Advance Tax:ಯಾರು ಪಾವತಿಸಬೇಕು? ಅಂತಿಮ ಗಡುವು ಯಾವಾಗ? ಇಲ್ಲಿದೆ ಮಾಹಿತಿ

By Suvarna News  |  First Published Nov 22, 2023, 6:16 PM IST

ಅಡ್ವಾನ್ಸ್ ಟ್ಯಾಕ್ಸ್ ಬಗ್ಗೆ ನೀವು ಕೇಳಿರುತ್ತೀರಿ. ಹಾಗಾದ್ರೆ ಈ ಟ್ಯಾಕ್ಸ್ ಅನ್ನು ಯಾರು ಪಾವತಿಸಬೇಕು? ಈ ತೆರಿಗೆ ಪಾವತಿಸಲು ಅಂತಿಮ ಗಡುವು ಯಾವಾಗ? ಇಲ್ಲಿದೆ ಮಾಹಿತಿ. 


Business Desk: ಒಂದು ವೇಳೆ ತೆರಿಗೆದಾರರು ಹಣಕಾಸು ಸಾಲಿನ ಅಂತ್ಯಕ್ಕಿಂತ ಮುಂಚೆ ತೆರಿಗೆಯನ್ನು ಪಾವತಿಸಿದರೆ ಅದನ್ನು ಅಡ್ವಾನ್ಸ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವ ಪ್ರಕ್ರಿಯೆ ಕೇಂದ್ರ ಸರ್ಕಾರಕ್ಕೆ ವರ್ಷವಿಡೀ ಆದಾಯದ ನಿಧಾನಗತಿಯ ಹರಿವಿನ ನಿರ್ವಹಣೆಗೆ ನೆರವು ನೀಡುತ್ತದೆ. 2023 - 2024ನೇ ಸಾಲಿನ ಅಡ್ವಾನ್ಸ್ ತೆರಿಗೆ ಪಾವತಿಗೆ 2024ರ ಮಾರ್ಚ್15 ಅಂತಿಮ ಗಡುವಾಗಿದೆ. ತೆರಿಗೆದಾರರು ತಮ್ಮ ಶೇ.100ರಷ್ಟು ಅಡ್ವಾನ್ಸ್ ಟ್ಯಾಕ್ಸ್ ಅನ್ನು ನಿಗದಿಪಡಿಸಿರುವ ಅಂತಿಮ ಗಡುವಿನೊಳಗೆ ಪಾವತಿಸಬೇಕು. ಹಾಗಾದ್ರೆ ಅಡ್ವಾನ್ಸ್ ಟ್ಯಾಕ್ಸ್ ಅನ್ನು ಯಾರು ಪಾವತಿಸಬೇಕು? ಏಕೆ? ಇಲ್ಲಿದೆ ಮಾಹಿತಿ.

ಅಡ್ವಾನ್ಸ್ ಟ್ಯಾಕ್ಸ್ ಅಂದ್ರೇನು?
ನೀವು ವೇತನದ ಹೊರತಾದ ಆದಾಯ ಅಂದರೆ ಬಾಡಿಗೆ ಅಥವಾ ಷೇರುಗಳಿಂದ ಆದಾಯ ಗಳಿಸುತ್ತಿದ್ದರೆ ಆಗ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಇದು ಲಾಟರಿ ಬಹುಮಾನ ಸೇರಿದಂತೆ ಇತರ ಆದಾಯದ ಮೂಲಗಳಿಗೂ ಅನ್ವಯಿಸುತ್ತದೆ. ತೆರಿಗೆದಾರರು ಆನ್ ಲೈನ್ ಅಥವಾ ನಿರ್ದಿಷ್ಟ ಬ್ಯಾಂಕುಗಳ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬಹುದು. 

