ಡಾಲಿ ಖನ್ನಾ ಶೇರ್ ಮಾರ್ಕೆಟಲ್ಲಿ ಈಕೆ ಮುಟ್ಟಿದೆಲ್ಲಾ ಚಿನ್ನ: ಈಕೆ ಹೂಡಿಕೆ ಮಾಡಿದ 5 ಟಾಪ್ ಷೇರುಗಳಿವು

By Anusha Kb  |  First Published Oct 26, 2024, 6:40 PM IST

ಚೆನ್ನೈ ಮೂಲದ ಡಾಲಿ ಖನ್ನಾ ಷೇರು ಮಾರುಕಟ್ಟೆಯಲ್ಲಿ ಜಾಣತನದ ಹೂಡಿಕೆಯಿಂದ ಕೋಟಿಗಟ್ಟಲೆ ಸಂಪಾದಿಸಿದ್ದಾರೆ. ಐದು ಪ್ರಮುಖ ಷೇರುಗಳು ಅವರ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಡಾಲಿ ಖನ್ನಾ ಅವರ ಹೂಡಿಕೆ ತಂತ್ರ ಮತ್ತು ಯಶಸ್ಸಿನ ಕಥೆ ಇಲ್ಲಿದೆ.


ಷೇರುಪೇಟೆಯ ನಾಡಿಮಿಡಿತವನ್ನು ಹಿಡಿದರೆ ಜೀವನದಲ್ಲಿ ಮತ್ತೆ ಹಿಂತಿರುಗಿ ನೋಡುವುದಿಲ್ಲ ಅಷೊಂದು ಲಾಭದಾಯಕ ಈ ಷೇರು ಮಾರುಕಟ್ಟೆ, ಆದರೆ ಹೂಡಿಕೆ ವೇಳೆ ಎಚ್ಚರ ತಪ್ಪಿದರೆ ಬದುಕು ಬರಡಾಗೋದು ಗ್ಯಾರಂಟಿ. ಆದರೆ ಇಲ್ಲೊಬ್ಬರು ಚೆನ್ನೈ ಮೂಲದ ಯುವತಿ ಷೇರು ಮಾರುಕಟ್ಟೆಯಲ್ಲಿ ಜಾಣತನದಿಂದ ಹೂಡಿಕೆ ಮಾಡುವ ಮೂಲಕ ಕೋಟ್ಯಾಂತರ ರೂ ಗಳಿಕೆ ಮಾಡಿದ್ದಾರೆ. ಪುರುಷರಿಗೆ ವ್ಯವಹಾರ ಮಾಡುವುದಕ್ಕಷ್ಟೇ ಷೇರುಪೇಟೆ ಬೆಸ್ಟ್ ಎಂಬ ಮಾತುಗಳನ್ನು ಸುಳ್ಳು ಮಾಡಿರುವ ಚೆನ್ನೈನ ಈ ಡಾಲಿ ಖನ್ನಾ ಅವರ ಅದೃಷ್ಟವನ್ನು ಬದಲಿಸುವಲ್ಲಿ ಈ ಐದು ಷೇರುಗಳು ಪ್ರಮುಖ ಪಾತ್ರವಹಿಸಿದೆ. ಈ ಷೇರುಗಳ ಮೂಲಕ ಕೋಟ್ಯಾಂತರ ರೂ ಗಳಿಕೆ ಮಾಡಿದ್ದಾರೆ ರಾಶಿ ಖನ್ನಾ, ಅವರ ಈ ಷೇರು ಮಾರುಕಟ್ಟೆ ಜೀವನದ ಬಗ್ಗೆ ಇಲ್ಲಿದೆ ಡಿಟೇಲ್‌ ಸ್ಟೋರಿ. 

ಪತಿಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಡಾಲಿ

Tap to resize

Latest Videos

ಇಂದು ಷೇರು ಮಾರುಕಟ್ಟೆಯ ಪ್ರಸಿದ್ಧ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ಡಾಲಿ ಖನ್ನಾ ಅವರು ಪತಿ ರಾಜೀವ್ ಖನ್ನಾ ಅವರೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ವರದಿಗಳ ಪ್ರಕಾರ, ಪ್ರಸ್ತುತ ಅವರು ತಮ್ಮ ಪೋರ್ಟ್‌ಪೊಲಿಯೊದಲ್ಲಿ 19 ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ. ಅದರ ಒಟ್ಟು ಮೌಲ್ಯ ಸುಮಾರು 460 ಕೋಟಿ ರೂ. ಇವುಗಳಲ್ಲಿ, ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಸಕ್ಕರೆ ಕಂಪನಿಗಳು ಷೇರುಗಳೇ ಅಧಿಕ. ಈ ಮೂರು ಕ್ಷೇತ್ರಗಳಲ್ಲಿ ಅವರ ಹೂಡಿಕೆ ಸುಮಾರು ಶೇಕಡಾ 33%.

ಇದಲ್ಲದೆ, ಡಾಲಿ ಖನ್ನಾ ಅವರು ಹೋಟೆಲ್‌ಗಳು, ಆಟೋ ಆ್ಯನ್ಸಿಲರಿ, ಫೈನಾನ್ಸ್-ಜನರಲ್, ಬ್ರೇವರೇಜಸ್‌ ಮತ್ತು ಡಿಸ್ಟಿಲರೀಸ್, ರಿಫೈನರಿಗಳು, ಜವಳಿ, ನಿರ್ಮಾಣ, ಗಣಿಗಾರಿಕೆ ಮತ್ತು ಖನಿಜಗಳು, ಲೋಹ ವಲಯಗಳ ಷೇರುಗಳಲ್ಲಿ ತಲಾ 5% ಹೂಡಿಕೆಯನ್ನು ಹೊಂದಿದ್ದಾರೆ. ಹಣ ಹೂಡಿಕೆ ವೇಳೆ ಡಾಲಿ ಖನ್ನಾ ಹೆಚ್ಚಾಗಿ ಸಣ್ಣ ಹಾಗೂ ಮಧ್ಯಮ ಕಂಪನಿಗಳನ್ನೇ ಆಯ್ಕೆ ಮಾಡುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಡಾಲಿ 

ಡಾಲಿ ಖನ್ನಾ ಬಗ್ಗೆ ಹೇಳುವುದಾದರೆ, ಅವರು ಹೂಡಿಕೆ ಮಾಡಿದ ಷೇರುಗಳೆಲ್ಲ ಉತ್ತಮ ಗಳಿಕೆ ಮಾಡುತ್ತವೆ.  ಈ ಕಾರಣದಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಈಕೆಯನ್ನು 'ಲೇಡಿ ವಿತ್ ಮಿಡಾಸ್ ಟಚ್'(ಕೈ ಹಾಕಿದ್ದೆಲ್ಲಾ ಯಶಸ್ವಿಯಾಗುವ ಅರ್ಥ) ಎಂದು ಕರೆಯಲಾಗುತ್ತದೆ. ಹೀಗಾಗಿ ಡಾಲಿ ಖನ್ನಾ ಅವರಂತೆ ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು, ಸಣ್ಣ ಹೂಡಿಕೆದಾರರು ಡಾಲಿ ಖನ್ನಾ ಅವರ ಪೋರ್ಟ್‌ಫೋಲಿಯೊವನ್ನು ವಿಶ್ಲೇಷಿಸುವುದಲ್ಲದೆ ಅದರ ಮೇಲೆಯೇ ಸೂಕ್ಷ್ಮವಾಗಿ ಒಂದು ಕಣ್ಣಿಟ್ಟಿರುತ್ತಾರೆ.

