ಕಲಬುರಗಿ: ಹಳ್ಳಿಯಲ್ಲಿದ್ಕೊಂಡೇ ಹತ್ತಾರು ಹೆಣ್ಮಕ್ಕಳಿಗೆ ಕೈತುಂಬ ಕೆಲಸ, ಮಹಿಳಾ ಉದ್ಯಮಿಯ ಸಾಹಸಗಾಥೆ

By Kannadaprabha News  |  First Published Sep 24, 2023, 10:00 PM IST

ಹಳ್ಳಿಯಲ್ಲೇ ಹತ್ತು ಹೆಣ್ಮಕ್ಕಳಿಗೆ ನಿತ್ಯ ಕೈತುಂಬ ಕೆಲಸ ನೀಡುವ ಯಶಸ್ವಿ ಮಹಿಳಾ ಉದ್ಯಮಿ, ಜಿಲ್ಲೆಯ ಅಫಜಲ್ಪುರ ತಾಲೂಕಿನ ಭೀಮಾ ತೀರದ ಮಣ್ಣೂರಿನ ಶಾರದಾಬಾಯಿ ಆಲೂರ್‌ ಇಂತಹ ಅಪರೂಪದ ಯಶಸ್ವಿ ಮಹಿಳಾ ಸಾಧಕಿ ಎನ್ನಬಹುದು.


ಶೇಷಮೂರ್ತಿ ಅವಧಾನಿ

ಕಲಬುರಗಿ(ಸೆ.24): ಹೆಣ್ಮಕ್ಕಳು ಯಾರಿಗೇನೂ ಕಮ್ಮಿ ಇಲ್ಲವೆಂದು ಗಟ್ಟಿ ಸಂದೇಶ ಸಾರುತ್ತಿದ್ದಾರೆ ಮಹಿಳಾ ಉದ್ಯಮಿ ಶಾರಾದಾಬಾಯಿ ಪುರುಷರು, ಮಹಿಳೆಯರು ಎಂದು ಲಿಂಗ ತಾರತಮ್ಯ ಇನ್ನೂ ಪೂರ್ಣ ತೊಲಗಿಲ್ಲ, ಇಂತಹ ಪರಿಸ್ಥಿತಿಯಲ್ಲೂ, ಮಹಿಳೆಯರ ಸಾಧನೆ ಅಲ್ಲಗಳೆಯಲಾಗದು.

Latest Videos

undefined

ಹಳ್ಳಿಯಲ್ಲೇ ಹತ್ತು ಹೆಣ್ಮಕ್ಕಳಿಗೆ ನಿತ್ಯ ಕೈತುಂಬ ಕೆಲಸ ನೀಡುವ ಯಶಸ್ವಿ ಮಹಿಳಾ ಉದ್ಯಮಿ, ಜಿಲ್ಲೆಯ ಅಫಜಲ್ಪುರ ತಾಲೂಕಿನ ಭೀಮಾ ತೀರದ ಮಣ್ಣೂರಿನ ಶಾರದಾಬಾಯಿ ಆಲೂರ್‌ ಇಂತಹ ಅಪರೂಪದ ಯಶಸ್ವಿ ಮಹಿಳಾ ಸಾಧಕಿ ಎನ್ನಬಹುದು.

ಭಾರತದ ನಂ. 1 ಸ್ಮಾರ್ಟ್‌ಫೋನ್ ರಫ್ತುದಾರ ಯಾವ್ದು ಗೊತ್ತಾ? ದೇಶದ ನಂ. 1 ಬ್ರ್ಯಾಂಡ್‌ಗೆ ಶಾಕ್‌!

ತಾವು ವಾಸವಿರುವ ಮಣ್ಣೂರು ಕುಗ್ರಾಮವಾದರೂ, ಸಾರಿಗೆ, ಸವಲತ್ತು, ರಸ್ತೆ ಸೇರಿದಂತೆ ಮೂಲ ಸವಲತ್ತಿನ ಎಲ್ಲವೂ ವಿರಳವಾಗಿದ್ದರೂ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಶಾರದಾಬಾಯಿ ಸಾಧನೆ ತೋರುತ್ತಿರುವ ಪರಿ ಅನನ್ಯ.