Tap to resize

Latest Videos

35 ಲಕ್ಷ ತೆರಿಗೆ ರೀಫಂಡ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ, ಶೀಘ್ರ ಬಗೆಹರಿಸಲು ಕ್ರಮ: ಸಿಬಿಡಿಟಿ ಮುಖ್ಯಸ್ಥ

ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಲು ವೇಳಾಪಟ್ಟಿ
ಜೂನ್ 15: ನಿಮ್ಮ ಒಟ್ಟು ಅಂದಾಜು ತೆರಿಗೆಯ ಕನಿಷ್ಠ ಶೇ.15ರಷ್ಟನ್ನು ಪಾವತಿಸಬೇಕು.
ಸೆಪ್ಟೆಂಬರ್ 15: ಅಂದಾಜಿಸಿರುವ ತೆರಿಗೆಯ ಶೇ.45ರಷ್ಟನ್ನು ಪಾವತಿಸಬೇಕು. 
ಡಿಸೆಂಬರ್ 15: ಅಂದಾಜಿಸಿರುವ ತೆರಿಗೆಯಶೇ.75ರಷ್ಟನ್ನು ಪಾವತಿಸಬೇಕು.
ಮಾರ್ಚ್ 15: ನೀವು ಉಳಿದಿರುವ ಬ್ಯಾಲೆನ್ಸ್ ನಲ್ಲಿ ಶೇ.100ರಷ್ಟನ್ನು ಪಾವತಿಸಬೇಕು.

ಒಂದು ವೇಳೆ ನಿಮ್ಮ ಆದಾಯ ನಿರೀಕ್ಷೆ ಈ ವರ್ಷ ಬದಲಾಗಿದ್ದರೆ, ನೀವು ಪಾವತಿಸುವ ಮೊತ್ತವನ್ನು ಹೊಂದಾಣಿಕೆ ಮಾಡಿ. ಇದನ್ನು ಆದಾಯ ತೆರಿಗೆ ಇಲಾಖೆಯ ಆನ್ ಲೈನ್ ತೆರಿಗೆ ಪಾವತಿ ವೆಬ್ ಸೈಟ್ ನಲ್ಲಿ ಮಾಡಬಹುದು. 

ಯಾರು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು?
ಭಾರತದಲ್ಲಿ ವೇತನ ಪಡೆಯುವ ಉದ್ಯೋಗಿಗಳು, ಫ್ರೀಲ್ಯಾನ್ಸರ್ ಅಥವಾ ಉದ್ಯಮಿಗಳ ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಅಥವಾ ಅದಕ್ಕಿಂತಹೆಚ್ಚಿದ್ದರೆ ಅವರು ತೆರಿಗೆಯನ್ನು ಮುಂಚಿತವಾಗಿ (ಅಡ್ವಾನ್ಸ್) ಪಾವತಿಸಲು ಅರ್ಹತೆ ಹೊಂದಿದ್ದಾರೆ. ಇನ್ನು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಉದ್ಯಮ ಹೊಂದಿರದ ಹಿರಿಯ ನಾಗರಿಕರು ಅಡ್ವಾನ್ಸ್ ತೆರಿಗೆಯಿಂದ ವಿನಾಯ್ತಿ ಪಡೆದಿದ್ದಾರೆ.

ಐಟಿಆರ್ ಸಲ್ಲಿಕೆ ಮಾಡಿದ್ರೆ ಸಾಲದು ವೆರಿಫೈ ಮಾಡಿ, ಇಲ್ಲವಾದ್ರೆ ಬೀಳುತ್ತೆ 5 ಸಾವಿರ ದಂಡ: ಐಟಿ ಇಲಾಖೆ

ಇನ್ನು ವೈದ್ಯರು, ವಕೀಲರು ಹಾಗೂ ಆರ್ಕಿಟೆಕ್ಟ್ ಮುಂತಾದ ಉದ್ಯಮಿಗಳು ಹಾಗೂ ಸ್ವತಂತ್ರ ವೃತ್ತಿಯವರಿಗೆ ವಿಶೇಷ ಸೌಲಭ್ಯವಿದ್ದು, ಇದಕ್ಕೆ ಪ್ರಿಸ್ಕ್ರಿಪ್ಟಿವ್ ತೆರಿಗೆ ಯೋಜನೆ ಎಂದು ಕರೆಯುತ್ತಾರೆ. ಸೆಕ್ಷನ್ 44ಎಡಿ ಅಡಿಯಲ್ಲಿ ಈ ಸೌಲಭ್ಯ ಪಡೆಯುವ ಉದ್ಯಮಗಳು ತಮ್ಮ ಸಂಪೂರ್ಣ ಅಡ್ವಾನ್ಸ್ ತೆರಿಗೆಯನ್ನು ಒಂದು ಕಂತಿನಲ್ಲಿ ಮಾರ್ಚ್ 15ರೊಳಗೆ ಪಾವತಿಸಬೇಕು. ಹಾಗೆಯೇ ಸ್ವತಂತ್ರ ವೃತ್ತಿಯವರು ಸೆಕ್ಷನ್ 
44ADA ಅಡಿಯಲ್ಲಿ ತಮ್ಮ ಪೂರ್ಣ ಮೊತ್ತವನ್ನು ಪಾವತಿಸಬೇಕು. 

