
ಮುಂಬೈ (ಜುಲೈ 19): ಟ್ವಿಟರ್‌ನಲ್ಲಿ ತಮ್ಮ ಖಾತೆಯನ್ನು ವೆರಿಫೈಡ್ ಮಾಡಿಕೊಳ್ಳಲು ಹಲವು ಬಾರಿ ಅರ್ಜಿ ಸಲ್ಲಿಸಿ ನಿರಾಸೆಗೊಂಡ ಅನೇಕ ಜನರನ್ನು ನೀವು ಕಾಣಬಹುದು. ಆದರೆ, Instagram ನಲ್ಲಿ ಬ್ಲೂಟಿಕ್ ಪಡೆದರೆ, ಇದು ನಿಮ್ಮ ಆದಾಯಕ್ಕೂ ಅದು ಸಹಾಯವಾಗುತ್ತದೆ. ಇನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಲೈಕ್ಸ್ ಹಾಗೂ ವೀವ್ಸ್ ವಿಚಾರದಲ್ಲೂ ದೊಡ್ಡ ಮಟ್ಟದ ವ್ಯವಹಾರ ನಡೆಯುತ್ತಿರುವುದುನ್ನು ಅಮರ್ ಉಜಾಲಾ ಪತ್ರಿಕೆಯ ತನಿಖಾ ವರದಿ ಬಹಿರಂಗ ಮಾಡಿದೆ. ಮುಂಬೈನಲ್ಲಿ ಇದರ ದೊಡ್ಡ ಜಾಲ ನಡೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿತಮ್ಮ ವರ್ಚಸಸು ಹೆಚ್ಚಿಸಿಕೊಳ್ಳುವ ಆಸೆಯಲ್ಲಿರುವ ಉದಯೋನ್ಮುಖ ಕಲಾವಿದರಿಂದ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಅವರ ಖಾತೆಗಳಿಗೆ ಬ್ಲ್ಯೂಟಿಕ್, ಅವರ ಪೋಸ್ಟ್‌ಗಳಿಗೆ ಲೈಕ್ಸ್ ಹಾಗೂ ವೀವ್ಸ್ ಬರುವಂಥ ಕೆಲಸಗಳನ್ನು ಮಾಡುತ್ತಿದೆ. ಮುಂಬೈನ ಮಲಾಡ್ ವೆಸ್ಟ್ ಕಂಚಪಾಂಡ ಉಪನಗರದಲ್ಲಿರುವ ಅಗರ್ವಾಲ್ ಎಸ್ಟೇಟ್‌ನಲ್ಲಿ ಇಂಥದ್ದೊಂದು ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಇದೆ. ಅದು ಉದಯೋನ್ಮುಖ ಕಲಾವಿದರು ಮತ್ತು ಸಾಮಾಜಿಕ ಮಾಧ್ಯಮದ ವ್ಯಕ್ತಿಗಳಿಂದ ಅವರ ಖಾತೆಗಳಿಗೆ ಬ್ಲ್ಯೂಟಿಕ್ ನೀಡುವ ಹೆಸರಿನಲ್ಲಿ ಹಣವನ್ನು ಪಡೆದುಕೊಳ್ಳುವ ಕೆಲಸ ಮಾಡುತ್ತಿದೆ. ಬಾಲಿವುಡ್ ಸ್ಟಾರ್ ಮೀಡಿಯಾ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯ ಪರವಾಗಿ ಅಬೀದ್ ಶೇಖ್ ಎನ್ನುವ ವ್ಯಕ್ತಿ ಈ ಕುರಿತಾಗಿ ಪತ್ರಕರ್ತರೊಂದಿಗೆ ಮಾತನಾಡಿದ್ದು, 1.45 ಲಕ್ಷ ರೂಪಾಯಿಗೆ ಇನ್ಸ್‌ಟಾಗ್ರಾಮ್ ಖಾತೆಗೆ ಬ್ಲ್ಯೂ ಟಿಕ್ ಆಗುತ್ತದೆ ಎಂದು ಹೇಳಿದ್ದಾನೆ.
ತಮ್ಮ ಕಂಪನಿಯು ಅದೇ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾನೆ. ಇದು ಹೇಗೆ ಸಾಧ್ಯ ಎಂದು ಕೇಳಿದಾಗ, ಬ್ಲ್ಯೂ ಟಿಕ್ ಬಯಸುವ ಕಲಾವಿದರ ಬಗ್ಗೆ ಒಂದು ಇಂಗ್ಲೀಷ್ ಲೇಖನವನ್ನು ತಾವೇ ನಿರ್ವಹಣೆ ಮಾಡುತ್ತಿರುವ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದ್ದು, ಅದರ ಲಿಂಕ್‌ನ ಸಹಾಯದಿಂದ ಖಾತೆಗೆ ಬ್ಲ್ಯೂಟಿಕ್ (Blue Tick) ಸಿಗುತ್ತದೆ. ಈ ಒಪ್ಪಂದ ಮಾಡಿಕೊಳ್ಳುವ ವೇಳೆ, ಕಂಪನಿಯು ಅರ್ಧದಷ್ಟು ಹಣವನ್ನು ಮುಂಚಿತವಾಗಿ ತೆಗೆದುಕೊಳ್ಳುತ್ತದೆ. ಈ ಹಿಂದೆ ಯಾರೆಲ್ಲಾ ಅಕೌಂಟ್‌ಗಳಿಗೆ ಈ ಬೀರಿ ಬ್ಲ್ಯೂಟಿಕ್ ನೀಡಲಾಗಿದೆ ಎನ್ನುವ ಮಾಹಿತಿಯನ್ನೂ ಆತ ಬಿಟ್ಟುಕೊಟ್ಟಿಲ್ಲ.
