ದಕ್ಷಿಣ ಭಾರತೀಯರು ಅತೀ ಹೆಚ್ಚು ಮೂರ್ಖರ ಪೆಟ್ಟಿಗೆ ಹೊಂದಿರುವ ಬುದ್ದಿವಂತರು!

By Web DeskFirst Published Aug 29, 2018, 1:20 PM IST
Highlights

ಸಿನಿಪ್ರಿಯ ದಕ್ಷಿಣ ಭಾರತೀಯರ ಟಿವಿ ಮೋಹ! BARC ಸರ್ವೆಯಲ್ಲಿ ಬಹಿರಂಗವಾದ ಸತ್ಯ! ದಕ್ಷಿಣ ಭಾರತ ಅತೀ ಹೆಚ್ಚು ಟಿವಿ ಸೆಟ್ ಹೊಂದಿದ ಪ್ರದೇಶ! ಒಟ್ಟು 259 ಮಿಲಿಯನ್ ಟಿವಿ ಸೆಟ್‌ಗಳು! ಶೇ. 95 ರಷ್ಟು ಮನೆಯಲ್ಲಿವೆ ಮೂರ್ಖರ ಪೆಟ್ಟಿಗೆ

ನವದೆಹಲಿ(ಆ.29): ಜಗತ್ತು ವೇಗವಾಗಿ ಡಿಜಿಟಲ್ ಪ್ಲಾಟ್ ಫಾರ್ಮ್ ನತ್ತ ಹೆಜ್ಜೆ ಹಾಕುತ್ತಿದೆ. ವಿಶ್ವದ ಎಲ್ಲಾ ಆಗುಹೋಗುಗಳನ್ನು ಮೊಬೈಲ್‌ನಲ್ಲೇ ಪಡೆಯುತ್ತಿರುವ ಮಾನವ, ಆಧುನಿಕ ಜಗತ್ತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ.

ಆದರೆ ಸಿನಿಪ್ರಿಯ, ಧಾರಾವಾಹಿ ಪ್ರಿಯ ದಕ್ಷಿಣ ಭಾರತದ ಜನ ತಮ್ಮ ಟಿವಿ ಮೋಹವನ್ನು ಮಾತ್ರ ಇದುವರೆಗೂ ಬಿಟ್ಟು ಕೊಟ್ಟಿಲ್ಲ ಎಂಬುದು ಹೊಸ ಸರ್ವೆಯೊಂದರಿಂದ ಬಹಿರಂಗವಾಗಿದೆ.

ಹೌದು, ದೂರದರ್ಶನ ಮಾಪಕ ಸಂಸ್ಥೆ BARC(ಬ್ರಾಡಕಾಸ್ಟಿಂಗ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ನಡೆಸಿರುವ ಸರ್ವೆ ಪ್ರಕಾರ ದಕ್ಷಿಣ ಭಾರತದ ಶೇ. 95ರಷ್ಟು ಮನೆಯಲ್ಲಿ ಟಿವಿ ಸೆಟ್‌ಗಳು ಇವೆಯಂತೆ. ಇಡೀ ಭಾರತದಲ್ಲಿ ಶೇ. 96 ರಷ್ಟು ಮನೆಗಳಲ್ಲಿ ಟಿವಿ ಸ್ಟ್‌ಗಳಿದ್ದರೆ, ದಕ್ಷಿಣ ಭಾರತದಲ್ಲಿ ಇದರ ಸಂಖ್ಯೆ ಜಾಸ್ತಿ ಎಂದು BARC ವರದಿಯಲ್ಲಿ ಹೇಳಲಾಗಿದೆ.

ಸಿನಿಪ್ರಿಯ ದಕ್ಷಿಣ ಭಾರತೀಯರು ಮನೆಯಲ್ಲಿ ಟಿವಿ ಹೊಂದಿರುವುದನ್ನು ಸಂಭ್ರಮಿಸುತ್ತಾರೆ ಎಂದು BARC ತನ್ನ ವರದಿಯಲ್ಲಿ ತಿಳಿಸಿದೆ. ಇದೇ ಕಾರಣಕ್ಕೆ ಶೇ‌.95 ರಷ್ಟು ದಕ್ಷಿಣ ಭಾರತೀಯರು ಟಿವಿ ಸೆಟ್ ಹೊಂದಿದ್ದಾರೆ ಎಂದು BARC ತಿಳಿಸಿದೆ.

ಮನೆಗೆ ವಿದ್ಯುತ್ ಸಂಪರ್ಕ ದೊರೆಯುತ್ತಿದ್ದಂತೇ ದಕ್ಷಿಣ ಭಾರತೀಯರು ಮೊದಲು ಕೊಳ್ಳುವ ಎಲೆಕ್ಟ್ರಿಕ್ ವಸ್ತುವೇ ಟಿವಿ ಎಂಬುದೂ ಅಧ್ಯಯನದಿಂದ ತಿಳಿದುಬಂದಿದೆ.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು 259 ಮಿಲಿಯನ್ ಟಿವಿ ಸೆಟ್ ಗಳಿವೆ ಎಂಬುದು ಈ ಅಧ್ಯಯನದಿಂದ ಬಹಿರಂಗವಾಗಿದೆ. ಉತ್ತರ ಭಾರತದಲ್ಲಿ 209 ಮಿಲಿಯನ್. ಪಶ್ಚಿಮ ಭಾರತದಲ್ಲಿ 221 ಮಿಲಿಯನ್ ಮತ್ತು ಪೂರ್ವ ಭಾರತದಲ್ಲಿ ಕೇವಲ 146 ಮಿಲಿಯನ್ ಟಿವಿ ಸೆಟ್‌ಗಳಿವೆ ಎಂದು ಹೇಳಲಾಗಿದೆ.

click me!