EPF ಬಡ್ಡಿ ಮೊತ್ತದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Mar 20, 2023, 6:15 PM IST

ಉದ್ಯೋಗಿಗಳ ಇಪಿಎಫ್ ಖಾತೆಯಲ್ಲಿನ ಕೊಡುಗೆ ಮೇಲೆ ಬಡ್ಡಿ ವಿಧಿಸದಿದ್ರೂ ಅದರ ಮೇಲಿನ ಬಡ್ಡಿಗೆ ಟಿಡಿಎಸ್ ಕಡಿತವಾಗುತ್ತದೆ. ಹಾಗಾದ್ರೆ ಇಪಿಎಫ್ ಖಾತೆಯಲ್ಲಿನ ಹಣದ ಮೇಲಿನ ಬಡ್ಡಿಗೆ ಎಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ? ಇದಕ್ಕೆ ಸಂಬಂಧಪಟ್ಟ ಆದಾಯ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆಯಾ? ಇಲ್ಲಿದೆ ಮಾಹಿತಿ. 
 


Business Desk:ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್  ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷ ಬಡ್ಡಿ ನೀಡಲಾಗುತ್ತದೆ. ಇಪಿಎಫ್ ನಿವೃತ್ತಿ ಬದುಕಿನ ಹೂಡಿಕೆ ಯೋಜನೆಯಾಗಿದ್ದು,  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲ ಕೂಡ ಇದೆ. ಪ್ರಸ್ತುತ ಇಪಿಎಫ್ ಖಾತೆಯಲ್ಲಿನ ಹೂಡಿಕೆಗೆ ಶೇ.8.1ರಷ್ಟು ಬಡ್ಡಿದರವಿದೆ. ಈ ಬಡ್ಡಿಯಿಂದ ಖಾತೆದಾರ ಗಳಿಸುವ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ತೆರಿಗೆಯ ಮೊತ್ತ ಆ ಉದ್ಯೋಗಿಯ ತೆರಿಗೆ ವ್ಯಾಪ್ತಿಗೊಳಪಡುವ ಒಟ್ಟು ಆದಾಯವನ್ನು ಆಧರಿಸಿದೆ. ಹಾಗಾದ್ರೆ ಇಪಿಎಫ್ ಖಾತೆಯಲ್ಲಿನ ಬಡ್ಡಿ ಹಣದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಇಪಿಎಫ್ ಬಡ್ಡಿದರದ ಮೇಲಿನ ತೆರಿಗೆಗೆ ಉದ್ಯೋಗಿ ವಿನಾಯ್ತಿ ಪಡೆಯಬಹುದೇ? ಇಲ್ಲಿದೆ ಮಾಹಿತಿ.

ವಾರ್ಷಿಕ 2.5ಲಕ್ಷ ರೂ. ಕೊಡುಗೆ ಮೇಲೆ ತೆರಿಗೆ ಇಲ್ಲ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ. ಇದರ ಅನ್ವಯ ಇಪಿಎಫ್ (EPF) ಖಾತೆಯಲ್ಲಿ ವಾರ್ಷಿಕ  2.5ಲಕ್ಷ ರೂ. ತನಕದ ಕೊಡುಗೆ ಮೇಲೆ ಯಾವುದೇ ತೆರಿಗೆ (Tax) ವಿಧಿಸಲಾಗೋದಿಲ್ಲ. ಒಂದು ವೇಳೆ ಇಪಿಎಫ್ (EPF) ಖಾತೆಗೆ ವಾರ್ಷಿಕ 2.5ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿದ್ರೆ ಅದರ ಬಡ್ಡಿ (Interest) ಮೇಲೆ ತೆರಿಗೆ ವಿಧಿಸಲಾಗುತ್ತದೆ. 

Tap to resize

Latest Videos

ಅಂಚೆ ಕಚೇರಿ ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,515ರೂ.ಹೂಡಿಕೆ ಮಾಡಿದ್ರೆ ಸಿಗುತ್ತೆ 35ಲಕ್ಷ ರೂ. ರಿಟರ್ನ್ಸ್ !

ಎಷ್ಟು ತೆರಿಗೆ ವಿಧಿಸಲಾಗುತ್ತದೆ?
ಇಪಿಎಫ್ ಖಾತೆಯಲ್ಲಿನ ಹೂಡಿಕೆ ಮೇಲಿನ ಬಡ್ಡಿ ಮೊತ್ತ ವಾರ್ಷಿಕ 50,000ರೂ.ಗಿಂತ ಹೆಚ್ಚಿದ್ದರೆ ಆಗ ಶೇ.10ರಷ್ಟು ಟಿಡಿಎಸ್ (TDS) ಕಡಿತ ಮಾಡಲಾಗುತ್ತದೆ. ಉದ್ಯೋಗಿಗಳು ಆದಾಯ ತೆರಿಗೆ ಇಲಾಖೆಗೆ  ಅರ್ಜಿ ನಮೂನೆ 15ಜಿ ಹಾಗೂ 15 ಎಚ್ ಸಲ್ಲಿಕೆ ಮಾಡುವ ಮೂಲಕ ತೆರಿಗೆ ಪ್ರಯೋಜನ ಪಡೆಯಬಹುದು. ಇಪಿಎಫ್ ಬಡ್ಡಿ ಮೊತ್ತದ ಮೇಲಿನ ಟಿಡಿಎಸ್ ಕಡಿತಕ್ಕೆ ಸಂಬಂಧಪಟ್ಟ ಆದಾಯ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. 

ಇಪಿಎಫ್ ಎಂದರೇನು? 
ಇಪಿಎಫ್‌ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಇದನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಇದು 20 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಉದ್ಯೋಗದಲ್ಲಿರುವ ಪ್ರತಿಯೊಂದು ಸಂಸ್ಥೆಯನ್ನು ಒಳಗೊಳ್ಳುತ್ತದೆ. ಉದ್ಯೋಗಿ ಭವಿಷ್ಯ ನಿಧಿಗೆ ನಿರ್ದಿಷ್ಟ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದೇ ಮೊತ್ತವನ್ನು ಉದ್ಯೋಗದಾತರು ಮಾಸಿಕ ಆಧಾರದ ಮೇಲೆ ಪಾವತಿಸುತ್ತಾರೆ.ನಿವೃತ್ತಿಯ ಕೊನೆಯಲ್ಲಿ ಅಥವಾ ಸೇವೆಯ ಸಮಯದಲ್ಲಿ (ಕೆಲವು ಸಂದರ್ಭಗಳಲ್ಲಿ), ನೌಕರನು ಪಿಎಫ್ ಕೊಡುಗೆಯ ಮೇಲಿನ ಬಡ್ಡಿಯನ್ನು ಒಳಗೊಂಡಂತೆ ಒಟ್ಟು ಮೊತ್ತವನ್ನು ಪಡೆಯುತ್ತಾನೆ. 

ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ಬೆಲೆ; 60,000 ರೂ. ಗಡಿ ದಾಟಿದ ಬಂಗಾರದ ದರ ಇನ್ನಷ್ಟು ಹೆಚ್ಚುತ್ತಾ?

ಟಿಡಿಎಸ್ ಕಡಿತ ಇಳಿಕೆ
2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.ಈ ಘೋಷಣೆಯಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತವಿರುವ ಆದಾಯ ತೆರಿಗೆ ಕಾನೂನಿನ ಅನ್ವಯ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.  ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತದೆ.
 

click me!