
ಬೆಂಗಳೂರು: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ತನ್ನ ಅರ್ಹ ಪ್ರಿಪೇಯ್ಡ್ ಗ್ರಾಹಕರಿಗಾಗಿ ಅತ್ಯಂತ ಆಕರ್ಷಕ ಹಾಗೂ ಸೀಮಿತ ಅವಧಿಯ ಒಂದಕ್ಕೆ 1 ಉಚಿತ ಆಫರ್ ಅನ್ನು ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ತನ್ನ ಸ್ವಂತ 'ಏರ್‌ಟೆಲ್ ಥ್ಯಾಂಕ್ಸ್' ಆಪ್ ಮೂಲಕ ಆಯ್ದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಈ ಉಚಿತ ಕೊಡುಗೆಯನ್ನು ನೀಡುತ್ತಿದೆ.
ಇತ್ತೀಚೆಗೆ ದೇಶಾದ್ಯಂತ ಟೆಲಿಕಾಂ ದರಗಳ ಏರಿಕೆಯಾದ ಬಳಿಕ, ಗ್ರಾಹಕರು ಬೇರೆ ನೆಟ್‌ವರ್ಕ್‌ಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ತನ್ನ ಸ್ವಂತ ಆಪ್ ಬಳಕೆಯನ್ನು ಹೆಚ್ಚಿಸಲು ಏರ್‌ಟೆಲ್ ಈ ಆಕ್ರಮಣಕಾರಿ ತಂತ್ರವನ್ನು ರೂಪಿಸಿದೆ.
ಏರ್‌ಟೆಲ್‌ನ ಹೆಚ್ಚು ಜನಪ್ರಿಯವಾಗಿರುವ ₹349 ಪ್ರಿಪೇಯ್ಡ್ ಪ್ಲಾನ್ ದಿನನಿತ್ಯದ ಡೇಟಾ ಬಳಕೆದಾರರಿಗೆ ಸೂಕ್ತವಾಗಿದೆ.
28 ದಿನಗಳ ಮಾನ್ಯತೆ, ಪ್ರತಿದಿನ 2GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಹಾಗೂ 5G ನೆಟ್‌ವರ್ಕ್ ಲಭ್ಯವಿರುವ ಪ್ರದೇಶಗಳಲ್ಲಿ ಅನಿಯಮಿತ 5G ಡೇಟಾ.
ಈ ಪ್ಲಾನ್‌ಗೆ ₹349 ಪಾವತಿಸಿ ರೀಚಾರ್ಜ್ ಮಾಡಿದರೆ, ಹೆಚ್ಚುವರಿ ಶುಲ್ಕವಿಲ್ಲದೆ ಮತ್ತೊಂದು 28 ದಿನಗಳ ಉಚಿತ ರೀಚಾರ್ಜ್ ಸಿಗಲಿದೆ. ಇದರಿಂದ ಒಟ್ಟು 56 ದಿನಗಳ ಮಾನ್ಯತೆ ಹಾಗೂ 112GB ಡೇಟಾ ದೊರೆಯಲಿದ್ದು, ಮಾಸಿಕ ವೆಚ್ಚವು ಕೇವಲ ₹174.50 ಕ್ಕೆ ಇಳಿಯುತ್ತದೆ.
ಸುಮಾರು ₹4,000 ಮೌಲ್ಯದ 12 ತಿಂಗಳ 'ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ' ಚಂದಾದಾರಿಕೆ, ಏರ್‌ಟೆಲ್‌ನ ಸುರಕ್ಷಿತ AI ಸ್ಪ್ಯಾಮ್ ರಕ್ಷಣೆ ಮತ್ತು ಉಚಿತ ಹೆಲೋಟ್ಯೂನ್ ಸೌಲಭ್ಯ.