ಡಾಲಿ ಖನ್ನಾ ಅವರ 5 ಮಾಂತ್ರಿಕ ಷೇರುಗಳು ಯಾರು?
ವರದಿಗಳ ಪ್ರಕಾರ, ಡಾಲಿ ಖನ್ನಾ ಅವರ ಪೋರ್ಟ್‌ಫೋಲಿಯೊದಲ್ಲಿ ಕೇವಲ 5 ಸ್ಟಾಕ್‌ಗಳು ಅವರಿಗೆ ಶೇ.93 ರಷ್ಟು ಆದಾಯವನ್ನು ನೀಡಿವೆ.  ಸೆಲ್ಜರ್ ಎಲೆಕ್ಟ್ರಾನಿಕ್ಸ್, ಜುವಾರಿ ಇಂಡಸ್ಟ್ರೀಸ್, ಚೆನ್ನೈ ಪೆಟ್ರೋಲಿಯಂ, ಪಾಂಡಿ ಆಕ್ಸೈಡ್ಸ್ ಮತ್ತು ಕೆಮಿಕಲ್ಸ್ ಮತ್ತು ರೆಪ್ಕೊ ಹೋಮ್ ಫೈನಾನ್ಸ್. ಇವೇ ಆ 5 ಸ್ಟಾಕ್‌ಗಳಾಗಿದ್ದು, ಎಲ್ಲದರಲ್ಲೂ ಡಾಲಿ ಖನ್ನಾ ಪಾಲು ಶೇ.1 ರಿಂದ 2 ರಷ್ಟಿದೆ.

ಯಾವ ಸ್ಟಾಕ್‌ನ  ಬೆಲೆ ಎಷ್ಟು?
ಸೆಲ್ಜರ್ ಎಲೆಕ್ಟ್ರಾನಿಕ್ಸ್‌ನಲ್ಲಿ ಡಾಲಿ ಖನ್ನಾ ಅವರ ಪಾಲು ಶೇಕಡಾ 1.04 ಆಗಿದೆ. ಮೇ 2024 ರವರೆಗೆ ಈ ಷೇರುಗಳಲ್ಲಿ ಅವರ ಹೂಡಿಕೆಯ ಒಟ್ಟು ಮೌಲ್ಯ 14 ಕೋಟಿ ರೂ. ಅದೇ ರೀತಿ, ಜುವಾರಿ ಇಂಡಸ್ಟ್ರೀಸ್‌ನಲ್ಲಿ ಅವರ ಪಾಲು ಶೇಕಡಾ 1.83 ಆಗಿದೆ. ಮೇ 2024 ರಲ್ಲಿ ಈ ಷೇರುಗಳಲ್ಲಿನ ಹೂಡಿಕೆಯ ಒಟ್ಟು ಮೌಲ್ಯವು ಸುಮಾರು 17 ಕೋಟಿ ರೂ. ಡಾಲಿ ಖನ್ನಾ ಅವರು ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ 1.09% ಪಾಲನ್ನು ಹೊಂದಿದ್ದಾರೆ. ಮೇ 2024 ರವರೆಗಿನ ಅವರ ಷೇರುಗಳ ಒಟ್ಟು ಮೌಲ್ಯವು ಸುಮಾರು 157 ಕೋಟಿ ರೂ. ಪಾಂಡಿ ಆಕ್ಸಿಡೇಸ್ ಮತ್ತು ಕೆಮಿಕಲ್ ಷೇರುಗಳಲ್ಲಿ ಅವರ ಪಾಲು 1.32% ಆಗಿದ್ದರೆ, ಅವರ ಷೇರುಗಳ ಒಟ್ಟು ಮೌಲ್ಯ 10 ಕೋಟಿ ರೂ. ಅದೇ ಸಮಯದಲ್ಲಿ, ರೆಪ್ಕೊ ಫೈನಾನ್ಸ್‌ನಲ್ಲಿ ಅವರ ಪಾಲು 1.11% ಆಗಿದೆ, ಇದರ ಒಟ್ಟು ಮೌಲ್ಯವು ಮೇ 2024 ರವರೆಗೆ 36 ಕೋಟಿ ರೂ.

ನೋಡಿದ್ರಲ್ಲ, ಹೇಗೆ ಷೇರು ಮಾರುಕಟ್ಟೆಯಲ್ಲಿ ಅವರು ಜಾಣತನದಿಂದ ಹಣ ಹೂಡಿಕೆ ಮಾಡಿ ಹೇಗೆ ಲಾಭ ಗಳಿಸಿದ್ರು ಅಂತ. 

click me!