1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ

By Mahmad Rafik  |  First Published Oct 27, 2024, 12:15 PM IST

ಗೃಹಿಣಿ ಸಂಗೀತಾ ಪಾಂಡೆ ಕೇವಲ 1500 ರೂ. ಬಂಡವಾಳದಿಂದ ಆರಂಭಿಸಿದ ಸಿಹಿ ತಿಂಡಿ ಬಾಕ್ಸ್ ತಯಾರಿಕಾ ಉದ್ಯಮ ಇಂದು 3 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಸಂಗೀತಾ ಇಂದು ನೂರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.


ಗೊರಖ್‌ಪುರ: ಉತ್ತರ ಪ್ರದೇಶದ ಗೊರಖ್‌ಪುರ ಜಿಲ್ಲೆಯ ಸಂಗೀತಾ ಪಾಂಡೆ ಕೇವಲ 1,500 ರೂಪಾಯಿಯಿಂದ ಆರಂಭಿಸಿದ ಉದ್ಯಮ ಇಂದು 3 ಕೋಟಿ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಸಾಮಾನ್ಯ ಕುಟುಂಬದ ಗೃಹಿಣಿಯಾಗಿದ್ದ ಸಂಗೀತಾ ಪಾಂಡೆ ಇಂದು ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಕುಟುಂಬದ ಜವಾಬ್ದಾರಿಗಳನ್ನು ಮರೆಯದ ಸಂಗೀತಾ ಪಾಂಡೆ ಯಶಸ್ವಿ ಉದ್ಯಮಿಯಾಗಿದ್ದು, ತನ್ನಂತಹ ಮಹಿಳೆಯರಿಗೆ ಕೆಲಸವನ್ನು ಸಹ ನೀಡಿದ್ದಾರೆ. ಹಾಗಾದ್ರೆ ಈ ಸಂಗೀತಾ ಪಾಂಡೆ ಯಾರು? ಇವರು ಆರಂಭಿಸಿದ ವ್ಯವಹಾ ಏನು ಅಂತ ನೋಡೋಣ ಬನ್ನಿ. 

ಗೊರಖ್‌ಪುರದ ಸಾಧಾರಣ ಕುಟುಂಬದ ಮಹಿಳೆ ಸಂಗೀತಾ ಪಾಂಡೆ ಅವರ ಜೀವನ ಸದಾ ಆರ್ಥಿಕ ಸಂಘರ್ಷದಿಂದ ಕೂಡಿತ್ತು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಸವಾಲುಗಳನ್ನು ಎದುರಿಸುತ್ತಲೇ ಬಂದ ಸಂಗೀತಾ ಪಾಂಡೆ, ಗೊರಖ್‌ಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 10 ವರ್ಷಗಳ ಹಿಂದೆ ಸಂಗೀತಾ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಕುಸಿದಿತ್ತು. ಹೊರಗೆ ಕೆಲಸ ಮಾಡೋಣ ಅಂದ್ರೆ ಮನೆಯಲ್ಲಿ ಚಿಕ್ಕ ಮಕ್ಕಳ ಜವಾಬ್ದಾರಿ ಇತ್ತು. ಹಾಗಾಗಿ ಮನೆಯಲ್ಲಿದ್ದುಕೊಂಡು ಏನಾದರೂ ಮಾಡಬೇಕು ಅಂತ ಅಂದುಕೊಂಡಾಗ ಕಣ್ಮುಂದೆ ಬಂದಿದ್ದು ಸಿಹಿ ತಿಂಡಿಯ ಬಾಕ್ಸ್ ತಯಾರಿಕೆ. 

