Richest children’s of India: ಈ ಲೇಖನದಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಮಕ್ಕಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯ ಮಕ್ಕಳ ಜೊತೆಗೆ, ಇತರ ಪ್ರಮುಖ ಉದ್ಯಮಿಗಳ ಉತ್ತರಾಧಿಕಾರಿಗಳ ಬಗ್ಗೆ ತಿಳಿದುಕೊಳ್ಳಿ.
ಭಾರತದ ಅತ್ಯಂತ ಶ್ರೀಮಂತರ ಮಕ್ಕಳು ಇವರು. ಈ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯ ಮಕ್ಕಳು ಸಹ ಸೇರಿದ್ದಾರೆ. ಹಾಗಾದ್ರೆ ಇನ್ನುಳಿದವರು ಯಾರು ಎಂಬುದರ ಮಾಹಿತಿ ಇಲ್ಲಿದೆ.
1.ಆಕಾಶ್ ಅಂಬಾನಿ-ಅನಂತ್ ಅಂಬಾನಿ
ಜಿಯೋ ಕಂಪನಿಯ ಮಾಲೀಕತ್ವ ಆಕಾಶ್ ಅಂಬಾನಿ ಬಳಿಯಲ್ಲಿದೆ. ಇನ್ನು ಅನಂತ್ ಅಂಬಾನಿ ತಂದೆಯ ಹಲವು ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಮುಕೇಶ್ ಅಂಬಾನಿ ದೇಶದ ಶ್ರೀಮಂತ ಉದ್ಯಮಿಯಾಗಿದ್ದು, ವರದಿ ಪ್ರಕಾರ ಇವರ ಆಸ್ತಿ 7,65,348 ಲಕ್ಷ ಕೋಟಿ ರೂಪಾಯಿ ಆಗಿದೆ.
undefined
2.ದೇಶದ ಎರಡನೇ ಉದ್ಯಮಿ ಗೌತಮ್ ಅದಾನಿ ಪುತ್ರನ ಹೆಸರು ಕರಣ್ ಅದಾನಿ. ಇವರು ಅದಾನಿ ಪೋರ್ಟ್ ಎಂಡ್ ಸೇಲ್ ಮ್ಯಾನೇಜಿಂಗ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ ಗೌತಮ್ ಅದಾನಿ (Adani Group) ಒಟ್ಟು ಆಸ್ತಿ 6.81 ಲಕ್ಷ ಕೋಟಿ ರೂಪಾಯಿ ಆಗಿದೆ.
3.ಭಾರತದ ನಾಲ್ಕನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ ಶಿವ ನಾದರ್ ಅವರ ಪುತ್ರಿ ರೋಶನಿ ನಾದರ್ ಸಹ ಮಾರುಕಟ್ಟೆಯಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ರೋಶನಿ ನಾದರ್ ತಮ್ಮನ್ನು ಬ್ಯುಸಿನೆಸ್‌ವುಮೆನ್ ಆಗಿ ಗುರುತಿಸಿಕೊಂಡಿದ್ದು, HCL ಟೆಕ್ ಮುಖ್ಯಸ್ಥೆಯಾಗಿದ್ದಾರೆ. ವರದಿ ಪ್ರಕಾರ, ಶಿವ ನಾದರ್ 3.38 ಲಕ್ಷ ಕೋಟಿ ರೂ. ಮಾಲೀಕರಾಗಿದ್ದಾರೆ.
4.ಆದಾರ್ ಪೂನಾವಾಲಾ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಚೀಫ್ ಎಕ್ಸಿಕ್ಯೂಟಿವ್ ಮತ್ತು ಪೂನಾವಾಲಾ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿದ್ದಾರೆ. ಇವರ ತಂದೆ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕರು. ಫೋರ್ಬ್ಸ್ ಪ್ರಕಾರ ಪೂನಾವಾಲಾ ಅವರ ನೆಟ್ ವರ್ತ್ 1.94 ಲಕ್ಷ ಕೋಟಿ ರೂಪಾಯಿ ಆಗಿದೆ.
