ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದು ಅಗತ್ಯ. ಇದಕ್ಕಾಗಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ಲಿಂಕ್ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಇಂದು ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಎಲ್ಲ ಕೆಲಸಗಳಿಗೂ ಆಧಾರ ಕಡ್ಡಾಯ. ಇನ್ನು ಸರ್ಕಾರದ ಯಾವುದೇ ಯೋಜನೆ ಪ್ರಯೋಜನ ಪಡೆಯಲು ಕೂಡ ಆಧಾರ್ ಅಗತ್ಯ. ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದು ಅಗತ್ಯ ಎಂದು ಕಂದಾಯ ಇಲಾಖೆ ತಿಳಿಸಿದೆ. ನೀವು ಆನ್ ಲೈನ್ ಹಾಗೂ ಆಪ್ ಲೈನ್ ನಲ್ಲಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಮಾಡಬಹುದು. ಇನ್ನು ನೀವು ಆನ್ ಲೈನ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಬ್ಯಾಂಕಿಂಗ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹೊಂದಿರೋದು ಅಗತ್ಯ. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುವ ಕಾರಣ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದು ಅಗತ್ಯ. ಹಾಗಾದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ಆನ್ ಲೈನ್ ನಲ್ಲಿ ಲಿಂಕ್ ಮಾಡೋದು ಹೇಗೆ?
-ನೀವು ಖಾತೆ ಹೊಂದಿರುವ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಗೆ ಸೈನ್ ಇನ್ ಆಗಿ.
-'My Account' ಸೆಕ್ಷನ್ ಗೆ ಹೋಗಿ 'Services' ಪುಟಕ್ಕೆ ತೆರಳಿ ಹಾಗೂ 'View/Update Aadhaar card details' ಆಯ್ಕೆ ಮಾಡಿ.
-ಆಧಾರ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಿ ಹಾಗೂ ಆ ಬಳಿಕ 'Submit' ಬಟನ್ ಒತ್ತಿ.
ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ಬಳಿಕ ನಿಮಗೆ ನೋಟೀಫಿಕೇಷನ್ ಲಭಿಸುತ್ತದೆ.
Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ
ಮೊಬೈಲ್ ಹೊರತುಪಡಿಸಿ ಆಪ್ ಲೈನ್ ಮೂಲಕ ಕೂಡ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು. ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ಖಾತೆಗೆ ಲಿಂಕ್ ಮಾಡಬಹುದು. ಇದಕ್ಕಾಗಿ ಬ್ಯಾಂಕಿನಿಂದ ಅರ್ಜಿ ಪಡೆದು, ಮಾಹಿತಿಗಳನ್ನು ಭರ್ತಿ ಮಾಡಿ. ಆ ಬಳಿಕ ಫಾರ್ಮ್ ನಲ್ಲಿ ನಿಮ್ಮ ಸಹಿ ಹಾಗೂ ದಿನಾಂಕ ನಮೂದಿಸಿ. ಬಳಿಕ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅದನ್ನು ಬ್ಯಾಂಕಿಗೆ ನೀಡಿ. ಅವರು ನಿಮ್ಮ ಒರಿಜಿನಲ್ ಆಧಾರ್ ಕಾರ್ಡ್ ತೋರಿಸುವಂತೆ ಕೇಳಬಹುದು. ಅದನ್ನು ತೋರಿಸಿ.
ನೀವು ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ಮನವಿ ಸಲ್ಲಿಕೆ ಮಾಡಿದ ಬಳಿಕ ಲಿಂಕ್ ಮಾಡಲು ಕೆಲವು ದಿನಗಳು ಬೇಕಾಗುತ್ತವೆ. ಆಧಾರ್ ಲಿಂಕ್ ಮಾಡಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಇದರಲ್ಲಿ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಬಗ್ಗೆ ಮಾಹಿತಿಯಿರುತ್ತದೆ.
Money Making Ideas: ದುಡ್ಡು ಮಾಡೋದು ಹೇಗೆ? ಇಲ್ಲಿವೆ ಹತ್ತಾರು ದಾರಿಗಳು
ಸಣ್ಣ ಉಳಿತಾಯ ಯೋಜನೆಗೆ ಆಧಾರ್, ಪ್ಯಾನ್ ಕಡ್ಡಾಯ
ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ಅನ್ವಯ ಪಿಪಿಎಫ್, ಎಸ್ ಎಸ್ ವೈ, ಎನ್ ಎಸ್ ಸಿ, ಎಸ್ ಸಿಎಸ್ ಎಸ್ ಸೇರಿದಂತೆ ಯಾವುದೇ ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯುವಾಗ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರು 2023ರ ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು. ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದೆ ನೀವು ಯಾವುದೇ ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯಲು ಬಯಸಿದ್ರೆ ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಆಧಾರ್ ಸಂಖ್ಯೆ ಇಲ್ಲದ ಸಂದರ್ಭದಲ್ಲಿ ಆಧಾರ್ ನೋಂದಣಿ ಸಂಖ್ಯೆಯನ್ನು ಕೂಡ ನೀಡಬಹುದಾಗಿದೆ. ಒಂದು ವೇಳೆ ಸಣ್ಣ ಉಳಿತಾಯ ಖಾತೆ ತೆರೆದು ಆರು ತಿಂಗಳು ಕಳೆದ ಬಳಿಕವೂ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇನ್ನು ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ಹೊಂದಿದ್ದು, ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ.