
ಮುಂಬೈ (ಮೇ.30): ‘ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್ ಆ್ಯಪ್‌ನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ನಲ್ಲಿ ಷೇರು ಖರೀದಿಸಲು ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮುಂದಾಗಿದ್ದಾರೆ. ಈ ಸಂಬಂಧದ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ವರದಿಗಳು ಹೇಳಿವೆ.
ಮಂಗಳವಾರ ಅಹಮದಾಬಾದ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಅದಾನಿ ಅವರು ಶರ್ಮಾರನ್ನು ಭೇಟಿ ಮಾಡಿದರು. ಈ ವೇಳೆ ಒಪ್ಪಂದದ ಸ್ವೂಪದ ಬಗ್ಗೆ ಮಾತುಕತೆ ನಡೆಯತು ಎಂದು ಮೂಲಗಳು ಹೇಳಿವೆ.
ಷೇರು ಶೇ.5ರಷ್ಟು ಏರಿಕೆ:
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳು ಶೇ.5ರಷ್ಟು ಜಿಗಿತ ಕಂಡಿವೆ. ಅದಾನಿಯಂಥ ದೊಡ್ಡ ಉದ್ಯಮಿ ಪೇಟಿಎಂ ಖರೀದಿಗೆ ಯತ್ನ ನಡೆಸಿದ್ದಾರೆ ಎಂಬ ವರದಿಗಳು, ಷೇರುಪೇಟೆಯಲ್ಲಿ ನಷ್ಟದಲ್ಲಿರುವ ಕಂಪನಿಗೆ ಟಾನಿಕ್ ನೀಡಿದೆ.
ಅಧಿಕಾರಕ್ಕೆ ಬಂದ 1 ತಿಂಗಳಲ್ಲೇ ಅದಾನಿ ಹಗರಣ ತನಿಖೆ: ಕಾಂಗ್ರೆಸ್
ಅದಾನಿ, ಪೇಟಿಎಂ ನಕಾರ:
ಈ ವರದಿಗಳ ಬೆನ್ನಲ್ಲೇ ಅದಾನಿ ಹಾಗೂ ಪೇಟಿಎಂ ಕಂಪನಿಗಳು ಪ್ರತ್ಯೇಕ ಹೇಳಿಕೆ ನೀಡಿ, ‘ಇವು ಕೇವಲ ಊಹಾಪೋಹದ ವರದಿಗಳು. ಉಭಯ ಕಂಪನಿಗಳ ಮುಖ್ಯಸ್ಥರ ನಡುವೆ ಪಾಲು ಖರೀದಿ ಅಥವಾ ಮಾರಾಟದ ಬಗ್ಗೆ ಯಾವುದೇ ಮಾತುಕತೆ ನಡದಿಲ್ಲ’ ಎಂದಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.