ಮೂರು ದಿನಗಳಿಂದ ಇಳಿಮುಖದತ್ತ ಚಿನ್ನ, ಬೆಳ್ಳಿ; ಇಂದೂ ಸಹ ಕಡಿಮೆಯಾಗಿದೆ ಬಂಗಾರದ ಬೆಲೆ!

By Mahmad Rafik  |  First Published Sep 19, 2024, 9:33 AM IST

ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಮುಖವಾಗಿ ಸಾಗುತ್ತಿದೆ. ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದೆ.


ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಮುಖವಾಗಿ ಸಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 6,849
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 7,472

Tap to resize

Latest Videos

undefined

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 54,792
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 59,776

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 68,490
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 74,720

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  6,84,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 7,47,200

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 74,720 ಆಗಿದ್ದರೆ ಚೆನ್ನೈ 74,720 ಮುಂಬೈ  74,720 ಹಾಗೂ ಕೋಲ್ಕತ್ತಾದಲ್ಲಿ 74,720 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 74,870 ರೂ. ಆಗಿದೆ. 

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

71,100 ಉದ್ಯೋಗ ನೀಡಲಿದ್ದಾರೆ ಗೌತಮ್ ಅದಾನಿ… ಇದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಲಕ್ಷ ಕೋಟಿಯ ಮಾಸ್ಟರ್ ಪ್ಲಾನ್

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ಹಾಗೆಯೇ ಬೆಂಗಳೂರಲ್ಲಿ  10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 859 ರೂ. 8590 ಹಾಗೂ ರೂ. 85900 ರೂ.ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 95,900 ಆಗಿದ್ದರೆ,  ಮುಂಬೈನಲ್ಲಿ ರೂ. 90,900 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 90,900 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 90,900

ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು. ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.

ಅನಿಲ್ ಅಂಬಾನಿಗೆ ಹೊಡೀತು ಜಾಕ್‌ಪಾಟ್, ತೆರೆಯಿತು ಭಾಗ್ಯದ ಬಾಗಿಲು;  ₹1 ಲಕ್ಷ ಈಗ 27 ಲಕ್ಷ ಆಯ್ತು!

click me!