'ಹಲೋ ಮುಂಬೈ' ಎಂದ ಭಾರತದ ಮೊದಲ ಆಪಲ್ ಸ್ಟೋರ್!

By Suvarna NewsFirst Published Apr 6, 2023, 4:35 PM IST
Highlights

ವಿಶ್ವದ ಅತಿದೊಡ್ಡ ಮೊಬೈಲ್‌ ಫೋನ್‌ ಮಾರುಕಟ್ಟೆಗಳಲ್ಲಿ ಒಂದಾದ ಭಾರತದ ಗ್ರಾಹಕರನ್ನು ಸೆಳೆಯುವ ಉದ್ದೇಶದಲ್ಲಿ, ಆಪಲ್‌ ಕಂಪನಿ ಭಾರತದಲ್ಲಿ ತನ್ನದೇ ಆದ ಸ್ವಂತ ಸ್ಟೋರ್‌ ಅನಾವರಣ ಮಾಡಿದೆ. ಮುಂಬೈನ ಬಿಕೆಸಿಯಲ್ಲಿ ತನ್ನ ಸ್ಟೋರ್‌ನ ಲುಕ್‌ ಅನಾವರಣ ಮಾಡಿದ್ದು ಈ ತಿಂಗಳ ಕೊನೆಯಲ್ಲಿ ಇದರು ಕಾರ್ಯಪ್ರವೃತ್ತವಾಗಲಿದೆ.

ಆತ್ಮ.ವೈ.ಆನಂದ್, ಮೈಸೂರು ಮಹಾಜನ ಕಾಲೇಜು ವಿದ್ಯಾರ್ಥಿ

ಮುಂಬೈ (ಏ.6): ಟೆಕ್ ದೈತ್ಯ ಆಪಲ್ ಏಪ್ರಿಲ್ 5  ಬುಧವಾರದಂದು ಭಾರತದಲ್ಲಿ ತನ್ನ ಮೊದಲ ಪ್ರಖ್ಯಾತ ಆಪಲ್ ಸ್ಟೋರ್ ಹೇಗಿರಲಿದೆ ಎನ್ನುವ ಲುಕ್ಅನ್ನು ಮುಂಬೈನಲ್ಲಿ ಅನಾವರಣ ಮಾಡಿತು.  2020 ರಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಹಾಗಿ ಹೊರಹೊಮ್ಮಿದ ಕ್ಯಾಲಿಫೋರ್ನಿಯಾ ಮೂಲದ ಕಂಪನಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ವಿಶ್ವ ಟೆಕ್ ಜಗತ್ತು ಹಾಗೂ ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣ ಎಂದೇ ಹೇಳಬಹುದಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ ಭಾರತೀಯ ಮಾರುಕಟ್ಟೆಯನ್ನು 20 ವರ್ಷದ ನಂತರ ತನ್ನ ಮೊದಲ ಸ್ಟೋರ್‌ಅನ್ನು ದೇಶದ ವಾಣಿಜ್ಯ ರಾಜಧಾನಿಯಲ್ಲಿ ಆರಂಭ ಮಾಡಲಿದೆ. ಆಪಲ್ ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲ್ಕಿ ಸಿಂಹ ಪಾಲನ್ನೇ ಹೊಂದ್ದಿದ್ದರೂ, ಅದರ ಜನ ಸಾಮಾನ್ಯರ ಕೈಗೆಟುಕದ ಬೆಲೆಗಳಿಂದಾಗಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೇವಲ 3% ಪಾಲನ್ನು ಹೊಂದಿದೆ. ಆದ್ದರಿಂದ ಭಾರತದಲ್ಲಿ ತನ್ನದೇ ಆಪಲ್ ಸ್ಟೋರ್ ಅನ್ನು ತೆರೆದು ಗ್ರಾಹಕರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.

ಆಪಲ್  2016ರಲ್ಲಿ ಭಾರತದಲ್ಲಿ ತನ್ನ ಸ್ಟೋರ್‌ ತೆರೆಯುವ ಇಂಗಿತ ವ್ಯಕ್ತಪಡಿಸಿತ್ತು. ಇದಾಗಿ ಏಳು ವರ್ಷದ ಬಳಿಕ ಭಾರತದಲ್ಲಿ ಮೊದಲ ಆಪಲ್‌ ಸ್ಟೋರ್‌ ಈ ತಿಂಗಳ ಕೊನೆಯಲ್ಲಿ ಕಾರ್ಯಪ್ರವೃತ್ತವಾಗಲಿದೆ. ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ಆಪಲ್‌ ಸ್ಟೋರ್‌ ಅಡೆತಡೆಗಳನ್ನು ಎದುರಿಸಿತ್ತು. ಭಾರತದಲ್ಲಿ ಆಪಲ್ ಸ್ಟೋರ್ ಇರದೇ ಇದ್ದರೂ, ಸಹ ಆಪಲ್ ಉತ್ಪನ್ನಗಳನ್ನು ಭಾರತದಲ್ಲಿ ತನ್ನ ವೆಬ್‌ಸೈಟ್‌ ಅಲ್ಲದೆ ಹಲವಾರು ವರ್ಷಗಳಿಂದ ಇ-ಕಾಮರ್ಸ್ ವೇದಿಕೆಗಳಾದ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಮತ್ತು ರೀಸೆಲ್ಲರ್‌ ಮೂಲಕ ಮಾರಾಟ ಮಾಡುತ್ತಿದೆ. ಇದರ ಬಗ್ಗೆ ಆಪಲ್ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಟಿಮ್ ಕುಕ್ ಕೂಡ ಬಹಳ ಹಿಂದೆ ಮಾತನಾಡಿದ್ದರು. “ಭಾರತದಲ್ಲಿ ಆಪಲ್ ತನ್ನದೇ ಆದ ಸ್ಟೋರ್ ಅನ್ನು ಪ್ರಾರಂಭ ಮಾಡಲಿದೆ. ನಮ್ಮ ಉತ್ಪನ್ನಗಳಿಗಾಗಿ ಬೇರೆಯವರು ನಮ್ಮ  ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾರಾಟ ಮಾಡುವುದು ನಮಗೆ ಇಷ್ಟವಿಲ್ಲ" ಎಂದು ಹೇಳಿದ್ದರು.