Tap to resize

Latest Videos

10 ವರ್ಷಗಳ ಹಿಂದೆ ಕೇವಲ 1,500 ರೂಪಾಯಿ ಬಂಡವಾಳ ಹೂಡಿಕೆ ಮಾಡಿ ತಮ್ಮ ಉದ್ಯಮವನ್ನು ಆರಂಭಿಸಿದರು. ತಾವೇ ಅಂಗಡಿಗಳಿಗೆ ತೆರಳಿ ಬಾಕ್ಸ್ ತಯಾರಿಸಲು ಬೇಕಾಗುವ ಕಚ್ಛಾ ವಸ್ತುಗಳನ್ನು ಸೈಕಲ್ ಮೇಲೆ ತೆಗೆದುಕೊಂಡು ಬರುತ್ತಿದ್ದರು. ನಂತರ ಬಾಕ್ಸ್ ತಯಾರಿಸಿ ಸೈಕಲ್ ಮೇಲೆ ಹೋಗಿ ತಲುಪಿಸುತ್ತಿದ್ದರು. ಸಂಗೀತಾ ಪಾಂಡೆ ಹಲವು ಸವಾಲು ಮತ್ತು ಟೀಕೆಗಳನ್ನು ಸಹ ಎದುರಿಸಿದ್ದಾರೆ. ಯಾವುದಕ್ಕೂ ಎದೆಗುಂದದ ಸಂಗೀತಾ ಪಾಂಡೆ ಇಂದು ಮೂರು ಕೋಟಿ ಮೌಲ್ಯದ ಕಂಪನಿಯ ಒಡತಿಯಾಗಿದ್ದಾರೆ.

ಈ ಷೇರು ಖರೀದಿಸಿ ಊರಿನವರೆಲ್ಲಾ ಕೋಟ್ಯಾಧಿಪತಿಗಳಾದ್ರು; ₹100 ಹೂಡಿಕೆ, ₹14 ಕೋಟಿ ಆಯ್ತು!

ಸಂಗೀತಾ ಪಾಂಡೆ ಮೊದಲ ದಿನ 100 ಬಾಕ್ಸ್ ತಯಾರಿಸಿ ಮಾರಾಟ ಮಾಡಿದ್ದರು. ನಂತರ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ಗಳಿಸಲು ಬೇಡಿಕೆಗೆ ತಕ್ಕಂತೆ ಬಾಕ್ಸ್ ಡಿಸೈನ್ ಮತ್ತು ಕ್ವಾಲಿಟಿಯನ್ನು ಬದಲಿಸಿದ್ದರು. ಇಂತಹ ಸಂದರ್ಭದಲ್ಲಿ ನಷ್ಟ ಆಗಿರುವ ಪ್ರಸಂಗ ಸಹ ಎದುರಾಗಿತ್ತು. ಅಂತಿಮವಾಗಿ ಲಕ್ನೋದಿಂದ ಕಚ್ಛಾ ವಸ್ತುಗಳನ್ನು ಖರೀದಿ ಮಾಡಲ ಶುರು ಮಾಡಿದಾಗ ಡಬ್ಬಗಳ ಗುಣಮಟ್ಟ ಸುಧಾರಣೆ ಜೊತೆಯಲ್ಲಿ ಲಾಭದ ಪ್ರಮಾಣವೂ ಹೆಚ್ಚಳವಾಯ್ತು. ಹಂತ ಹಂತ ವ್ಯಾಪಾರ ವಿಸ್ತರಣೆ ಮಾಡಿಕೊಂಡು ಬೆಳೆದಿದ್ದಾರೆ. 

ಮುಂದಿನ ದಿನಗಳಲ್ಲಿ 35 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಫ್ಯಾಕ್ಟರಿ ಆರಂಭಿಸಿ, ಉತ್ಪಾದನೆಯನ್ನು ಹೆಚ್ಚಿಸಿಕೊಂಡರು. ಇಂದು ಡಬ್ಬಗಳ ತಯಾರಿಕೆಗಾಗಿ ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿದ್ದಾರೆ. ಈಗ ಈ ಬಾರಿಯ ದೀಪಾವಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ವಿಶೇಷ ಸಾವಯವ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ. 100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ಮುಂದಿನ ವಾರ ಈ 5 ಸ್ಟಾಕ್‌ಗಳು ನೀಡಲಿವೆ  ಬಂಪರ್ ರಿಟರ್ನ್ಸ್? ಮರೆಯದೇ ನಿಮ್ಮ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ!

click me!