ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌, ಜುಲೈಯಲ್ಲಿ ಶೇ.4ರಷ್ಟು ತುಟ್ಟಿಭತ್ಯೆ ಏರಿಕೆ ಸಾಧ್ಯತೆ!

By Suvarna NewsFirst Published Jun 24, 2022, 8:22 AM IST
Highlights

* ಕೇಂದ್ರ ಸರ್ಕಾರವು ಉದ್ಯೋಗಿಗಳ ತುಟ್ಟಿಭತ್ಯೆ ಏರಿಕೆ ಮಾಡುವ ಸಾಧ್ಯತೆ

* ತುಟ್ಟಿಭತ್ಯೆ ಶೇ. 38ಕ್ಕೆ ಏರಿಕೆಯಾಗಲಿದೆ

* 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಳಿಗೆ ಹಾಗೂ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ನೆರವು

ನವದೆಹಲಿ: ಕೇಂದ್ರ ಸರ್ಕಾರವು ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಜುಲೈ ತಿಂಗಳಿನಲ್ಲಿ ಮತ್ತೆ ಶೇ. 4ರಷ್ಟನ್ನು ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ತುಟ್ಟಿಭತ್ಯೆ ಶೇ. 38ಕ್ಕೆ ಏರಿಕೆಯಾಗಲಿದೆ. ಅಲ್ಲದೆ, ಉದ್ಯೋಗಿಗಳ ಫಿಟ್‌ಮೆಂಟ್ ಅಂಶವೂ ಹೆಚ್ಚಾಗಬಹುದು ಎಂಬ ಮಾತುಗಲೂ ಕೇಳಿ ಬಂದಿವೆ. ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂದು ನೌಕರರ ಸಂಘ ಬಹಳ ದಿನಗಳಿಂದ ಒತ್ತಾಯಿಸುತ್ತಿದೆ. ಪ್ರಸ್ತುತ ಸರಕಾರಿ ನೌಕರರು 2.57 ಫಿಟ್‌ಮೆಂಟ್‌ ಅಂಶ ಪಡೆಯುತ್ತಿದ್ದು, ಇದನ್ನು 3.68 ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರಕಾರ ಹೀಗೆ ಮಾಡಿದರೆ ನೌಕರರ ಮೂಲ ವೇತನ ಹೆಚ್ಚಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಕ್ಯಾಬಿನೆಟ್‌ 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾಚ್‌ರ್‍ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು ಶೇ. 3ರಷ್ಟುಏರಿಕೆ ಮಾಡಿತ್ತು. ಪ್ರಸ್ತುತ ತುಟ್ಟಿಭತ್ಯೆ ಮೂಲ ವೇತನದ ಶೇ. 34ರಷ್ಟಿದೆ. ಕೇಂದ್ರ ತುಟ್ಟಿಭತ್ಯೆಯನ್ನು ಮತ್ತಷ್ಟುಏರಿಕೆ ಮಾಡಿದರೆ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಳಿಗೆ ಹಾಗೂ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ನೆರವಾಗಲಿದೆ.

ಫಿಟ್‌ಮೆಂಟ್ ಫ್ಯಾಕ್ಟರ್ ಅಂದ್ರೇನು?

ಕೇಂದ್ರ ನೌಕರರ ವೇತನವನ್ನು ನಿಗದಿಪಡಿಸುವಾಗ, ಡಿಎ, ಟಿಎ ಮತ್ತು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ನಂತಹ ಎಲ್ಲಾ ಭತ್ಯೆಗಳನ್ನು ಉದ್ಯೋಗಿಯ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದಿಂದ ಗುಣಿಸಿ ಲೆಕ್ಕಹಾಕಲಾಗುತ್ತದೆ. ಉದ್ಯೋಗಿಗಳ ಮೂಲ ವೇತನವು ಫಿಟ್‌ಮೆಂಟ್ ಅಂಶದೊಂದಿಗೆ ಮಾತ್ರ ಹೆಚ್ಚಾಗುತ್ತದೆ. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.57 ರಿಂದ 3.68 ಕ್ಕೆ ಹೆಚ್ಚಿಸಿದರೆ, ಕನಿಷ್ಠ ಮೂಲ ವೇತನವು 18 ಸಾವಿರದಿಂದ 26 ಸಾವಿರಕ್ಕೆ ಏರುತ್ತದೆ. ಅಂದರೆ ಸರ್ಕಾರಿ ನೌಕರರ ಮೂಲ ವೇತನವನ್ನು ಎಂಟು ಸಾವಿರ ರೂಪಾಯಿ ಹೆಚ್ಚಿಸಬಹುದು.

