
ನವದೆಹಲಿ (ಜೂ.12):ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು 242 ಜನರನ್ನು ಹೊತ್ತು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನಲ್ಲಿ ಪತನಗೊಂಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.17 ಕ್ಕೆ ಹೊರಟ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ 171 ನಗರದ ಜನನಿಬಿಡ ಮೇಘಾನಿ ಪ್ರದೇಶದಲ್ಲಿ ಜನನಿಬಿಡ ಕಟ್ಟಡದ ಮೇಲೆ ಅಪ್ಪಳಿಸಿದೆ.
625 ಅಡಿ ಎತ್ತರದಿಂದ ವಿಮಾನ ನೆಲಕ್ಕೆ ಅಪ್ಪಳಿಸಿದ ಬೆನ್ನಲ್ಲಿಯೇ ಭಾರೀ ಪ್ರಮಾಣದ ಬೆಂಕಿ ಹಾಗೂ ಹೊಗೆ ಇಡೀ ಪ್ರದೇಶದಾದ್ಯಂತ ಆವರಿಸಿದೆ. ಅಪಘಾತವು ಪ್ರಮುಖ ರಕ್ಷಣಾ ಕಾರ್ಯಾಚರಣೆಗೆ ನಾಂದಿ ಹಾಡಿದ್ದು, ಹಲವಾರು ಅಗ್ನಿಶಾಮಕ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿದವು. ವಿಮಾನದಲ್ಲಿ 53 ಬ್ರಿಟಿಷ್ ಪ್ರಜೆಗಳು ಇದ್ದಾರೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.
ಏರ್ ಇಂಡಿಯಾ ಕಂಪನಿ ನಿರ್ವಹಿಸುತ್ತಿದ್ದ ಬೋಯಿಂಗ್ ಕಂಪನಿಯ ವಿಮಾನ ಇದಾಗಿದ್ದು, ಕಳೆದ ಆರು ವರ್ಷದಲ್ಲಿ ಮೂರನೇ ಬಾರಿ ಆಗಸದಲ್ಲಿ ಅಪಘಾತಕ್ಕೆ ಈಡಾದ ವಿಮಾನ ಇದಾಗಿದೆ.
ತೀರಾ ಇತ್ತೀಚೆಗೆ ಎಂದರೆ, ಆರು ತಿಂಗಳ ಹಿಂದೆ ದಕ್ಷಿಣ ಕೊರಿಯಾದಲ್ಲಿ ಬೋಯಿಂಗ್ ವಿಮಾನ ಅಪಘಾತಕ್ಕೆ ಈಡಾಗಿತ್ತು. ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಬೋಯಿಂಗ್ 737 ವಿಮಾನ ಅಪಘಾತ ಕಂಡು 179 ಮಂದಿ ಸಾವು ಕಂಡಿದ್ದರು.
ಇದಕ್ಕೂ ಮುನ್ನ 2018ರ ಅಕ್ಟೋಬರ್‌ನಲ್ಲಿ ಬೋಯಿಂಗ್‌ನ ಲಯನ್ ಏರ್ ಫ್ಲೈಟ್ 610, ಜಕಾರ್ತದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣದಲ್ಲಿ ಜಾವಾದ ಸಮುದ್ರಕ್ಕೆ ಬಿದ್ದು ಅಪಘಾತಕ್ಕೆ ಈಡಾಗಿತ್ತು. ಇಂಡೋನೇಷ್ಯಾದಲ್ಲಿ ನಡೆದ ಈ ಅವಘಢದಲ್ಲಿ 189 ಮಂದಿ ಸಾವು ಕಂಡಿದ್ದರು.
ಇದಾದ ಬಳಿಕ 2019ರ ಮಾರ್ಚ್‌ನಲ್ಲಿ ಇಥಿಯೋಪಿಯಾದಲ್ಲಿ, ಇಥಿಯೋಪಿಯನ್ ಏರ್‌ಲೈನ್ಸ್ ಫ್ಲೈಟ್ 302 ಅಪಘಾತಕ್ಕೆ ಈಡಾಗಿತ್ತು. ಅದೀಸ್ ಅಬಾಬಾದಿಂದ ಹೊರ ಕಲವೇ ಕ್ಷಣದಲ್ಲಿ ಬೋಯಿಂಗ್ ವಿಮಾನ ದುರಂತಕ್ಕೆ ಈಡಾಗಿ 157 ಪ್ರಯಾಣಿಕರು ಹಾಗೂ ಸಿಬ್ಬಂದಿ ಸಾವು ಕಂಡಿದ್ದರು.
ಇದು ಬೋಯಿಂಗ್ ಕಂಪನಿ ನಿರ್ಮಾಣ ಮಾಡುವ 787 ವಿಮಾನದ ಮೊಟ್ಟಮೊದಲ ದುರಂತವಾಗಿದೆ. ಏರ್ ಇಂಡಿಯಾ ಫ್ಲೈಟ್ ಎಐ 171, ಬೋಯಿಂಗ್ 787-8 ವಿಮಾನವಾಗಿದೆ. ಟೇಕ್ ಆಫ್ ಆದ ಐದು ನಿಮಿಷಗಳ ನಂತರ ಮೇಘನಿ ನಗರ ಎಂಬ ವಸತಿ ಪ್ರದೇಶಕ್ಕೆ ಅಪ್ಪಳಿಸಿದೆ. 787 ಡ್ರೀಮ್‌ಲೈನರ್ ಒಂದು ಅಗಲವಾದ ದೇಹದ, ಅವಳಿ-ಎಂಜಿನ್ ವಿಮಾನವಾಗಿದೆ. ವಾಯುಯಾನ ಸುರಕ್ಷತಾ ಜಾಲದ ಡೇಟಾಬೇಸ್ ಪ್ರಕಾರ, ಬೋಯಿಂಗ್ 787 ವಿಮಾನದ ಮೊದಲ ಅಪಘಾತ ಇದಾಗಿದೆ.ಈ ವಿಮಾನವನ್ನು 2009 ರಲ್ಲಿ ಪರಿಚಯಿಸಲಾಯಿತು ಮತ್ತು 1,000 ಕ್ಕೂ ಹೆಚ್ಚು ವಿಮಾನಗಳನ್ನು ಡಜನ್‌ಗಟ್ಟಲೆ ವಿಮಾನಯಾನ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂದು flightradar24 ವೆಬ್‌ಸೈಟ್ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.