ದೇಶದ 125 ನಗರಗಳಲ್ಲಿ 5G ಸೇವೆ ಪ್ರಾರಂಭಿಸಿದ ಏರ್ ಟೆಲ್; ಈಗ ಒಟ್ಟು 265 ನಗರಗಳಲ್ಲಿ ಲಭ್ಯ

By Suvarna NewsFirst Published Mar 6, 2023, 5:51 PM IST
Highlights

ಏರ್ ಟೆಲ್ 5ಜಿ ಸೇವೆಯನ್ನು ಹೊಸದಾಗಿ 125 ನಗರಗಳಿಗೆ ವಿಸ್ತರಿಸಿದೆ. ಇದರಿಂದ ಈಗ ದೇಶದ ಒಟ್ಟು 265 ನಗರಗಳಲ್ಲಿ ಏರ್ ಟೆಲ್ 5ಜಿ ಸೇವೆ ಲಭ್ಯವಾಗಲಿದೆ. 

ನವದೆಹಲಿ (ಮಾ.6): ಅತೀವೇಗದ 5ಜಿ ಸೇವೆಗಳನ್ನು ಭಾರ್ತಿ ಏರ್ ಟೆಲ್ ಸೋಮವಾರ ಇನ್ನೂ 125 ನಗರಗಳಲ್ಲಿ ಬಿಡುಗಡೆಗೊಳಿಸಿದೆ. ಇದರಿಂದ ದೇಶಾದ್ಯಂತ ಒಟ್ಟು 265 ನಗರಗಳಲ್ಲಿ ಏರ್ ಟೆಲ್ 5ಜಿ ಸೇವೆ ಲಭಿಸಲಿದೆ. ಟೆಲಿಕಾಮ್ ಸೇವೆಗಳ ಪೂರೈಕೆದಾರ ಏರ್ ಟೆಲ್ ಕಳೆದ ವಾರವಷ್ಟೇ ತನ್ನ 5ಜಿ ಬಳಕೆದಾರರ ಸಂಖ್ಯೆ 10 ಮಿಲಿಯನ್ ಗಡಿದಾಟಿದೆ ಎಂಬ ಮಾಹಿತಿ ನೀಡಿತ್ತು. 2022ರ ಅಕ್ಟೋಬರ್ ನಿಂದ ಏರ್ ಟೆಲ್ ದೇಶದಲ್ಲಿ ಹೈಸ್ಪೀಡ್ 5ಜಿ ಸೇವೆಗಳನ್ನು ಪ್ರಾರಂಭಿಸಿತ್ತು. ಇನ್ನು ಸರ್ಕಾರ ಏರ್ ಟೆಲ್ ಗೆ ಹೈಸ್ಪೀಡ್ 5ಜಿ ಸ್ಪೆಕ್ಟ್ರಂ ಹಂಚಿಕೆ ಪತ್ರವನ್ನು 2022ರ ಆಗಸ್ಟ್ ನಲ್ಲಿ ನೀಡಿತ್ತು. ಈ ಮೂಲಕ ದೇಶದಲ್ಲಿ 5ಜಿ ಸೇವೆಗಳನ್ನು ಒದಗಿಸಲು ಸಿದ್ಧಗೊಳ್ಳುವಂತೆ ತಿಳಿಸಿತ್ತು. '5ಜಿ ಇಂಟರ್ನೆಟ್ ಜಗತ್ತಿನಲ್ಲೇ ಕ್ರಾಂತಿಯುಂಟು ಮಾಡಿದೆ. ಸಂಪರ್ಕ ಹಾಗೂ ಸಂವಹನದ ಹೊಸ ಯುಗವನ್ನು ಸೃಷ್ಟಿಸಿದ್ದು, ದೇಶದ ಮಟ್ಟಿಗೆ ಬದಲಾವಣೆಯ ಹರಿಕಾರನಾಗಿದೆ. ಏರ್ ಟೆಲ್ ತನ್ನ ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ನೆಟ್ ವರ್ಕ್ ಹಾಗೂ ಸೇವೆಗಳನ್ನು ನೀಡುವ ಉದ್ದೇಶಕ್ಕೆ ಬದ್ಧವಾಗಿದೆ. ಇಂದು ನಾವು ಇನ್ನೂ 125 ನಗರಗಳಿಗೆ ನಮ್ಮ ಸೇವೆ ವಿಸ್ತರಿಸಿದ್ದೇವೆ' ಎಂದು ಭಾರ್ತಿ ಏರ್ ಟೆಲ್ ಸಿಟಿಒ ರಣ್ ದೀಪ್ ಸೆಖೋನ್ ತಿಳಿಸಿದ್ದಾರೆ.