ಪ್ರವೇಶ ಮಟ್ಟದ ಸಂಬಳ

ಸರ್ಕಾರವು ಈ ಹಿಂದೆ 2017 ರಲ್ಲಿ ಆರಂಭಿಕ ಹಂತದಲ್ಲಿ ಮೂಲ ವೇತನವನ್ನು ತಿಂಗಳಿಗೆ 7,000 ರೂ.ನಿಂದ 18,000 ರೂ.ಗೆ ಹೆಚ್ಚಿಸಿತ್ತು. ಪ್ರಸ್ತುತ, ಕನಿಷ್ಠ ಮೂಲ ವೇತನ ರೂ 18000 ಮತ್ತು ಗರಿಷ್ಠ ಮೂಲ ವೇತನ ರೂ 56900 ಆಗಿದೆ.

7ನೇ ವೇತನ ಆಯೋಗದ (7ನೇ ವೇತನ ಆಯೋಗ) ಫಿಟ್‌ಮೆಂಟ್ ಫ್ಯಾಕ್ಟರ್ 2.57 ಅನ್ನು ಗುಣಿಸಿ ಮೂಲ ವೇತನವನ್ನು ಲೆಕ್ಕ ಹಾಕಲಾಗುತ್ತದೆ. ನೌಕರನ ಮೂಲ ವೇತನ 18 ಸಾವಿರ ಎಂದು ಭಾವಿಸೋಣ, ನಂತರ ಭತ್ಯೆ ಹೊರತುಪಡಿಸಿ 18000x2.57 = 46,200 ರೂ. ಇದು 3.68 ಆಗಿದ್ದರೆ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.

ಲಕ್ಷಾಂತರ ಜನರಿಗೆ ಪ್ರಯೋಜನ

ಏರುತ್ತಿರುವ ಹಣದುಬ್ಬರದ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಸರ್ಕಾರವು 4-5 ಪ್ರತಿಶತದಷ್ಟು ಡಿಎ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಹಣದುಬ್ಬರದ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರ ಡಿಎ ಹೆಚ್ಚಿಸಿದರೆ 50 ಲಕ್ಷ ಉದ್ಯೋಗಿಗಳು ಮತ್ತು 65 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.

ಬಾಕಿ ಇರುವ ಡಿಎ ಪಾವತಿಸಬಹುದು

ಕೊರೋನಾದಿಂದಾಗಿ ಸ್ಥಗಿತಗೊಂಡಿರುವ ತುಟ್ಟಿಭತ್ಯೆಯನ್ನು ಸರ್ಕಾರ ಪಾವತಿಸಬಹುದು ಎಂಬ ಸುದ್ದಿ ಇದೆ. ನೌಕರರಿಗೆ ಏಕಕಾಲಕ್ಕೆ ಎರಡು ಲಕ್ಷ ರೂಪಾಯಿ ಡಿಎ ನೀಡಲು ಸರ್ಕಾರ ಮುಂದಾಗಿದೆ. 2020ರ ಜನವರಿಯಿಂದ 2021ರ ಜೂನ್‌ವರೆಗೆ ಬಾಕಿ ಉಳಿದಿರುವ ಡಿಎ ನೀಡುವಂತೆ ಉದ್ಯೋಗಿಗಳಿಂದ ಬಹುಕಾಲದ ಬೇಡಿಕೆಯಿದೆ

click me!