ಪುರುಷರಿಗಿಂತ ನಾವೇನು ಕಮ್ಮಿ ಎನ್ನುವಂತೆ ಸಾಧನೆ ದಾರಿಯಲ್ಲಿ ಸಾಗುತ್ತಿರುವ ಶರದಾಬಾಯಿ ಆಲೂರ್‌ ಬಸವೇಶ್ವರ ರೊಟ್ಟಿ ಕೇಂದ್ರವೆಂದು ಸಣ್ಣ ಪ್ರಮಾಣದಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿ, ಸತತ ಪರಿಶ್ರಮದಿಂದ, ಇಂದು ನಿತ್ಯ ಹತ್ತು ಮಹಿಳೆಯರಿಗೆ ನಿತ್ಯವೂ ಕೈತುಂಬ ಕೆಲಸ ನೀಡುತ್ತಿದ್ದಾರೆ.

ಮೂಲತಃ ಜೇವರ್ಗಿ ತಾಲೂಕಿನ ನೆಲೋಗಿಯವರಾದ ಶರದಾ ಮಣ್ಣೂರಿನ ಸಂಗನಬಸವಪ್ಪ ಆಲೂರ ಇ‍ರೊಂದಿಗೆ ಹಸೆಮಣೆ ಹತ್ತಿದವರೇ ಮಣ್ಣೂರಿಗೆ ಬಂದವರು. ಹೀಗೆ ಬಂದವರೇ ಸುಮ್ಮನೆ ಕೂಡಲಿಲ್ಲ. ಮದುವೆಯಾದ ಹೊಸದರಲ್ಲಿ ಅದು ಇದು ಎಂದು ಕೆಲಸಕ್ಕೆ ಮುಂದಾಗಿ ಎಲ್ಲಿಯೂ ಬೆಂಬಲ ಸಿಗದೆ ಸುಮ್ಮನಿದ್ದರು.

ನಂತರದಲ್ಲಿ ಕೆಲಕಾಲ ಕಲಬುರಗಿಯಲ್ಲಿ ಬಂದು ಇದ್ದಾಗಲೂ ಇವರಲ್ಲಿನ ಉದ್ಯಮಿ ಸುಮ್ಮನಿರಲಿಲ್ಲ. ಹೆಣ್ಮಕ್ಕಳಾದರೇನಂತೆ? ಏನಾದರೂ ಮಾಡಲೇಬೇಕು ಎಂಬ ಛಲದಿಂದ ಶರದಾ ಮಣ್ಣೂರಲ್ಲೇ ರೊಟ್ಟಿಕೇಂದ್ರ ಆರಂಭಿಸಿದರು. ಮೊದಮೊದಲು ಮನೆಯಲ್ಲಿ ತುಸು ವಿರೋಧ ಕಂಡರೂ ಸಹ ಎಲ್ಲೂ ಹೊರಗೆ ಹೋಗದೆ ಮನೆಯಲ್ಲೇ ತನಗೆ ಬಂದ ಕೆಲಸ ಮಾಡುತ್ತ ಅದರಲ್ಲೇ ಖುಷಿ ಕಾಣುತ್ತಿದ್ದಾಳಲ್ಲ ಸಾಕೆಂದು ಮನೆಮಂದಿ ಸುಮ್ಮನಾಗಿದ್ದರು.
ಆದರೆ, ಶರದಾ ಆರಂಭಿಸಿದ ರೊಟ್ಟಿ ಕೇಂದ್ರ ಹಾಗೇ ದಿನಗಳೆದಂತೆ ಜನಪ್ರೀಯವಾಯ್ತಲ್ಲದೆ ಅದೇ ಕೇಂದ್ರದಿಂದ ಶರದಾ ಈಗ ಶೇಂಗಾ ಹೋಳಿಗೆಯಿಂದ ಹಿಡಿದು ತರಹೇವಾರಿ ಪದಾಥರ್ರ್ರಗಳನ್ನೆಲ್ಲ ಸಿದ್ಧಪಡಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ.

