ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ತನ್ನ ಉದ್ಯಮವನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಹೀಗಿರುವಾಗ 7 ಜನಪ್ರಿಯ ಬ್ರ್ಯಾಂಡ್ ಗಳು ಈ ಸಂಸ್ಥೆಯ ತೆಕ್ಕೆಯಲ್ಲಿವೆ ಎಂಬ ಸತ್ಯ ಬಹುತೇಕರಿಗೆ ತಿಳಿದೇ ಇಲ್ಲ. ಹಾಗಾದ್ರೆ ರಿಲಯನ್ಸ್ ಒಡೆತನದಲ್ಲಿರುವ ಏಳು ಜನಪ್ರಿಯ ಬ್ರ್ಯಾಂಡ್ ಗಳು ಯಾವುವು?
Business Desk: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ ಉದ್ಯಮಿ. ಇವರ ನಿವ್ವಳ ಸಂಪತ್ತು ಅಂದಾಜು 7,93,826 ಕೋಟಿ ರೂ. ಫೋರ್ಬ್ಸ್ ಬಿಡುಗಡೆಗೊಳಿಸಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇವರು ಪ್ರಸಕ್ತ 12ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನೇತೃತ್ವದ ಆರ್ ಐಎಲ್ ಭಾರತದ ಅತೀದೊಡ್ಡ ಸಂಸ್ಥೆಯಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆ ರಿಫೈನರಿ, ಪೆಟ್ರೋಕೆಮಿಕಲ್ಸ್, ಟೆಲಿಕಮ್ಯೂನಿಕೇಷನ್ಸ್, ರಿಟೇಲ್ ಮುಂತಾದ ಅನೇಕ ವಲಯಗಳಿಗೆ ತನ್ನ ಉದ್ಯಮ ವಿಸ್ತರಿಸಿದೆ. ಆರ್ ಐಎಲ್ ಸಮೂಹದ ರಿಲಯನ್ಸ್ ರಿಟೇಲ್ ನೇತೃತ್ವವನ್ನು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ವಹಿಸಿಕೊಂಡ ಬಳಿಕ ಈ ಸಂಸ್ಥೆ ಸಾಕಷ್ಟು ಪ್ರಗತಿ ಸಾಧಿಸಿದೆ ಕೂಡ. ರಿಲಯನ್ಸ್ ರಿಟೇಲ್ ಅನೇಕ ಜನಪ್ರಿಯ ಬ್ರ್ಯಾಂಡ್ ಗಳನ್ನು ಖರೀದಿಸಿ, ಹೊಸ ವಲಯಗಳಿಗೆ ಪ್ರವೇಶಿಸುವ ಮೂಲಕ ತನ್ನ ಉದ್ಯಮ ವಿಸ್ತರಿಸಿಕೊಂಡಿದೆ. ರಿಲಯನ್ಸ್ ರಿಟೇಲ್ ಪ್ರಗತಿಗೆ ಏಳು ಜನಪ್ರಿಯ ಬ್ರ್ಯಾಂಡ್ ಗಳು ಕೊಡುಗೆ ನೀಡಿವೆ. ಅಂದಹಾಗೇ ಈ ಬ್ರ್ಯಾಂಡ್ ಗಳ ಹೆಸರು ಕೇಳಿದ್ದರೂ ಅವು ಮುಖೇಶ್ ಅಂಬಾನಿ ಒಡೆತನಕ್ಕೆ ಸೇರಿವೆ ಎಂಬ ಮಾಹಿತಿ ಬಹುತೇಕರಿಗೆ ಇಲ್ಲ. ಹಾಗಾದ್ರೆ ಮುಖೇಶ್ ಅಂಬಾನಿ ಒಡೆತನದಲ್ಲಿರುವ ಏಳು ಜನಪ್ರಿಯ ಬ್ರ್ಯಾಂಡ್ ಗಳು ಯಾವುವು?
