ಜಾಗತಿಕವಾಗಿ, ಹೆಚ್ಚಿನ ದೇಶಗಳು ತಮ್ಮ ವಾಯುಯಾನ ವಲಯವನ್ನು ಅನಿಯಂತ್ರಿತಗೊಳಿಸಿವೆ. ಅಂದರೆ, ವಿಮಾನಯಾನ ಸಂಸ್ಥೆಗಳ ಮೇಲೆ ಸರ್ಕಾರ ಹೇರಿದ ಪ್ರವೇಶ ಮತ್ತು ಬೆಲೆ ನಿರ್ಬಂಧಗಳನ್ನು ತೆಗೆದುಹಾಕುವುದು.
ನವದೆಹಲಿ (ಡಿಸೆಂಬರ್ 8, 2023): ಕೋವಿಡ್ - 19 ಬಳಿಕ ವಿಮಾನ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಹೆಚ್ಚಾಗಿದ್ದರೂ ದರವೂ ಹೆಚ್ಚುತ್ತಿದೆ. ಈ ಹಿನ್ನೆಲೆ ಈ ಬಗ್ಗೆ ಲೋಕಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಉತ್ತರಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳೊಂದಿಗೆ ವಿಮಾನಯಾನ ದರಗಳ ಕುರಿತು ಚರ್ಚೆ ನಡೆಸಿದೆ ಮತ್ತು ಇವುಗಳನ್ನು ಸ್ವಯಂ-ನಿಯಂತ್ರಿಸಲು ಹಾಗೂ ದರಗಳನ್ನು ನಿಗದಿಪಡಿಸುವಾಗ ಪ್ರಯಾಣಿಕರ ಆಸಕ್ತಿ ಗಮನದಲ್ಲಿಟ್ಟುಕೊಳ್ಳಲು ಸಲಹೆ ನೀಡಲಾಗಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ. ವಿಮಾನ ದರಗಳ ಏರಿಕೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕುರಿತು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರವಾಗಿ ಜ್ಯೋತಿರಾದಿತ್ಯ ಸಿಂಧಿಯಾ ಈ ಹೇಳಿಕೆ ನೀಡಿದ್ದಾರೆ.
ಹಾಗೂ, ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ವಿಮಾನ ದರವನ್ನು ಸರ್ಕಾರವು ಸ್ಥಾಪಿಸಿಲ್ಲ ಅಥವಾ ನಿಯಂತ್ರಿಸುವುದಿಲ್ಲ. ವಿಮಾನಯಾನ ದರ ವ್ಯವಸ್ಥೆಯು ಜಾಗತಿಕವಾಗಿ ಅನುಸರಿಸುತ್ತಿರುವ ಅಭ್ಯಾಸಕ್ಕೆ ಅನುಗುಣವಾಗಿ ಅನೇಕ ಹಂತಗಳಲ್ಲಿ ಬದಲಾಗುತ್ತದೆ. ಮಾರುಕಟ್ಟೆ, ಬೇಡಿಕೆ, ಕಾಲೋಚಿತತೆ ಮತ್ತು ಇತರ ಮಾರುಕಟ್ಟೆ ಶಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ದರಗಳನ್ನು ನಿಗದಿಪಡಿಸುತ್ತವೆ. ಕಡಿಮೆ ದರದ ಹಂತದ ಟಿಕೆಟ್ ವೇಗವಾಗಿ ಮಾರಾಟವಾಗುವುದರಿಂದ ಮತ್ತು ಹೆಚ್ಚಿನ ದರದ ಟಿಕೆಟ್ ಹಂತಕ್ಕೆ ಬದಲಾಗುವುದರಿಂದ ಆಸನಗಳ ಬೇಡಿಕೆಯ ಹೆಚ್ಚಳದೊಂದಿಗೆ ವಿಮಾನ ದರವು ಹೆಚ್ಚಾಗುತ್ತದೆ ಎಂದೂ ಅವರು ಹೇಳಿದರು.
ಇದನ್ನು ಓದಿ: ಸೋರುತ್ತಿದೆ ಏರ್ ಇಂಡಿಯಾ ಮಾಳಿಗೆ, ವೈರಲ್ ವೀಡಿಯೋಗೆ ಸಂಸ್ಥೆ ಸ್ಪಷ್ಟನೆ!
ಇನ್ನು, ಸಚಿವಾಲಯವು ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದೆ ಮತ್ತು ವಿಮಾನ ದರಗಳನ್ನು ನಿಗದಿಪಡಿಸುವಾಗ ಸ್ವಯಂ- ನಿಯಂತ್ರಣ ಹಾಗೂ ಪ್ರಯಾಣಿಕರ ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಪ್ರತಿನಿಧಿಗಳಿಗೆ ಸಲಹೆ ನೀಡಲಾಗಿದೆ ಎಂದೂ ಸಿಂಧಿಯಾ ಮಾಹಿತಿ ನೀಡಿದರು. ವಿಮಾನಯಾನ ಸಂಸ್ಥೆಗಳು ಬೆಲೆ ನಿಗದಿಯಲ್ಲಿ ಮಿತವಾಗಿ ವರ್ತಿಸಲು ಮತ್ತು ಪ್ರಯಾಣಿಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಲು ಸಂವೇದನಾಶೀಲವಾಗಿರಲಿವೆ. ನೈಸರ್ಗಿಕ ವಿಕೋಪ, ವಿಪತ್ತು ಮುಂತಾದ ಘಟನೆಗಳ ಸಮಯದಲ್ಲಿ ವಿಮಾನ ದರಗಳು ಹೆಚ್ಚಾಗದಂತೆ ನೋಡಿಕೊಳ್ಳಲು ಏರ್‌ಲೈನ್‌ಗಳು ಬದ್ಧವಾಗಿರುವುದಾಗಿ ತಿಳಿಸಿದೆ" ಎಂದೂ ಅವರು ಹೇಳಿದರು.