ಯಾವುದೇ ದೈನಂದಿನ ಮಿತಿಯಿಲ್ಲದ ನಿಜವಾದ ಅನಿಯಮಿತ 4G/5G ಡೇಟಾ
ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಿಗಾಗಿ ಏರ್‌ಟೆಲ್ ₹399 ಪ್ಲಾನ್ ಮೇಲೆ BOGO ಸೌಲಭ್ಯ ಒದಗಿಸಿದೆ.
ಈ ಪ್ಲಾನ್‌ನಲ್ಲಿ ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. 4G ಹಾಗೂ 5G ಹ್ಯಾಂಡ್‌ಸೆಟ್‌ಗಳನ್ನು ಹೊಂದಿರುವ ಎಲ್ಲಾ ಬಳಕೆದಾರರೂ ನಿಜವಾದ ಅನಿಯಮಿತ ಡೇಟಾವನ್ನು ಪಡೆಯಬಹುದು.
ಬೈ ಒನ್ ಗೆಟ್ ಒನ್ ಆಫರ್ ಲಾಭ: ₹399 ಪಾವತಿಸುವ ಮೂಲಕ ಗ್ರಾಹಕರು ಸತತ 56 ದಿನಗಳ ಕಾಲ (28 ದಿನ + 28 ದಿನ) ಅಡೆತಡೆಯಿಲ್ಲದ ಹೈ-ಸ್ಪೀಡ್ ಇಂಟರ್ನೆಟ್ ಪಡೆಯಬಹುದು. ಇದರಿಂದ ಪರಿಣಾಮಕಾರಿ ಮಾಸಿಕ ವೆಚ್ಚ ತಿಂಗಳಿಗೆ ₹200 ಕ್ಕಿಂತ ಕಡಿಮೆಯಾಗಲಿದೆ. ಈ ಯೋಜನೆಯಲ್ಲೂ 12 ತಿಂಗಳ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಉಚಿತವಾಗಿ ಸಿಗಲಿದೆ.
ಕೊಡುಗೆಯನ್ನು ಪರಿಶೀಲಿಸುವುದು ಮತ್ತು ಪಡೆದುಕೊಳ್ಳುವುದು ಹೇಗೆ?
ಈ ಆಫರ್ ಕೇವಲ 'Airtel Thanks App' ನಲ್ಲಿ ಮಾತ್ರ ಲಭ್ಯವಿದ್ದು, ಆಯ್ದ ಬಳಕೆದಾರರಿಗೆ ಮಾತ್ರ ನೀಡಲಾಗುತ್ತಿದೆ.
ನಿಮ್ಮ ಮೊಬೈಲ್‌ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಿರಿ.
ರೀಚಾರ್ಜ್ ವಿಭಾಗಕ್ಕೆ ಹೋಗಿ ₹349 ಅಥವಾ ₹399 ಪ್ಲಾನ್ ಆಯ್ಕೆಮಾಡಿ.
ಪಾವತಿ ಮಾಡುವ ಮೊದಲು ಯೋಜನೆಯ ವಿವರಗಳಲ್ಲಿ "1+1 Recharge Free" ಎಂಬ ಟ್ಯಾಗ್ ಕಾಣಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಈ ಟ್ಯಾಗ್ ಕಾಣಿಸಿದರೆ ಮಾತ್ರ ನಿಮಗೆ ಉಚಿತ ರೀಚಾರ್ಜ್ ಪ್ರಯೋಜನ ದೊರೆಯುತ್ತದೆ.
ಮೊದಲ 28 ದಿನಗಳ ಚಂದಾದಾರಿಕೆ ಅವಧಿ ಮುಗಿದ ನಂತರ, ಉಚಿತವಾಗಿ ನೀಡಲಾದ ಎರಡನೇ ಚಕ್ರದ ರೀಚಾರ್ಜ್ ಆಟೋಮ್ಯಾಟಿಕ್ ಆಗಿ ಅಥವಾ ವೋಚರ್ ರೂಪದಲ್ಲಿ ಸಕ್ರಿಯಗೊಳ್ಳುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.