ವೈದ್ಯೋ ನಾರಾಯಣ ಹರಿ ಅಂತಾರೆ. ರೋಗಿಯ ಜೀವವನ್ನು ಉಳಿಸುವ ವೈದ್ಯರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ದೇಶದಲ್ಲಿ ಹಲವು ವಿಭಾಗಗಳಲ್ಲಿ ಎಕ್ಸ್‌ಪರ್ಟ್ ಆಗಿರುವ ಹಲವಾರು ವೈದ್ಯರಿದ್ದಾತೆ. ಆದರೆ ದೇಶದ ಅತ್ಯಂತ ಶ್ರೀಮಂತ ಡಾಕ್ಟರ್ ಯಾರು ನಿಮ್ಗೆ ಗೊತ್ತಿದ್ಯಾ?
ವೈದ್ಯೋ ನಾರಾಯಣ ಹರಿ ಅಂತಾರೆ. ರೋಗಿಯ ಜೀವವನ್ನು ಉಳಿಸುವ ವೈದ್ಯರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ದೇಶದಲ್ಲಿ ಹಲವು ವಿಭಾಗಗಳಲ್ಲಿ ಎಕ್ಸ್‌ಪರ್ಟ್ ಆಗಿರುವ ಹಲವಾರು ವೈದ್ಯರಿದ್ದಾತೆ. ಆದರೆ ದೇಶದ ಅತ್ಯಂತ ಶ್ರೀಮಂತ ಡಾಕ್ಟರ್ ಯಾರು ನಿಮ್ಗೆ ಗೊತ್ತಿದ್ಯಾ? ಇವರು ಮೆದಾಂತ ನೆಟ್‌ವರ್ಕ್‌ನ ಸಂಸ್ಥಾಪಕರಾದ ಡಾ.ನರೇಶ್ ಟ್ರೆಹಾನ್. ನೀವು ನಿರ್ಧಿಷ್ಟ ಗುರಿಯನ್ನು ತಲುಪಬೇಕೆಂದು ಬಯಸಿದರೆ, ವಯಸ್ಸು ಅದಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಡಾ.ನರೇಶ್ ಟ್ರೆಹಾನ್ ಸಾಬೀತುಪಡಿಸಿದ್ದಾರೆ. ಅವರು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ತಮ್ಮ ಪ್ರಾವೀಣ್ಯತೆಗಾಗಿ ಪ್ರಪಂಚದಾದ್ಯಂತ ಚಿರಪರಿಚಿತರಾಗಿದ್ದಾರೆ. ಭಾರತದಲ್ಲಿ ಬಿಲಿಯನೇರ್ ಡಾಕ್ಟರ್ ಎಂದು ಗುರುತಿಸಿಕೊಂಡಿದ್ದಾರೆ.
ಮೆದಾಂತ ನೆಟ್‌ವರ್ಕ್‌ನ ಸಂಸ್ಥಾಪಕರಾದ 77 ವರ್ಷ ವಯಸ್ಸಿನ ಡಾ.ನರೇಶ್ ಟ್ರೆಹಾನ್ ಅದರ ಅಧ್ಯಕ್ಷರೂ ಆಗಿದ್ದಾರೆ. 2023ರಲ್ಲಿ ಮೆದಾಂತ ಸಂಸ್ಥೆಯನ್ನು ನಡೆಸುತ್ತಿರುವ ಕಂಪನಿಯಾದ ಗ್ಲೋಬಲ್ ಹೆಲ್ತ್‌ನ ಷೇರುಗಳು ಮೌಲ್ಯದಲ್ಲಿ ತೀವ್ರ ಏರಿಕೆ (Increase) ಕಂಡವು. ಇದರೊಂದಿಗೆ ಡಾ.ನರೇಶ್ ಟ್ರೆಹಾನ್ ಭಾರತದ ಶ್ರೀಮಂತ ವೈದ್ಯರೆಂದು ಗುರುತಿಸಿಕೊಂಡರು. ಡಾ.ಟ್ರೆಹಾನ್ ಅವರ ಹೆಚ್ಚುತ್ತಿರುವ ನಿವ್ವಳ ಮೌಲ್ಯವು ರಾಷ್ಟ್ರದ ಆರೋಗ್ಯ ವ್ಯವಸ್ಥೆ (Health system)ಯನ್ನು ಹೆಚ್ಚಿಸಲು ಅವರ ಗಮನಾರ್ಹ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
undefined
₹1 ಕೋಟಿ ಬೆಳೆ ತೆಗೆವ ಉಡುಪಿ ರೈತ ರಮೇಶ್ ನಾಯಕ್‌ಗೆ ಮೋದಿ ಪ್ರಶಸ್ತಿ: ಏನಿವರ ಸಾಧನೆ?