1.ಹ್ಯಾಮ್ಲೇಸ್ : ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ 2019ರಲ್ಲಿ ಬ್ರಿಟಿಷ್ ಆಟಿಕೆ ರಿಟೇಲರ್ ಹ್ಯಾಮ್ಲೇಸ್ ಅನ್ನು ಒಪ್ಪಂದವೊಂದರಲ್ಲಿ 620 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿತ್ತು. 1760ರಲ್ಲಿ ಸ್ಥಾಪನೆಯಾದ ಹ್ಯಾಮ್ಲೇಸ್ ವಿಶ್ವದ ಅತ್ಯಂತ ಹಳೆಯ ಆಟಿಕೆ ರಿಟೇಲರ್ಸ್ ಸಂಸ್ಥೆಯಾಗಿದೆ.
2.ಅಜಿಯೋ: ರಿಲಯನ್ಸ್ ರಟೇಲ್ ಅಜಿಯೋ ಮೂಲಕ 2016ರಲ್ಲಿ ಇ-ಕಾಮರ್ಸ್ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಅಜಿಯೋ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಅಭೂತಪೂರ್ವ ಯಶಸ್ಸು ಕೂಡ ಗಳಿಸಿದೆ. ಈ ಇ-ಕಾಮರ್ಸ್ ವೆಬ್ ಸೈಟ್ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಬ್ರ್ಯಾಂಡ್ ನ ಅನೇಕ ವಿಧದ ಬಟ್ಟೆಗಳು, ಪಾದರಕ್ಷೆಗಳು ಹಾಗೂ ಇತರ ಅಲಂಕಾರಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಅಂಬಾನಿಯ ಬೆಂಗಾವಲಿಗೆ ಮತ್ತೊಂದು ದುಬಾರಿ ಕಾರು, ಅಬ್ಬಬ್ಬಾ ಅಲ್ಟ್ರಾ ಲಕ್ಸುರಿಯಸ್ ರೆಡ್ ಫೆರಾರಿ ಬೆಲೆ ಇಷ್ಟೊಂದಾ?
3.ನೆಟ್ ಮೆಡ್ಸ್ ಆನ್ ಲೈನ್ ಫಾರ್ಮಸಿ: ವಿಟಲಿಕ್ (Vitalic) ಹಾಗೂ ಅದರ ಅಂಗಸಂಸ್ಥೆಗಳ ಜೊತೆಗೆ 620 ಕೋಟಿ ರೂ. ಒಪ್ಪಂದದ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನೆಟ್ ಮೆಡ್ಸ್ ನಲ್ಲಿ ದೊಡ್ಡ ಪಾಲನ್ನು ಖರೀದಿಸಿದೆ. ಈ ಆನ್ ಲೈನ್ ಫಾರ್ಮಸಿಯಲ್ಲಿ ಆರ್ ಐಎಲ್ ಶೇ.60ರಷ್ಟು ಷೇರುಗಳನ್ನು ಹೊಂದಿದೆ.
4.ಫೋರ್ಬ್ಸ್ ಇಂಡಿಯಾ: ಫೋರ್ಬ್ಸ್ ನಿಯತಕಾಲಿಕದ ಭಾರತೀಯ ಆವೃತ್ತಿಯಾದ ಫೋರ್ಬ್ಸ್ ಇಂಡಿಯಾವನ್ನು ನೆಟ್ ವರ್ಕ್ 18 ನಿರ್ವಹಣೆ ಮಾಡುತ್ತದೆ. ಈ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿದೆ.