ಮೊದಲು ತಾವೊಬ್ಬರೇ ಈ ಕೆಲಸ ಮಾಡುತ್ತಿದ್ದವರಿಗೆ ಬೇಡಿಕೆಯಂತೆ ಪದಾರ್ಥಗಳನ್ನು ಪೂರೈಸಲಾಗುತ್ತಿಲ್ಲ, ಹೀಗಾಗಿ ಇದಕ್ಕೆಂದೇ ರೊಟ್ಟಿ ಮಾಡಲು, ಶೇಂಗಾ ಹೋಳಿಗೆ ಸಿದ್ಧಪಡಿಸಲು, ಶೇಂಗಾ ಹಿಂಡಿ, ಚಟ್ನಿ, ಪುಟಾಣಿ, ಅಗಸಿ, ಹೀಗೆ ತರಹೇವಾರಿ ಹಿಂಡಿಗಳು, ಹುರಿದ ಶೇಂಗಾ ಇತ್ಯಾಗಿ ಸಿದ್ಧಪಡಿಸಲೆಂದೇ ನಿತ್ಯ 10ಕ್ಕೂ ಹೆಚ್ಚು ಹೆಣ್ಮಕ್ಕಳಿಗೆ ತಾವೇ ಕೆಲಸ ನೀಡುತ್ತಿದ್ದಾರೆ. ಹೀಗೆ ಇ‍ವರ ರೊಟ್ಟಿ ಕೇಂದ್ರಕ್ಕೆ ಕೆಲಸಕ್ಕೆ ಬರುವ ಮಹಿಳೆಯರಿಗೆ ನಿತ್ಯ ಕೂಲಿ ಕೊಡೋದಲ್ಲದೆ ಊಟೋಪಚಾರವೂ ಇದೆ. ಹೀಗೆ ಶರದಾ ಮೊದಮೊದಲು ತಮ್ಮ ಪಾಡಿಗೆ ತಾವಿದ್ದವರು ಏನಾದರೂ ಮಾಡಲೇಬೇಕು, ಅದರಲ್ಲಿಯೇ ಸಾಧನೆ ಮಾಡಬೇಕೆಂದು ಮುಂದಾಗಿ ಇದೀಗ ಯಶಸ್ವಿ ಮಹಿಲಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಶರದಾಳ ಕೆಲಸಕ್ಕೆ ಇವರ ಪತಿ ಸಂಗನಬಸಪ್ಪ ಆಲೂರ್‌ ಕೂಡಾ ಸಾಥ್‌ ನೀಡಿದ್ದಾರೆ. ಇವರು ರೈತರು. ಆದರೂ ಮನೆಯಲ್ಲಿದ್ದಾಗ ಪತ್ನಿ ಮಾಡುವ ಪದಾಥರ್ರ್ರಗಲಿಗೆ ಸೂಕ್ತ ಮಾರುಕಟ್ಟೆ ಹೊಂದಿಸಿಕೊಡುತ್ತಾರೆ. ಆಡರ್ರ್ರರ್‌ಗಳನ್ನು ಹೇಳಿದ ಸ್ಥಳಕ್ಕೆ ರವಾನಿಸುವ ಜವಾಬ್ದಾರಿ ಹೊತ್ತು ನಿಭಾಯಿಸುತ್ತಿದ್ದಾರೆ.