ಡಾ ನರೇಶ್ ಟ್ರೆಹಾನ್ ಯಾರು?
ಡಾ.ನರೇಶ್ ಟ್ರೆಹಾನ್ ಅವರ ತಂದೆ ಇಎನ್‌ಟಿ ತಜ್ಞರು. ತಾಯಿ ಸ್ತ್ರೀರೋಗತಜ್ಞರಾಗಿ ಕೆಲಸ ಮಾಡಿದ್ದರು. ನರೇಶ್ 1963ರಲ್ಲಿ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನವನ್ನು (Studies) ಪೂರ್ಣಗೊಳಿಸಿದ ನಂತರ 1969ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಅಲ್ಲಿ ಅವರು ಫಿಲಡೆಲ್ಫಿಯಾದ ಥಾಮಸ್ ಜೆಫರ್ಸನ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಭಾರತಕ್ಕೆ ಹಿಂದಿರುಗಿದ ನಂತರ 1988ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು, ಹೊಸ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಮತ್ತು ನಂತರ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಮತ್ತು ಸಂಶೋಧನಾ ಕೇಂದ್ರದಲ್ಲಿ (EHIRC) ಪ್ರಮುಖ ಹುದ್ದೆಯನ್ನು ನಿರ್ವಹಿಸಿದರು.
ಮೇದಾಂತ - ದಿ ಮೆಡಿಸಿಟಿ, ಹರಿಯಾಣದ ಗುರ್‌ಗಾಂವ್‌ನಲ್ಲಿರುವ ಅತಿ ದೊಡ್ಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಇದನ್ನು 2007ರಲ್ಲಿ ಡಾ. ಟ್ರೆಹಾನ್ ಸ್ಥಾಪಿಸಿದರು. ನಂತರದ ಕೆಲವು ವರ್ಷಗಳಲ್ಲಿ 48,000ಕ್ಕೂ ಹೆಚ್ಚು ಓಪನ್ ಹಾರ್ಟೆಡ್ ಸರ್ಜರಿ (Operation)ಗಳನ್ನು ಮಾಡುವ ಮೂಲಕ ಮೆಡಾಂಟಾದಲ್ಲಿ ಉನ್ನತ ಹೃದಯರಕ್ತನಾಳದ ಮತ್ತು ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ತರಕಾರಿ ಮಾರೋ ಕುಟುಂಬದ ಹುಡುಗ ಈಗ ಜಗತ್ತಿನ ಅತೀ ಕಿರಿಯ ಬಿಲಿಯನೇರ್, ಆಸ್ತಿ ಮೌಲ್ಯ ಭರ್ತಿ 33 ಕೋಟಿ!
ಡಾ.ನರೇಶ್ ಟ್ರೆಹಾನ್ ಅವರು ಮೇದಾಂತ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಗ್ಲೋಬಲ್ ಹೆಲ್ತ್‌ನಲ್ಲಿ ಅವರು ಸುಮಾರು 88.73 ಮಿಲಿಯನ್ ಷೇರುಗಳನ್ನು ಹೊಂದಿದ್ದಾರೆ. ಇತ್ತೀಚಿನ ಅಂದಾಜಿನ ಪ್ರಕಾರ, ನವೆಂಬರ್ 30, 2023 ರಂದು, ಗ್ಲೋಬಲ್ ಹೆಲ್ತ್‌ನ ಸ್ಟಾಕ್ ಪ್ರತಿ ಷೇರಿಗೆ INR 972.55 (USD 11.67) ರಷ್ಟು ದಾಖಲೆಯ ಎತ್ತರವನ್ನು ತಲುಪಿತು, ಇದು INR 8,402.30 ಕೋಟಿ (ಸುಮಾರು USD 1 ಶತಕೋಟಿ) ಮೌಲ್ಯದ ಗಮನಾರ್ಹ ನಿವ್ವಳ ಮೌಲ್ಯವನ್ನು ತಲುಪಿತು.