5.ವಿಪ್ರೋ ಎಕ್ಸಿಕ್ಯೂಟಿವ್ ಚೇರ್‌ಮ್ಯಾನ್ ಆಗಿರುವ ರಿಶಾದ್ ಪ್ರೇಮ್‌ಜಿ ಅವರ ತಂದೆ ಖ್ಯಾತ ಉದ್ಯಮಿ ಅಜೀಂ ಪ್ರೇಮ್‌ಜೀ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಅಜೀಂ ಪ್ರೇಮ್‌ಜೀ ನೆಟ್‌ವರ್ತ್ 1,200 ಕೋಟಿ ಅಮೆರಿಕನ್ ಡಾಲರ್ ಆಗಿದೆ.
ಹೆಜ್ಜೆ ಹೆಜ್ಜೆಯಲ್ಲೂ ಮಹಿಳೆಯರಿಗೆ ನೆರವಾಗುವ ಸರ್ಕಾರದ ಈ ಯೋಜನೆಗಳ ಬಗ್ಗೆ ನಿಮಗೆ ತಿಳಿದಿದೆಯೇ?
6.ಸಿಂಗರ್ ಸಾಂಗ್ ರೈಟರ್ ಮತ್ತು ಎಂಟರ್‌ಟೈನರ್ ಅನನ್ಯಾ ಬಿರ್ಲಾ ಸಹ ಭಾರತದ ಶ್ರೀಮಂತರ ಮಕ್ಕಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ 9ನೇ ಶ್ರೀಮಂತ ವ್ಯಕ್ತಿಯಾಗಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿಯಾಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, ಇವರ ಆಸ್ತಿ 2.08 ಲಕ್ಷ ಕೋಟಿ ರೂಪಾಯಿ ಆಗಿದೆ.
7.ಮಿತ್ತಲ್ ಹೈಕ್ ಸಿಇಓ ಮತ್ತು ಫೌಂಡರ್ ಕೆವಿನ್ ಭಾರತಿ ಮಿತ್ತಲ್ ತಂದೆ ಹೆಸರು ಸುನಿಲ್ ಮಿತ್ತಲ್. ವರದಿ ಪ್ರಕಾರ, ಸುನಿಲ್ ಮಿತ್ತಲ್ ಅವರ ನೆಟ್‌ವರ್ತ್ 139,759.20 ಕೋಟಿ ಆಗಿದೆ.
8.ಆದಿತ್ಯ ಮಿತ್ತಲ್, ಹಾಯರ್ ಮತ್ತು ಆರ್ಸಿಲ್ ಮಿತ್ತಲ್ ಸಿಇಓ ಆಗಿದ್ದಾರೆ. ಭಾರತದ ಜನಪ್ರಿಯ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಪುತ್ರರಾಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, ಲಕ್ಷ್ಮೀ ಮಿತ್ತಲ್ 15.9 ಬಿಲಿಯನ್ ಡಾಲರ್ (132,272.10 ಕೋಟಿ ರೂ) ಆಗಿದೆ.
9.ಅಶ್ನಿ ಬಿಯಾನಿ ಸಹ ಶ್ರೀಮಂತ ಉದ್ಯಮಿಗಳ ಮಕ್ಕಳಲ್ಲಿ ಒಬ್ಬರಾಗಿದ್ದಾರೆ. ಫ್ಯೂಚರ್ ಗ್ರೂಪ್ ಫೌಂಡರ್ ಕಿಶೋರಿ ಬಿಯಾನಿ ಅವರ ಪುತ್ರಿಯಾಗಿದ್ದಾರೆ. ಕಿಶೋರಿ ಬಿಯಾನಿ ನೆಟ್‌ವರ್ತ್ 1.78 ಬಿಲಿಯನ್ ಡಾಲರ್ ಆಗಿದೆ.
ಮೂರು ದಿನಗಳಿಂದ ಇಳಿಮುಖದತ್ತ ಚಿನ್ನ, ಬೆಳ್ಳಿ; ಇಂದೂ ಸಹ ಕಡಿಮೆಯಾಗಿದೆ ಬಂಗಾರದ ಬೆಲೆ!