ಮೊದಲೆಲ್ಲಾ ಅದೆಲ್ಲಿ ಈ ಕೆಲ್ಸ ಮಾಡೋದಂತ ಅನ್ನಿಸಿ ನಾನೂ ಸುಮ್ಮನಿದ್ದೆ. ಹೆಂಂಡತಿಯ ಕೆಲಸಕ್ಕೆ ಭಾರಿ ಜನಪ್ರೀಯತೆ ಸಿಕ್ಕಮೇಲೆ ನಮಗೂ ಖುಷಿಯಾಗಿದೆ. ತಾನಲ್ಲದೇ ಇತರ 10ಕ್ಕೂ ಹೆಚ್ಚು ಮಹಿಳೆಯರಿಗೆ ಈಕೆಯೇ ಕೆಲಸ ನೀಡೋದು ಖುಷಿಯ ಮಾತು ಎಂದು ಸಂಗನಬಸಪ್ಪ ಸಂತಸ ಹಂಚಿಕೊಳ್ಳುತ್ತಾರೆ.

ದಶಕದ ಹಿಂದೆ ಕೇವಲ 4 ಸಾವಿರ ರುಪಾಯಿಯಿಂದ ತಮ್ಮ ರೊಟ್ಟಿ ಕೇಂದ್ರ ಶುರು ಮಾಡಿದ್ದ ಶಾರದಾ ಇದೀಗ ವಾಷಿರ್ರ್ರಕ ಸಹಸ್ರಾರು ರುಪಾಯಿ ವಹಿವಾಟು ಮಾಡುತ್ತಿದ್ದಾರೆ. ನನ್ನ ಬಲಿ ಈಗ 1. 40 ಲಕ್ಷ ಉಳಿತಾಯ ಹಣವಿದೆ. ಇದಲ್ಲದೆ ನಿತ್ಯ ಕೆಲಸಕ್ಕೆ ಬರೋರಿಗೆ ಆಗಂದಾಗಲೇ ಪಗಾರ್‌ ಕೊಟ್ಟು ಬಿಡುತ್ತಾರೆ. ತಾವು ಲವಲವಿಕೆಯಿಂದ ಇರೋದರ ಜೊತೆಗೇ ಇತರ 10 ಸಂಸಾರಗಳಿಗೂ ಆಸರೆಯಾಗಿದ್ದಾರೆ.

ಹಳ್ಳಿಗಾಡಲ್ಲಿ ಅದೂ ಮನೆಯಲ್ಲೇ ಕುಳಿತು ವ್ಯರ್ಥ ಕಾಲಹರಣಕ್ಕಿಂತ ಈ ಕೆಲಸ ಮಾಡೋದರಿಂದ ನನಗಂತೂ ತುಂಬ ನೆಮ್ಮದಿ ಸಿಕ್ಕಿದೆ ಎನ್ನುವ ಶಾರದಾ ಆಲೂರ್‌ ಕಾಯಕವೇ ಕೈಲಾಸವೆಂದು ಬಸವಣ್ಣನವರ ವಾಣಿಯಂತೆಯೇ ಸದಾ ಕಾಯಕಜೀವಿಯಾಗಿ ಮಣ್ಣೂರು ಮತ್ತು ಸುತ್ತಲಿನ ಹತ್ತಾರು ಹಳ್ಳಿ ಹೆಣ್ಮಕ್ಕಳಿಗೆ ಮಾದರಿಯಾಗಿದ್ದಾರೆ.