'ದೇಶದಲ್ಲಿ 5ಜಿ ಸೇವೆಗಳನ್ನು ಒದಗಿಸಿದ ಮೊದಲ ಸಂಸ್ಥೆ ಏರ್ ಟೆಲ್ ಆಗಿದೆ. 2022ರ ಅಕ್ಟೋಬರ್ ನಲ್ಲಿ ಏರ್ ಟೆಲ್ 5ಜಿ ಸೇವೆಗಳನ್ನು ಪ್ರಾರಂಭಿಸಿತ್ತು. ಇಂದು ಇತರ ನಗರಗಳಿಗೆ ಇದರ ವಿಸ್ತರಣೆ  ದೇಶದ ಪ್ರತಿ ಏರ್ ಟೆಲ್ ಗ್ರಾಹಕರಿಗೆ ಅಲ್ಟ್ರಾಫಾಸ್ಟ್ ಏರ್ ಟೆಲ್ 5ಜಿ ಪ್ಲಸ್ ಸೇವೆಗಳನ್ನು ಒದಗಿಸುವ ನಮ್ಮ ಸಂಕಲ್ಪದ ಭಾಗವಾಗಿದೆ' ಎಂದು ಸೆಖೋನ್ ಹೇಳಿದ್ದಾರೆ. 

ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?

ದೂರಸಂಪರ್ಕ ಇಲಾಖೆ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ 1.50 ಲಕ್ಷ ಕೋಟಿ ರೂ. ಮೌಲ್ಯದ ಬಿಡ್ ಗಳನ್ನು ಸ್ವೀಕರಿಸಿತ್ತು. ಈ ಹರಾಜಿನಲ್ಲಿ, ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (ಜಿಯೋ) ಕಂಪನಿಯು ಗರಿಷ್ಠ ಮೊತ್ತದ ಬಿಡ್‌ ಮಾಡಿದೆ. ಈ ಹರಾಜಿನಲ್ಲಿ ಒಟ್ಟು 1,50,173 ಕೋಟಿ ಮೊತ್ತವನ್ನು ಜಿಯೋ ಬಿಡ್‌ ಮಾಡಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ 5G ಸ್ಪೆಕ್ಟ್ರಮ್‌ನ ಹರಾಜು ಮೊತ್ತವು, ಇದಕ್ಕೂ ಮುನ್ನ ಮಾರಾಟವಾದ 4ಜಿ ಸ್ಪೆಕ್ಟ್ರಮ್‌ ಹರಾಜಿನ ಮೊತ್ತಕ್ಕಿಂತ ದುಪ್ಪಟ್ಟು. ಇನ್ನು  2010ರಲ್ಲಿ ನಡೆದ 3ಜಿ ಹರಾಜು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು. ಕಳೆದ ವರ್ಷ 4ಜಿ ಸ್ಪೆಕ್ಟ್ರಮ್‌ ಹರಾಜಿನಿಂದ ಸರ್ಕಾರ, 77,815 ಕೋಟಿ ರೂಪಾಯಿ ಆದಾಯ ಪಡೆದಿದ್ದರೆ, 3ಜಿ ತರಂಗಾಂತರ  50,968.37 ಕೋಟಿ ರೂಪಾಯಿ ಮೊತ್ಯಕ್ಕೆ ಹರಾಜಾಗಿತ್ತು. 4ಜಿಗೆ ಹೋಲಿಸಿದರೆ 5ಜಿಯಲ್ಲಿ 10 ಪಟ್ಟು ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ ರೇಡಿಯೋ ಫ್ರೀಕ್ವೆನ್ಸಿಗಾಗಿ ಅತಿ ಹೆಚ್ಚು ಬಿಡ್ ಮಾಡಿದೆ. ಭಾರ್ತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ನಂತರದ ಸ್ಥಾನಗಳಲ್ಲಿವೆ.

8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

3ಜಿ 4ಜಿಗಿಂತ  5ಜಿ ಹೇಗೆ ಭಿನ್ನ?
5ಜಿ ಅನ್ನೋದು ಐದನೇ ತಲೆಮಾರಿನ ಮೊಬೈಲ್ ನೆಟ್ ವರ್ಕ್ ಆಗಿದ್ದು, ದೊಡ್ಡ ಪ್ರಮಾಣದ ಡೇಟಾವನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. 3ಜಿ ಹಾಗೂ 4ಜಿಗೆ ಹೋಲಿಸಿದರೆ 5ಜಿ ಅತ್ಯಂತ ಕಡಿಮೆ ಸುಪ್ತತೆ ಹೊಂದಿದೆ. ಇದು ವಿವಿಧ ವಲಯಗಳಿಗೆ ಸಂಬಂಧಿಸಿದ ಬಳಕೆದಾರರ ಅನುಭವವನ್ನು ಹೆಚ್ಚಿಸಲಿದೆ. 
 

click me!