
ನವದೆಹಲಿ(ಏ.10): ಕಳೆದ ತಿಂಗಳು ಘೋಷಿಸಿದ ಎಲ್ಲಾ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿ ದಾರರಿಗೆ ಸಿಹಿ ಸುದ್ದಿ ನೀಡಿದೆ. ನೌಕರರ ತುಟ್ಟಿಭತ್ಯೆ, ರಿಲೀಫ್ ಫಂಡ ಸಂಪೂರ್ಣವಾಗಿ ನೀಡುವ ಘೋಷಣೆ ಕುರಿತು, ರಾಜ್ಯ ಹಣಕಾಸು ಸಚಿವ ಅನುರಾಗ್ ಛಾಕೂರ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಚೀನಾವನ್ನೂ ಮೀರಿ ಭಾರತದ ಆರ್ಥಿಕ ಪ್ರಗತಿ: ಐಎಂಎಫ್!
ಈ ಮೂಲಕ ಜುಲೈ 1 ರಿಂದ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ, ಹಾಗೂ ಡಿಆರ್ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಪಡೆಯಲಿದ್ದಾರೆ. ಕೊರೋನಾ ಕಾರಣ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು ಇದೀಗ ಕೇಂದ್ರ ಸರ್ಕಾರ ನೌಕರರಿಗೆ ನೀಡಲಿದೆ. ತಡೆ ಹಿಡಿಯಲ್ಪಟ್ಟ ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಠಾಕೂರ್ ಹೇಳಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದಾಖಲೆ; ಭಾರತದಲ್ಲಿ 2,74,034 ಕೋಟಿ ರೂ ಇನ್ವೆಸ್ಟ್!
ಜುಲೈ 1, 2021 ರಿಂದ ಜಾರಿಗೆ ಬರುವ ಡಿಎಯ ಮೊತ್ತವನ್ನು ಪರಿಷ್ಕೃತ ದರಗಳಲ್ಲಿ ಸೇರಿಸಲಾಗುವುದು ಎಂದು ಠಾಕೂರ್ ಹೇಳಿದ್ದಾರೆ. ಕೊರೋನಾ ಕಾರಣ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು 3 ಭಾಗಗಳಾಗಿ ಸ್ಥಗಿತಗೊಳಿಸಿತ್ತು. ಜನವರಿ 1, 2020, ಜುಲೈ 1, 2020 ಹಾಗೂ ಜನವರಿ1, 2021ರಲ್ಲಿ ಸ್ಥಗಿತಗೊಳಿಸಿತ್ತು.
ಇದೀಗ ಜುಲೈ 1, 2021ರಿಂದ ನೌಕರರು ಸಂಪೂರ್ಣ ಭತ್ಯೆ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ನೆರವಾಗಲಿದೆ. ಕೊರೋನಾ ಕಾರಣ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರ ಡಿಎ ಹಾಗೂ ಡಿಆರ್ ಸ್ಥಗತಿಗೊಳಿ 37,000 ರೂಪಾಯಿ ಉಳಿತಾಯ ಮಾಡಿತ್ತು. ಡಿಎ, ಡಿಆರ್ ನೀಡುವುದರಿಂದ ಇದೀಗ ಕೇಂದ್ರ ಸರ್ಕಾರಿ ನೌಕರರ ವೇತನ ಡಬಲ್ ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.