ಏರ್‌ ಇಂಡಿಯಾದ ಮೀಸೆ ಮಹಾರಾಜರಿಗೆ ಬರಲಿದ್ದಾಳೆ ಜೋಡಿ: ಲೋಗೋದಲ್ಲಿ ಶೀಘ್ರ ಮಹಿಳೆ ಚಿತ್ರ..!

Published : Feb 28, 2023, 10:25 AM IST
ಏರ್‌ ಇಂಡಿಯಾದ ಮೀಸೆ ಮಹಾರಾಜರಿಗೆ ಬರಲಿದ್ದಾಳೆ ಜೋಡಿ: ಲೋಗೋದಲ್ಲಿ ಶೀಘ್ರ ಮಹಿಳೆ ಚಿತ್ರ..!

ಸಾರಾಂಶ

ಈ ಮೂಲಕ ನೂತನ ವಿನ್ಯಾಸದಲ್ಲಿ ಒಂದು ಪಾರಂಪರಿಕ ಜೋಡಿಯ ಚಿತ್ರವನ್ನು ಲೋಗೊದಲ್ಲಿ ಬಳಸಲಾಗುವುದು ಎಂಬ ಸೂಚನೆ ಸಿಕ್ಕಿದೆ.

ನವದೆಹಲಿ (ಫೆಬ್ರವರಿ 28, 2023): ಏರ್‌ ಇಂಡಿಯಾ ವಿಮಾನದ ಅಧಿಕೃತ ಲಾಂಛನ ಅಥವಾ ಲೋಗೊದಲ್ಲಿ ಕಂಡುಬರುವ ಸಾಂಪ್ರದಾಯಿಕ ಉಡುಗೆಯ ಮೀಸೆ ಹಾಗೂ ಪೇಟಾಧಾರಿ ಮಹಾರಾಜ ಚಿತ್ರದೊಂದಿಗೆ ಮಹಿಳೆಯ ಚಿತ್ರವನ್ನೂ ಸೇರಿಸಲಾಗುವುದು ಎಂಬ ಸೂಚನೆಯನ್ನು ಸಂಸ್ಥೆಯ ಸಿಇಒ ಕ್ಯಾಂಪಬೆಲ್‌ ವಿಲ್ಸನ್‌ ನೀಡಿದ್ದಾರೆ. ಈ ಮೂಲಕ ನೂತನ ವಿನ್ಯಾಸದಲ್ಲಿ ಒಂದು ಪಾರಂಪರಿಕ ಜೋಡಿಯ ಚಿತ್ರವನ್ನು ಲೋಗೋದಲ್ಲಿ ಬಳಸಲಾಗುವುದು ಎಂಬ ಸೂಚನೆ ಸಿಕ್ಕಿದೆ.

ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, ಏರ್‌ ಇಂಡಿಯಾ (Air India) ವಿಮಾನಯಾನ ಸಂಸ್ಥೆಗೆ (Airlines Company) ಹೊಸ ವಿನ್ಯಾಸ ನೀಡುವ ಕುರಿತು ಮಾತನಾಡಿದ್ದಾರೆ. ಈ ವೇಳೆ ಮಹಾರಾಜ (Maharaja) ವಿನ್ಯಾಸ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನೂತನ ಯೋಜನೆಯ ಭಾಗವಾಗಿ ಮಹಾರಾಜ ನಮ್ಮೊಂದಿಗಿರುತ್ತಾರೆ. ಅವರು ಮತ್ತು ಅವಳು ಜೊತೆಯಾಗಬಹುದು’ ಎಂದಿದ್ದಾರೆ.

ಇದನ್ನು ಓದಿ: ವಿಶ್ವದರ್ಜೆಯ ವೈಮಾನಿಕ ಸಂಸ್ಥೆಯಾಗುವತ್ತ ಏರ್ ಇಂಡಿಯಾ ಚಿತ್ತ: 470 ವಿಮಾನ ಖರೀದಿ ಒಪ್ಪಂದದಿಂದ ಭಾರತಕ್ಕೂ ಲಾಭ..!

ಅಲ್ಲದೇ ‘90 ವರ್ಷಗಳ ಏರ್‌ ಇಂಡಿಯಾ ಪರಂಪರೆಯನ್ನು ಮುಂದಕ್ಕೂ ಕೊಂಡೊಯ್ಯುತ್ತೇವೆ. ಹಾಗಂತ ಕೇವಲ ಅದನ್ನೇ ಹಿಡಿದಿಟ್ಟುಕೊಂಡಿಲ್ಲ. ಭವಿಷ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Air India ಮೆಗಾ ಡೀಲ್‌: ಏರ್‌ಬಸ್‌ನಿಂದ 250 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡ ಟಾಟಾ ಗ್ರೂಪ್‌

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!