PAN Card Misuse: ನಟ ರಾಜ್ ಕುಮಾರ್ ರಾವ್ ಪ್ಯಾನ್ ದುರ್ಬಳಕೆ; ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿದೆಯಾ? ಚೆಕ್ ಮಾಡಿ

Published : Apr 05, 2022, 01:40 PM ISTUpdated : Apr 05, 2022, 02:12 PM IST
PAN Card Misuse: ನಟ ರಾಜ್ ಕುಮಾರ್ ರಾವ್ ಪ್ಯಾನ್ ದುರ್ಬಳಕೆ; ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿದೆಯಾ? ಚೆಕ್ ಮಾಡಿ

ಸಾರಾಂಶ

*ನಟ ರಾಜ್ ಕುಮಾರ್ ರಾವ್ ಪ್ಯಾನ್ ಕಾರ್ಡ್ ಬಳಸಿ ಸಾಲ ಪಡೆದ ಅಪರಿಚಿತ *ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರೋ ನಟ *ಪ್ಯಾನ್ ಬಳಸಿ ಸಾಲ ಪಡೆದ್ರೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ

ನವದೆಹಲಿ (ಮಾ.5): ಬಾಲಿವುಡ್ (Bollywood) ನಟ ರಾಜ್ ಕುಮಾರ್ ರಾವ್ ( Rajkummar Rao) ಇತ್ತೀಚೆಗೆ ಹಣಕಾಸು ವಂಚನೆಯ ಶಿಕಾರಿಯಾಗಿದ್ದಾರೆ. ರಾಜ್ ಕುಮಾರ್ ರಾವ್  ಹೆಸರಿನಲ್ಲಿ ಸಾಲ (Loan) ತೆಗೆಯಲು ಅವರ ಪ್ಯಾನ್ ಕಾರ್ಡ್ (PAN Card) ಅನ್ನು ಅಪರಿಚಿತ ವ್ಯಕ್ತಿಯೊಬ್ಬ ಅವರ ಅನುಮತಿಯಿಲ್ಲದೆ ದುರ್ಬಳಕೆ ಮಾಡಿಕೊಂಡಿದ್ದಾನೆ.  

ಈ ಬಗ್ಗೆ ಟ್ವೀಟ್ (Twwet) ಮಾಡಿರೋ ರಾಜ್ ಕುಮಾರ್ ರಾವ್, 'ನನ್ನ ಪ್ಯಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಸಣ್ಣ ಮೊತ್ತದ ಅಂದ್ರೆ 2500ರೂ. ಸಾಲ ತೆಗೆದುಕೊಳ್ಳಲಾಗಿದೆ. ಇದ್ರಿಂದ ನನ್ನ ಸಿಬಿಲ್ ಸ್ಕೋರ್ (cibil score) ಮೇಲೆ ಪರಿಣಾಮ ಬೀರಿದೆ. ಸಿಬಿಲ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಇಂಥ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ತಿಳಿಸಿದ್ದಾರೆ. 

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿ. ವಿಲೀನ, ದೇಶದ 2ನೇ ಅತಿದೊಡ್ಡ ಕಂಪನಿ!

ಅನುಮತಿಯಿಲ್ಲದೆ ಅನ್ಯವ್ಯಕ್ತಿಗಳ ಪ್ಯಾನ್ ಕಾರ್ಡ್  (PAN Card) ಬಳಸಿ ಸಾಲ ತೆಗೆದು ಆ ಬಳಿಕ ಸಾಲ ಮರುಪಾವತಿ ಮಾಡದ ಅನೇಕ ಪ್ರಕರಣಗಳು ವರದಿಯಾಗಿವೆ. ಈ ರೀತಿ ಅಪರಿಚಿತ ವ್ಯಕ್ತಿಗಳು ಪ್ಯಾನ್ ಕಾರ್ಡ್ ಬಳಸಿ ಸಾಲ ತೆಗೆದಾಗ ವಂಚನೆಗೊಳಗಾದವರ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಇದ್ರಿಂದ ಮುಂದೆ ಆ ವ್ಯಕ್ತಿಗೆ ಸಾಲ ಪಡೆಯಲು ತೊಂದರೆಯಾಗುತ್ತದೆ ಕೂಡ.