ಅಡ್ವಾನ್ಸ್ ತೆರಿಗೆಗೆ ಯಾವೆಲ್ಲ ಅರ್ಜಿಗಳು ಅಗತ್ಯ?
ತೆರಿಗೆದಾರರು ಚಲನ್ ಸಂಖ್ಯೆ ITNS 280 ಅನ್ನು ನಿಗದಿತ ಗಡುವಿನೊಳಗೆ ಭರ್ತಿ ಮಾಡಿ ಅಡ್ವಾನ್ಸ್ ತೆರಿಗೆ ಪಾವತಿಸಬೇಕು. ಇನ್ನು ಅರ್ಜಿ ಭರ್ತಿ ಮಾಡುವ ಸಮಯದಲ್ಲಿ ನಿಮ್ಮ ತೆರಿಗೆ ಇನ್ನೊಬ್ಬರ ಹೆಸರಿನಲ್ಲಿ ಕ್ರೆಡಿಟ್ ಆಗೋದನ್ನು ತಪ್ಪಿಸಲು ನಿಖರವಾದ ಪ್ಯಾನ್ ಮಾಹಿತಿಗಳನ್ನು ನೀಡಬೇಕು. ಹಾಗೆಯೇ ಮುಂದಿನ ಆರ್ಥಿಕ ಸಾಲಿನಲ್ಲಿ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಲು ಸೂಕ್ತವಾದ ಮೌಲ್ಯಮಾಪನ ವರ್ಷ ಆಯ್ಕೆ ಮಾಡಬೇಕು. 

ಇನ್ನು ಪಾವತಿ ಸಮಯದಲ್ಲಿ ನೀವು ಪಾವತಿ ವಿಧಾನ ಆಯ್ಕೆ ಮಾಡಬೇಕು. ಒಂದು ವೇಳೆ ತೆರಿಗೆಯನ್ನು ಮೌಲ್ಯಮಾಪನ ಆದಾಯದ ಆಧಾರದಲ್ಲಿ ತೆರಿಗೆಯನ್ನು ಅದೇ ಹಣಕಾಸಿನ ವರ್ಷಕ್ಕೆ ಪಾವತಿಸಿದರೆ ಅದನ್ನು ಅಡ್ವಾನ್ಸ್ ತೆರಿಗೆ ಎಂದು ಕರೆಯಲಾಗುತ್ತದೆ. ಒಂದು ವೇಳೆ ತೆರಿಗೆಯನ್ನು ಹಣಕಾಸು ಸಾಲಿನ ಕೊನೆಯಲ್ಲಿ ಮಾಡಿದರೆ ಆಗ ಅದನ್ನು ಸ್ವಯಂ ಮೌಲ್ಯಮಾಪನ ತೆರಿಗೆ ಎಂದು ಕರೆಯಲಾಗುತ್ತದೆ. 

ಇನ್ನು ಅಡ್ವಾನ್ಸ್ ತೆರಿಗೆ ಪಾವತಿಸಿದ ಬಳಿಕ ನಿಮಗೆ ಚಲನ್ ಐಡೆಂಟಿಫಿಕೇಷನ್ ಸಂಖ್ಯೆ (ಸಿಐಎನ್) ಸಿಗುತ್ತದೆ. ಈ ಸಂಖ್ಯೆಯನ್ನು ಉಳಿಸಿಕೊಂಡು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವಾಗ ಬಳಸಬೇಕು. 

click me!