ರೀಲ್ಸ್ ಕೂಡ ಪ್ರಮೋಟ್: ಇತ್ತೀಚಿನ ದಿನಗಳಲ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ (Instagram) ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಕಂಪನಿಗಳು ಸೋಷಿಯಲ್ ಮೀಡಿಯಾದಲ್ಲಿವ್ಯಕ್ತಿಗಳ ರೀಲ್ಸ್‌ಗಳಿಗೆ ಇರುವ ವೀವ್ಸ್‌ಅನ್ನು ನೋಡಿಕೊಂಡೇ ಅವರನ್ನು ಸಂಪರ್ಕ ಮಾಡುತ್ತವೆ. ಇದರಿಂದಾಗಿ ಆ ಕಲಾವಿದರಿಗೆ ಸಾಕಷ್ಟು ಹಣವೂ ಸಿಗುತ್ತದೆ. ಬಾಲಿವುಡ್ ಸ್ಟಾರ್ ಮೀಡಿಯಾ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ (Bollywood Star Media digital marketing agency), ತಾವು ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನೂ ಪ್ರಮೋಟ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದು, ಇನ್ಸ್‌ಟಾದಲ್ಲಿ 10 ಲಕ್ಷ ವೀವ್ಸ್‌ಗಳಿಗೆ 10 ಸಾವಿರ ಹಣವನ್ನು ಚಾರ್ಜ್ ಮಾಡುತ್ತದೆ. ನಗದು ಹಾಗೂ ಚೆಕ್ ರೂಪದಲ್ಲೂ ಹಣ ಪಡೆದುಕೊಳ್ಳುವ ಈ ಕಂಪನಿ, ತನ್ನ ವ್ಯವಹಾರಕ್ಕಾಗಿ ಜಿಎಸ್‌ಟಿಯನ್ನೂ ಪಾವತಿ ಮಾಡುತ್ತಿದೆ.
ಫೇಸ್‌ಬುಕ್‌ಗೆ ಮೂರು ಪ್ಯಾಕೇಜ್: ಇನ್ಸ್‌ಟಾಗ್ರಾಮ್ ಮಾತ್ರವಲ್ಲ, ಫೇಸ್‌ಬುಕ್‌ನಲ್ಲೂ (Facebook) ಇಂಥ ಕಾರ್ಯಗಳನ್ನು ಕಂಪನಿ ಮಾಡುತ್ತದೆ. ಎರಡೂ ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳು ಮೆಟಾ ಕಂಪನಿಯ ಉತ್ಪನ್ನವಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ವೀವ್ಸ್ (Views) ಹಾಗೂ ಲೈಕ್ಸ್‌ಗಳನ್ನು (Likes) ಹೆಚ್ಚಿಸುವಂಥ ರೀತಿಯದ್ದೇ ಕೆಲವನ್ನು ಫೇಸ್‌ಬುಕ್‌ನಲ್ಲೂ ಮಾಡುತ್ತದೆ. ಇದಕ್ಕಾಗಿ ಕಂಪನಿ ಮೂರು ಪ್ಯಾಕೇಜ್ ಅನ್ನು ಹೆಸರಿಸಿದೆ. ಸಿಲ್ವರ್, ಗೋಲ್ಡನ್ ಹಾಗೂ ಡೈಮಂಡ್ ಪ್ಯಾಕೇಜ್. ಸಿಲ್ವರ್ ಪ್ಯಾಕೇಜ್‌ನಲ್ಲಿ 20 ಸಾವಿರ ರೂಪಾಯಿಗೆ 10 ಸಾವಿರ ಲೈಕ್ಸ್ ಹಾಗೂ 10 ಸಾವಿರ ವೀವ್ಸ್ ಸಿಗಲಿದ್ದರೆ, ಗೋಲ್ಡನ್ ಪ್ಯಾಕೇಜ್‌ನಲ್ಲಿ ಇವೆರಡರೊಂದಿಗೆ 50 ಸಾವಿರ ಇಂಪ್ರೆಷನ್ ಹಾಗೂ ರೀಚ್ ಕೂಡ ನಿಮ್ಮ ಪೋಸ್ಟ್‌ಗೆ ಸಿಗುತ್ತದೆ. ಇದಕ್ಕೆ 25 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಡೈಮಂಡ್ ಪ್ಯಾಕೇಜ್‌ನ ಬೆಲೆಯನ್ನು ಮಾತುಕತೆಯ ಮೂಲಕ ನಿರ್ಧಾರ ಮಾಡಲಾಗುತ್ತದೆ. ಇದರಲ್ಲಿ 5 ಲಕ್ಷ ಫಾಲೋವರ್‌ಗಳು, 5 ಲಕ್ಷ ಲೈಕ್ಸ್, 75 ಸಾವಿರ ಇಂಪ್ರೆಷನ್ ಹಾಗೂ ರೀಚ್ ನಿಮ್ಮ ಖಾತೆ ಹಾಗೂ ಆಯಾ ಪೋಸ್ಟ್‌ಗೆ ಸಿಗುತ್ತದೆ.