ಇತ್ತೀಚಿನ ವರ್ಷಗಳಲ್ಲಿ ಆಪಲ್‌ ಕೆಲವು ಉತ್ಪನ್ನಗಳು “ಮೇಕ್ ಇನ್ ಇಂಡಿಯಾ” ಯೋಜನೆಯಡಿಯಲ್ಲಿ  ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ. ಇದೀಗ ಐಪಾಡ್‌ ಮತ್ತು ಏರ್‌ಪಾಡ್‌ಗಳನ್ನು ಭಾರತದಲ್ಲಿಯೇ ತಯಾರಿಸಿ, ಜೋಡಣೆ ಮಾಡಿ ಮಾರುಕಟ್ಟೆಗೆ ಬಿಡಲು ಯೋಜಿಸಿದೆ. ಭಾರತದ ಮೊದಲ ಆಪಲ್ ಸ್ಟೋರ್, ವಿವಿಧ ಐಷಾರಾಮಿ ಉಡುಪು ಮತ್ತು ಆಭರಣ ಬ್ರ್ಯಾಂಡ್‌ಗಳಿಗೆ ನೆಲೆಯಾಗಿರುವ ಪ್ರೀಮಿಯರ್ ರಿಲಯನ್ಸ್ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ತಲೆಎತ್ತಿದೆ. ಮುಂಬೈನಲ್ಲಿ ಆಪಲ್‌ ಸ್ಟೋರ್‌ ಆರಂಭ ಮಾಡಿದ ಬಳಿಕ 2ನೇ ಸ್ಟೋರ್‌ಅನ್ನು ಆಪಲ್‌ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೆರಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಆಪಲ್ ಐಫೋನ್ ಬಳಕೆದಾರರಿಗೆ ಹೆಚ್ಚಿನ ಅಪಾಯ: ಕೇಂದ್ರ ಸರ್ಕಾರ ಎಚ್ಚರಿಕೆ; ಅಪಾಯ ತಪ್ಪಿಸಲು ಹೀಗೆ ಮಾಡಿ..

ತನ್ನ ಆಕರ್ಷಕ ದೀಪಾಲಂಕಾರದಿಂದ ಜನರ ಗಮನಸೆಳೆಯುತ್ತಿದ್ದ ಆಪಲ್ ಸ್ಟೋರ್ ನ ವಿನ್ಯಾಸದ ಬಗ್ಗೆ ಆಪಲ್ ಇಂಡಿಯಾ ತನ್ನ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದೆ. "ಮುಂಬೈ ನಗರದ ಆಕರ್ಷಕ ಟ್ಯಾಕ್ಸಿಯ ಬಣ್ಣಗಳಾದ ಕಪ್ಪು ಹಾಗೂ ಹಳದಿ ಬಣ್ಣದಿಂದ ಪ್ರೇರಿತವಾಗಿ ಅದೇ ಬಣ್ಣವನ್ನು ಬಳಸಿಕೊಂಡಿದ್ದೇವೆ' ಎಂದು ಆಪಲ್‌ ಹೇಳಿದೆ.

Apple layoffs: ಗೂಗಲ್‌, ಅಮೆಜಾನ್‌, ಮೆಟಾ ಬಳಿಕ ಅಪಲ್‌ನಿಂದಲೂ ಉದ್ಯೋಗಿಗಳ ವಜಾ

ಆಪಲ್ ಸ್ಟೋರ್ ನ ಮುಂದೆ ಜನರು ಬುಧವಾರ ಸಂಜೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಂಡಿದ್ದು ಮಾತ್ರವಲ್ಲದೆ, ವಿಡಿಯೋ ರೆಕಾರ್ಡ್‌ ಮಾಡಿ ಸಂಬ್ರಮಿಸಿದ್ದಾರೆ.  ಆಪಲ್ ಲೋಗೋವನ್ನು ವಿವಿಧ ಬಣ್ಣಗಳಲ್ಲಿ ಅಲಂಕರಿಸಿದ್ದಲ್ಲದೆ "ಹಲೋ ಮುಂಬೈ" ಎನ್ನುವ ಪದಗಳ ಮೂಲಕ ಮುಂಬೈ ಗ್ರಾಹಕರನ್ನು ಸ್ವಾಗತಿಸಿದೆ.

click me!