ಅಲ್ಲದೆ, ವಿವಿಧ ದೇಶಗಳಲ್ಲಿನ ವಿಮಾನ ದರಗಳು ಕ್ರಿಯಾತ್ಮಕ ಸ್ವರೂಪದಲ್ಲಿವೆ ಮತ್ತು ಬೇಡಿಕೆ ಹಾಗೂ ಪೂರೈಕೆಯ ಮಾರುಕಟ್ಟೆ ತತ್ವವನ್ನು ಅನುಸರಿಸುತ್ತವೆ ಎಂದು ವಿಮಾನಯಾನ ಸಚಿವರು ತಿಳಿಸಿದ್ದಾರೆ. ನಿರ್ದಿಷ್ಟ ವಿಮಾನದಲ್ಲಿ ಈಗಾಗಲೇ ಮಾರಾಟವಾದ ಆಸನಗಳ ಸಂಖ್ಯೆ, ಚಾಲ್ತಿಯಲ್ಲಿರುವ ಇಂಧನ ಬೆಲೆ, ಮಾರ್ಗದಲ್ಲಿ ಕಾರ್ಯನಿರ್ವಹಿಸುವ ವಿಮಾನದ ಸಾಮರ್ಥ್ಯ, ಸೆಕ್ಟರ್‌ನಲ್ಲಿ ಸ್ಪರ್ಧೆ, ಸೀಸನ್, ಅಮೆರಿಕ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ, ರಜಾದಿನಗಳು, ಹಬ್ಬಗಳು, ದೀರ್ಘ ವಾರಾಂತ್ಯಗಳು, ಈವೆಂಟ್‌ಗಳು (ಕ್ರೀಡೆಗಳು, ಮೇಳಗಳು, ಸ್ಪರ್ಧೆಗಳು) ಇತ್ಯಾದಿ ಹಲವಾರು ಇತರ ಅಂಶಗಳ ಮೇಲೆ ದರಗಳು ಅವಲಂಬಿತವಾಗಿವೆ.
ರಕ್ಷಣಾ ಇಲಾಖೆಗೆ ಹೆಚ್ಚಿದ ‘ತೇಜಸ್ಸು’: 97 ತೇಜಸ್ ಯುದ್ಧ ವಿಮಾನ, 156 ಪ್ರಚಂಡ್ ಹೆಲಿಕಾಪ್ಟರ್ ಖರೀದಿಗೆ ಅನುಮತಿ
ಜಾಗತಿಕವಾಗಿ, ಹೆಚ್ಚಿನ ದೇಶಗಳು ತಮ್ಮ ವಾಯುಯಾನ ವಲಯವನ್ನು ಅನಿಯಂತ್ರಿತಗೊಳಿಸಿವೆ. ಅಂದರೆ, ವಿಮಾನಯಾನ ಸಂಸ್ಥೆಗಳ ಮೇಲೆ ಸರ್ಕಾರ ಹೇರಿದ ಪ್ರವೇಶ ಮತ್ತು ಬೆಲೆ ನಿರ್ಬಂಧಗಳನ್ನು ತೆಗೆದುಹಾಕುವುದು. ಅನಿಯಂತ್ರಣವು ವಿಮಾನಯಾನ ವಾಹಕಗಳ ನಡುವಿನ ಸ್ಪರ್ಧೆಯನ್ನು ಹೆಚ್ಚಿಸಿದೆ, ಇದು ವಿಮಾನ ದರದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಅನೇಕ ಹೊಸ ಏರ್‌ಲೈನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ, ಹೀಗಾಗಿ ಸ್ಪರ್ಧೆಯನ್ನು ಹೆಚ್ಚಿಸುತ್ತವೆ. ಅನಿಯಂತ್ರಣದ ನೇರ ಪರಿಣಾಮವೆಂದರೆ ಕಡಿಮೆ - ಆದಾಯದ ಗುಂಪಿನಲ್ಲಿರುವ ಪ್ರಯಾಣಿಕರು ಸಹ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯ ಎಂದೂ ಜ್ಯೊತಿರಾದಿತ್ಯ ಸಿಂಧಿಯಾ ಹೇಳಿದರು.
ಹಾರುವ ವಿಮಾನದಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟ ಭಾರತೀಯ ಉದ್ಯಮಿ! ವಿಡಿಯೋ ವೈರಲ್