ಪ್ಯಾನ್ ಕಾರ್ಡ್ ವಂಚನೆ ತಪ್ಪಿಸೋದು ಹೇಗೆ?
ಯಾವುದೇ ಸಂದರ್ಭದಲ್ಲೂ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ನಿಮ್ಮ ಪ್ಯಾನ್ ಹಾಗೂ ಆಧಾರ್ ಸಂಖ್ಯೆ (Aadhaar) ಮಾಹಿತಿ ಹಂಚಿಕೊಳ್ಳಬೇಡಿ. ಈ ಎರಡೂ ಮಾಹಿತಿ ಅತ್ಯಂತ ಗೌಪ್ಯವಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹಂಚಿಕೊಳ್ಳಬಾರದು. ಇನ್ನು ಪ್ಯಾನ್ ಅಥವಾ ಆಧಾರ್ ಫೋಟೋಕಾಪಿಯನ್ನು ಹಂಚಿಕೊಳ್ಳುವಾಗ ಅದರಲ್ಲಿ ಉದ್ದೇಶ ನಮೂದಿಸಬೇಕು. ಹಾಗೆಯೇ ಪೋಟೋಕಾಪಿಯಲ್ಲಿ ಸಹಿ ಹಾಗೂ ದಿನಾಂಕ ನಮೂದಿಸಬೇಕು. ಇದ್ರಿಂದ ಕೂಡ ದುರ್ಬಳಕೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.  ಯಾವುದೇ ವೆಬ್ ಸೈಟ್ ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ನಮೂದಿಸೋದನ್ನು ಆದಷ್ಟು ತಪ್ಪಿಸಿ. ಪ್ಯಾನ್ ಸಂಖ್ಯೆ ಬದಲು ಡ್ರೈವಿಂಗ್ ಲೈಸೆನ್ಸ್ (Driving Licence), ವೋಟರ್ ಐಡಿ (Voter ID), ಆಧಾರ್ ಕಾರ್ಡ್ (Aadhaar card) ಇತ್ಯಾದಿ ಇತರ ಐಡಿಗಳನ್ನು ಬಳಸಿ. ಆನ್ ಲೈನ್ ಪೋರ್ಟಲ್ ಗಳಲ್ಲಿ ನಿಮ್ಮ ಪೂರ್ಣ ಹೆಸರು, ಜನ್ಮದಿನಾಂಕ ನಮೂದಿಸೋದನ್ನು ತಪ್ಪಿಸಿ. ನಿಮ್ಮ ಪ್ಯಾನ್ ಸಂಖ್ಯೆ ಟ್ರ್ಯಾಕ್ (track) ಮಾಡಲು ಈ ಮಾಹಿತಿಗಳನ್ನು ಬಳಸೋ ಸಾಧ್ಯತೆಯಿರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್  (Credit score) ಅನ್ನು ಆಗಾಗ ಆನ್ ಲೈನ್ ಪೋರ್ಟಲ್ ಗಳಲ್ಲಿ ಚೆಕ್ ಮಾಡಲು ಮರೆಯಬೇಡಿ. 

Bengaluru: ಹೋಟೆಲಲ್ಲಿ ತಿನಿಸು ಶೇ.10 ದುಬಾರಿ: ಹೋಟೆಲ್‌ ಮಾಲೀಕರ ಸಂಘ

ಮಾಹಿತಿ ಚೆಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಬ್ಯಾಂಕ್ (Bank) ಅಥವಾ ಹಣಕಾಸು ಸಂಸ್ಥೆಗಳಲ್ಲಿನ ನಿಮ್ಮ ಖಾತೆಗಳೊಂದಿಗೆ ಲಿಂಕ್ (link) ಆಗಿರುತ್ತದೆ. ಹೀಗಾಗಿ ಈ ಸಂಸ್ಥೆಗಳಲ್ಲಿ ಕೂಡ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಯಾರಾದ್ರೂ ಸಾಲ (loan) ತೆಗೆದಿದ್ದರೋ ಇಲ್ಲವೋ ಎಂದು ಚೆಕ್ ಮಾಡಬಹುದು. ಹಾಗೆಯೇ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಾದ ಸಿಬಿಲ್, ಇಕ್ವಿಫ್ಯಾಕ್ಸ್ ಮುಂತಾದವುಗಳ ಮೂಲಕ ಕೂಡ ನಿಮ್ಮ ಪ್ಯಾನ್ ಸಂಖ್ಯೆ ಆಧರಿಸಿ ತೆಗೆಯಲಾದ ಸಾಲದ ಮಾಹಿತಿ ಪಡೆಯಬಹುದು. ಅಲ್ಲದೆ, ಪೇಟಿಎಂ (PTM), ಪಾಲಿಸಿ ಬಜಾರ್ ಮುಂತಾದ ಅಪ್ಲಿಕೇಷನ್ ಗಳಿಗೆ ಲಾಗಿ ಇನ್ ಆಗಿ ಕೂಡ ಸಾಲದ ಮಾಹಿತಿಗಳನ್ನು ಪಡೆಯಬಹುದು. ಇಂಥ ಫಿನ್ ಟೆಕ್ ಅಪ್ಲಿಕೇಷನ್ ಗಳು ಬಳಕೆದಾರರಿಗೆ ಸಿಬಿಲ್ ಸ್ಕೋರ್ (cibil score) ಮಾಹಿತಿಯನ್ನು ಸಾಲದ ಮಾಹಿತಿಗಳೊಂದಿಗೆ ನೀಡುತ್ತವೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1
ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್