ಸವಿಯಾದ ಪದಾರ್ಥಗಳಿಗೆ ಹೆಸರುವಾಸಿ

ಶರದಾ ಆಲೂರ್‌ ಇವರ ರೊಟ್ಟಿ ಕೇಂದ್ರದಲ್ಲಿ ಈ ಕೆಳಗಿನ ಸವಿ ಪದಾರ್ಥಗಳು ಸದಾಕಾಲ ಲಭ್ಯ. ಶೇಂಗಾ ಹೋಳಿಗೆ, ಶೇಂಗಾ, ಪುಟಾಣಿ, ಅಗಸಿ ಹಿಂಡಿಗಳು (ಇವೆಲ್ಲವೂ ಒರಳುಕಲ್ಲಲ್ಲಿ ಕುಟ್ಟಿ ಪುಡಿ ಮಾಡಿದ್ದು), ಹುರಿದ ಶೇಂಗಾ ಕಾಳು, ಉಪ್ಪು ಹಚ್ಚಿದ್ದ ಶೇಂಗಾ ಕಾಳುಗಳು, ಚಕ್ಕುಲಿ, ಸೇವು, ಚುಡುವಾ ಹಾಗೂ ನೈಲನ್‌ ಸಾಬುದಾಣಾ.ಬಸವೇಶ್ವರ ರೊಟ್ಟಿ ಕೇಂದ್ರದಲ್ಲಿನ ಇವೆಲ್ಲ ಪದಾಥರ್ರ್ರಗಳಿಗೆ ಒಪ್ಪ ಓರಣವಾದಂತಹ ಪ್ಯಾಕಿಂಗ್‌ ಕೂಡಾ ಶರದಾ ಮಾಡುತ್ತಿದ್ದಾರೆ.

ಖಲಿಸ್ತಾನ ಉಗ್ರರ ಪರ ನಿಂತಿರುವ ಕೆನಡಾಕ್ಕೆ ಶಾಕ್ ಕೊಟ್ಟ ಮಹೀಂದ್ರಾ!

ಯಾವುದು ತೆರೆದು ಮಾರಾಟ ಮಾಡೋದಿಲ್ಲ ಇವರು. ಎಲ್ಲ ಪದಾಥರ್ರ್ರಕ್ಕೂ ಆಕಷರ್ರ್ರಕ ವಾಗಿರುವಂತೆ ಪ್ಯಾಕ್‌ ಮಾಡಿ ಮಾರುಕಟ್ಟೆಗೆ ಕೊಡುತ್ತಾರೆ. ಇದರಿಂದ ಶುಚುರುಚಿ ಎರಡು ಕಾಪಾಡಬಹುದು ಎನ್ನುತ್ತಾರೆ ಶರದಾ ಆಲೂರ್‌. ಮುಂದಿನ ದಿನಗಳಲ್ಲಿ ಬಾಳೆಹಣ್ಣು ಹಾಗೂ ಆಲುಗಡ್ಡೆಯ ಚಿಪ್ಸ್‌ ಸಿದ್ಧಪಡಿಸುವ ಯೋಜನೆ ಇವರದ್ದಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಯಲ್ಲಿ ತೊಡಗಿರುವ ಇವರು ಇದರಿಂದಲೂ ಹೆಚ್ಚಿನ ಮಹಿಳಾ ಉದ್ಯೋಗ ನೀಡಲಿದ್ದಾರೆ.

ಮಹಿಳಾ ಉದ್ಯಮಶೀಲತೆಗೆ ಬೆಂಬಲಿಸಿ

ಶರದಾ ಆಲೂರ್‌, ಸಂಗನಬಸಪ್ಪ ಆಲೂರ್‌ ಇವರ ಬಸವೇಶ್ವರ ರೊಟ್ಟಿ ಕೇಂದ್ರ ಸಂಪಕಿರ್ರ್ರಸಿ ಅಲ್ಲಿನ ಶುಚಿಯಾದ ಹಾಗೂ ರುಚಿಯಾದಂತಹ ಶೇಂಗಾ ಹೋಳಿಗೆ ಸಹಿತ ತರಹೇವಾರಿ ಪದಾರ್ಥ, ಹಿಂಡಿ, ಚಟ್ನಿಗಳನ್ನು ಸವಿಯಬಯಸುವವರು ಸಬಯಸುವವರು 81230 40382 ಅಥವಾ 85508 15560 ಗೆ ಕರೆ ಮಾಡಬಹುದಾಗಿದೆ. ನಿಮ್ಮ ಈ ಬೆಂಬಲ ಹಳ್ಳಿಯಲ್ಲಿನ ಮಹಿಳಾ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

click me!