌ಮೆಡ್ಸ್, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ವ್ಯವಹಾರಗಳನ್ನು ಮುಕೇಶ್ ಅಂಬಾನಿ ನಿರ್ವಹಿಸುತ್ತಾರೆ. ರಿಲಯನ್ಸ್ ರಿಟೇಲ್, ಕ್ಯಾಂಪಾ ಕೋಲಾ, ಜಿಯೋ ಮಾರ್ಟ್, ಅಜಿಯೊ, ರಿಲಯನ್ಸ್ ಟ್ರೆಂಡ್ಸ್, ಸ್ಮಾರ್ಟ್ ಬಜಾರ್, ತಿರಾ ಬ್ಯೂಟಿ, ರಿಲಯನ್ಸ್ ಫ್ರೆಶ್‌ ಇವುಗಳುಭ ಭಾರತದ ಮೂಲೆ ಮೂಲೆಯನ್ನು ತಲುಪುವ ಮೂಲಕ ದೇಶದ ದೈತ್ಯ ಕಂಪನಿಗಳ ಪಟ್ಟಿಗೆ ಸೇರ್ಪಡೆಗೊಂಡಿವೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಇನ್ಫೋಮೀಡಿಯಾ ಪ್ರೆಸ್, ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್, ರಿಲಯನ್ಸ್ ಲೈಫ್ ಸೈನ್ಸಸ್, ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ಸ್ ನಂತಹ ಕಂಪನಿಗಳು ಮುಖೇಶ್ ಅಂಬಾನಿ ಅವರ ಹೆಸರಿನಲ್ಲಿವೆ.

ಮುಕೇಶ್ ಅಂಬಾನಿ ಆದಾಯ ಎಷ್ಟು?

ಜುಲೈ 20 ರವರೆಗಿನ ಫೋರ್ಬ್ಸ್‌ ಪ್ರಕಟಿಸಿದ ಮಾಹಿತಿ ಪ್ರಕಾರ, ಮುಕೇಶ್ ಅಂಬಾನಿಯವರ ನಿವ್ವಳ ಮೌಲ್ಯ $111.5 ಬಿಲಿಯನ್ ಆಗಿದೆ. ಫೋರ್ಬ್ಸ್‌ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 18ನೇ ಸ್ಥಾನದಲ್ಲಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಮುಕೇಶ್ ಅಂಬಾನಿ ಅವರ ಪ್ರತಿದಿನದ ಆದಾಯ 163 ಕೋಟಿ ರೂ. ಆಗಿದೆ. ಅಂದ್ರೆ ಪ್ರತಿ ನಿಮಿಷಕ್ಕೆ ಮುಕೇಶ್ ಅಂಬಾನಿ 1.5 ಕೋಟಿ ರೂ. ಗಳಿಸುತ್ತಾರೆ. ಸೆಕೆಂಡ್ ಲೆಕ್ಕದಲ್ಲಿ ಇದು 2.5 ಲಕ್ಷ ರೂ. ಆಗುತ್ತದೆ. ಮುಕೇಶ್ ಅಂಬಾನಿ ಕುಟುಂಬದೊಂದಿಗೆ ಮುಂಬೈನಲ್ಲಿರುವ ಆಂಟಲಿಯಾ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ಆಂಟಿಲಿಯಾ ನಿವಾಸದ ಮೌಲ್ಯ 15,000 ಕೋಟಿ ರೂ. ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!