5.ಕ್ಲೋವಿಯಾ: 2022ರಲ್ಲಿ ರಿಲಯನ್ಸ್ ರಿಟೇಲ್ ಆನ್ ಲೈನ್ ಒಳ ಉಡುಪುಗಳ ಬ್ರ್ಯಾಂಡ್ ಕ್ಲೋವಿಯಾವನ್ನು ( Clovia) ಖರೀದಿಸಿತ್ತು. ಪರ್ಪಲ್ ಪಂಡಾ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಬಹುತೇಕ ಷೇರುಗಳನ್ನು ಖರೀದಿಸುವ ಮೂಲಕ ಈ ಬ್ರ್ಯಾಂಡ್ ಅನ್ನು ರಿಲಯನ್ಸ್ ರಿಟೇಲ್ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೂ ಮುನ್ನ ಝಿವಮೆ ( Zivame) ಹಾಗೂ ಅಮಂಟೆ (Amante) ಬ್ರ್ಯಾಂಡ್ ಗಳನ್ನು ರಿಲಯನ್ಸ್ ಖರೀದಿಸಿತ್ತು.
6.ಅರ್ಬನ್ ಲಾಡರ್: ಬೆಂಗಳೂರು ಮೂಲದ ಆನ್ ಲೈನ್ ಫರ್ನಿಚರ್ ಮಾರಾಟ ಸಂಸ್ಥೆ ಅರ್ಬನ್ ಲಾಡರ್ ಹೋಮ್ ಡೆಕೋರ್ ಸಲ್ಯೂಷನ್ಸ್ ಸಂಸ್ಥೆಯ ಶೇ.96ರಷ್ಟು ಷೇರುಗಳನ್ನು ರಿಲಯನ್ಸ್ ರಿಟೇಲ್ ಸ್ವಾಧೀನಪಡಿಸಿಕೊಂಡಿತ್ತು. 182 ಕೋಟಿ ರೂ. ಮೊತ್ತಕ್ಕೆ ಈ ಒಪ್ಪಂದ ನಡೆದಿತ್ತು. 2023ರ ಡಿಸೆಂಬರ್ ಅಂತ್ಯದೊಳಗೆ ರಿಲಯನ್ಸ್ ರಿಟೇಲ್ ಈ ಬ್ರ್ಯಾಂಡ್ ನಲ್ಲಿ 75 ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಿದ್ದು, ಆ ಮೂಲಕ ಇದರ ಸಂಪೂರ್ಣ ಮಾಲೀಕತ್ವ ಹೊಂದಲಿದೆ.
ಬಹುಕೋಟಿ ಬಿಸಿನೆಸ್‌ಗೆ ಲಾಸ್ ಮಾಡ್ತಾರ ಮುಕೇಶ್ ಅಂಬಾನಿ, ಅತೀ ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್!
7.ಮಂಡರಿನ್ ಒರಿಯಂಟಲ್ : 2021ರಲ್ಲಿ ನ್ಯೂಯಾರ್ಕ್ ಸ್ಟೋಕ್ ಪಾರ್ಕ್ ನಲ್ಲಿ ಮುಖೇಶ್ ಅಂಬಾನಿ ಖಾಸಗಿ ಸ್ಪೋರ್ಟಿಂಗ್ ಹಾಗೂ ವಿಶ್ರಾಂತಿ ಎಸ್ಟೇಟ್ ಅನ್ನು ಅಂದಾಜು 592 ಕೋಟಿ ರೂ.ಗೆ ಖರೀದಿಸಿದ್ದರು. ಇದಾದ ಒಂದು ವರ್ಷದ ಬಳಿಕ ಅವರು ನ್ಯೂಯಾರ್ಕ್ ನಲ್ಲಿ ಮಂಡರಿನ್ ಒರಿಯಂಟಲ್ ಹೋಟೆಲ್ (Mandarin Oriental) ಅನ್ನು 813 ಕೋಟಿ ರೂ.ಗೆ ಖರೀದಿಸಿದ್ದರು. ಈ ಹೋಟೆಲ್ ನಲ್ಲಿ 240ಕ್ಕೂ ಅಧಿಕ ರೂಮ್ ಗಳು ಹಾಗೂ ಸೂಟ್ ಗಳಿವೆ.