ಸರ್ಕಾರಿ ಬ್ಯಾಂಕುಗಳಿಗೆ ಬರೀ 9 ತಿಂಗ್ಳಲ್ಲಿ 70000 ಕೋಟಿ ಲಾಭ...!

By Kannadaprabha NewsFirst Published Mar 21, 2023, 9:37 AM IST
Highlights

ಕೇಂದ್ರ ಸರ್ಕಾರ ತೆಗೆದುಕೊಂಡ ಹಲವಾರು ಸುಧಾರಣಾ ಕ್ರಮಗಳಿಂದಾಗಿ ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಎನ್‌ಪಿಎ (ವಸೂಲಾಗದ ಸಾಲ) ಅನುಪಾತ 2018ರ ಮಾರ್ಚ್‌ನಲ್ಲಿ ಶೇ.14.6ರಷ್ಟುಇದ್ದದ್ದು, 2022ರ ಡಿಸೆಂಬರ್‌ನಲ್ಲಿ ಶೇ.5.53ಕ್ಕೆ ಇಳಿಕೆಯಾಗಿದೆ.

ನವದೆಹಲಿ: ಕೇಂದ್ರ ಸರ್ಕಾರ ತೆಗೆದುಕೊಂಡ ಹಲವಾರು ಸುಧಾರಣಾ ಕ್ರಮಗಳಿಂದಾಗಿ ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಎನ್‌ಪಿಎ (ವಸೂಲಾಗದ ಸಾಲ) ಅನುಪಾತ 2018ರ ಮಾರ್ಚ್‌ನಲ್ಲಿ ಶೇ.14.6ರಷ್ಟುಇದ್ದದ್ದು, 2022ರ ಡಿಸೆಂಬರ್‌ನಲ್ಲಿ ಶೇ.5.53ಕ್ಕೆ ಇಳಿಕೆಯಾಗಿದೆ. ಇದೇ ವೇಳೆ, ಸಾರ್ವಜನಿಕ ಸ್ವಾಮ್ಯದ ಎಲ್ಲ ಬ್ಯಾಂಕುಗಳು ಲಾಭದಲ್ಲಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 70,167 ಕೋಟಿ ರು. ನಿವ್ವಳ ಲಾಭ ಗಳಿಸಿವೆ.

2021-22ನೇ ಸಾಲಿನಲ್ಲಿ ಈ ಬ್ಯಾಂಕುಗಳ ನಿವ್ವಳ ಲಾಭ 66,543 ಕೋಟಿ ರು.ಗಳಷ್ಟಿತ್ತು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ (Union Minister of State) ಭಾಗವತ್‌ ಕೆ.ಕಾರಡ್‌ (Bhagwat K. Karad) ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಒಟ್ಟಾರೆ ಮಾರುಕಟ್ಟೆಬಂಡವಾಳ 2018ರ ಮಾರ್ಚ್‌ನಲ್ಲಿ 4.52 ಲಕ್ಷ ಕೋಟಿ ರು. ಇತ್ತು. ಅದು 2022ರ ಡಿಸೆಂಬರ್‌ಗೆ 10.63 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ಬ್ಯಾಂಕಿಂಗ್‌ ಸುಧಾರಣೆಗಳು ಸಾಲದಲ್ಲಿ ಶಿಸ್ತು, ಜವಾಬ್ದಾರಿಯುತ ಸಾಲ ವಿತರಣೆ, ಆಡಳಿತದಲ್ಲಿ ಸುಧಾರಣೆ, ತಂತ್ರಜ್ಞಾನದ ಅಳವಡಿಕೆ, ಬ್ಯಾಂಕುಗಳ ವಿಲೀನ, ಬ್ಯಾಂಕುಗಳ ವಿಶ್ವಾಸ ವೃದ್ಧಿಗೆ ಕಾರಣವಾಗಿವೆ ಎಂದು ಹೇಳಿದೆ. 

ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಅತ್ಯಧಿಕ ಬಡ್ಡಿ ನೀಡುವ ನಾಲ್ಕು ಸರ್ಕಾರಿ ಬ್ಯಾಂಕ್ ಗಳು ಇವೇ ನೋಡಿ!

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

 

 

click me!