Amazon Prime Day Sale:ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ?
ಯೂಟ್ಯೂಬ್‌ನಲ್ಲೂ ಇದೆ ವ್ಯವಹಾರ: ಇನ್ನೂ ಯೂಟ್ಯೂಬ್ ಚಾನೆಲ್‌ಗಳಲ್ಲೂ ಇಂಥ ವ್ಯವಹಾರಗಳಿವೆ. ಯೂಟ್ಯೂಬ್‌ನಲ್ಲಿ ನಿಮ್ಮ ವಿಡಿಯೋ ಮಾನಿಟೈಜ್ ಆಗಬೇಕಾದಲ್ಲಿ ಕೆಲವೊಂದು ಕನಿಷ್ಠ ಷರತ್ತುಗಳನ್ನು ವಿಧಿಸಿದೆ. ಚಾನಲ್‌ಗೆ ಕನಿಷ್ಠ ಒಂದು ಸಾವಿರ ಚಂದಾದಾರರಿದ್ದರೆ ಮತ್ತು ಚಾನಲ್‌ನ ವೀಡಿಯೊಗಳನ್ನು ಕನಿಷ್ಠ 40 ಗಂಟೆಗಳ ಕಾಲ ವೀಕ್ಷಿಸಿದರೆ ಮಾತ್ರ ಈಗ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳ ವೀಕ್ಷಣೆಯಿಂದ ಹಣವನ್ನು ಗಳಿಸಬಹುದು. ಆದರೆ, ಇದಕ್ಕೆ ಈ ಕಂಪನಿಯಿಂದ ಪರಿಹಾರ ಲಭ್ಯವಿದೆ. ಈ ಕಂಪನಿಯು ಯಾವುದೇ ಯೂಟ್ಯೂಬ್ ಚಾನೆಲ್‌ನ ಒಂದು ಸಾವಿರ ಚಂದಾದಾರರನ್ನು ಮಾಡಲು ಮತ್ತು 40 ಗಂಟೆಗಳ ವೀಕ್ಷಣೆ ಸಮಯವನ್ನು ಪೂರ್ಣಗೊಳಿಸಲು 15 ಸಾವಿರ ರೂಪಾಯಿಗಳನ್ನು ವಿಧಿಸುತ್ತದೆ. ಇದರಲ್ಲಿ, ಈ ಕಂಪನಿಯು 10 ಸಾವಿರ ವೀಕ್ಷಣೆಗಳು ಮತ್ತು 100 ಕಾಮೆಂಟ್‌ಗಳನ್ನು ಖಾತರಿಪಡಿಸುತ್ತದೆ.
ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್!
ಐಎಂಡಿಬಿಯಲ್ಲೂ ರೇಟಿಂಗ್: ಸೋಷಿಯಲ್ ಮೀಡಿಯಾಗಳಲ್ಲದೆ, ಇತ್ತೀಚೆಗೆ ಐಎಂಡಿಬಿ ರೇಟಿಂಗ್ ಕೂಡ ಚರ್ಚೆಯಲ್ಲಿದೆ. ಪ್ರೈಮ್ ವಿಡಿಯೋ ಒಟಿಟಿಯ ಮಾಲೀಕರಾಗಿರುವ ಅಮೇಜಾನ್ ಈಗ ಐಎಂಡಿಬಿಯನ್ನು ಖರೀದಿ ಮಾಡಿದೆ. ಆದರೆ, ಐಎಂಡಿಬಿಯಲ್ಲಿ ನಿಮ್ಮ ಖಾತೆ ಹಾಗೂ ಅದನ್ನು ವೆರಿಫೈ ಮಾಡುವ ಭಿನ್ನ ವ್ಯವಹಾರ ಮುಂಬೈಯಲ್ಲಿ ನಡೆಯುತ್ತಿದೆ. ಕಲಾವಿದರ ಐಎಂಡಿಬಿ ಖಾತೆಗಳನ್ನು ರಚಿಸಲು ಬಾಲಿವುಡ್ ಸ್ಟಾರ್ ಮೀಡಿಯಾ 15 ಸಾವಿರ ಚಾರ್ಜ್ ಮಾಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.