ಭಾನುವಾರವೂ ನನ್ನ ನೋಡೋದು ನನ್ನ ಹೆಂಡತಿಗೆ ಇಷ್ಟ: ಆದಾರ್ ಪೂನಾವಾಲಾ

By Kannadaprabha News  |  First Published Jan 13, 2025, 10:16 AM IST

ಎಲ್&ಟಿ ಕಂಪನಿಯ ಸಿಇಒ ಅವರ 90 ಗಂಟೆಗಳ ಕೆಲಸದ ಹೇಳಿಕೆಗೆ ಪ್ರತಿಕ್ರಿಯಿಸಿದ ಸೀರಂ ಇನ್ಸ್‌ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ, 'ಭಾನುವಾರದಂದು ನನ್ನನ್ನು ನೋಡುವುದು ನನ್ನ ಹೆಂಡತಿಗೆ ಇಷ್ಟ' ಎಂದಿದ್ದಾರೆ. 


ಭಾನುವಾರವೂ ನನ್ನ ನೋಡೋದು ನನ್ನ ಹೆಂಡತಿಗೆ ಇಷ್ಟು ಪೂನಾವಾಲಾ
 

ನವದೆಹಲಿ: ಹೆಂಡತಿ ಮುಖ ಎಷ್ಟು ನೋಡುತ್ತೀರಿ, ವಾರಕ್ಕೆ 90 ಗಂಟೆ ದುಡಿಯಬೇಕು ಎಂಬ ಎಲ್-ಟಿ ಕಂಪನಿಯ ಸಿಇಒ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಗೆ ಟೀಕೆಗಳು ಮುಂದುವರೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾ‌ರ್, 'ನನ್ನ ಹೆಂಡತಿಯ ಪಾಲಿಗೆ ನಾನು ಸ್ಪುರದ್ರೂಪಿ, ಭಾನುವಾರದಂದು ನನ್ನನ್ನು ನೋಡುವುದು ಆಕೆಗೆ ಇಷ್ಟ' ಎಂದಿದ್ದಾರೆ. ಇತ್ತ 

Tap to resize

Latest Videos

ಶಾರ್ಕ್ ಟ್ಯಾಂಕ್‌ನ ಜಡ್ಜ್‌ಗಳಲ್ಲಿ ಒಬ್ಬರಾದ, ಶಾದಿ.ಕಾಮ್‌ನ ಸ್ಥಾಪಕ ಅನುಪಮ್ ಮಿತ್ತಲ್ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, 'ಪತಿ-ಪತ್ನಿಯರು ಪರಸ್ಪರ ನೋಡಿಕೊಳ್ಳದಿದ್ದರೆ, ಇಂತಹ ಭಾರೀ ಜನಸಂಖ್ಯೆಯುಳ್ಳ ದೇಶದಲ್ಲಿ ಇರುವುದಾದರೂ ಹೇಗೆ' ಎಂದು ಕೇಳಿದ್ದಾರೆ. ಇದೇ ವೇಳೆ, ಬಜಾಜ್ ಎಂಡಿ ರಾಜೀವ್ ಮಾತನಾಡಿ, 'ಕೆಲಸದ ಗುಣಮಟ್ಟ ಮುಖ್ಯವೇ ಹೊರತು ಸಮಯವಲ್ಲ. 90 ತಾಸು ಕೆಲಸ ಮಾಡುವುದಿದ್ದರೆ ಉನ್ನತ ಹುದ್ದೆಯಲ್ಲಿರುವವರಿಂದಲೇ ಶುರುವಾಗಲಿ' ಎಂದರು.

ಟ್ರಂಪ್ ಪ್ರಮಾಣಕ್ಕೆ ಜೈಶಂಕ‌ರ್ ಭಾರತದ ಪ್ರತಿನಿಧಿ
ನವದೆಹಲಿ: ಜ.20ರಂದು ನಡೆಯಲಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮ ದಲ್ಲಿ, ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗಿಯಾಗಲಿದ್ದಾರೆ. ಈ ವೇಳೆ ಜೈಶಂಕರ್, ಟ್ರಂಪ್ ಸರ್ಕಾರದ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಶಿಷ್ಟಾಚಾರ ಮುರಿದು ಜಿನ್‌ಪಿಂಗ್‌ಗೆ ಆಹ್ವಾನ
ನವದೆಹಲಿ: ಡೊನಾಲ್ಡ್ ಟ್ರಂಪ್ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಚೀನಾದ ಮಾಜಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ಹಲವು ದೇಶಗಳ ರಾಜಕೀಯ ಗಣ್ಯರು, ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಪೈಕಿ ಮಾಜಿ ರಾಜಕೀಯ ನಾಯಕರಿಗೂ ಆಹ್ವಾನ ಮೂಲಕ ಶಿಷ್ಟಾಚಾರ ಮುರಿಯಲಾಗಿದೆ.

LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್

90 ಗಂಟೆ ಕೆಲಸ: ಯಾವ ದೇಶದಲ್ಲಿ ವಾರಕ್ಕೆ ಗರಿಷ್ಠ ಗಂಟೆ ಕೆಲಸ ಅಂತಾ ಗೊತ್ತಿದ್ಯಾ?

click me!