ಟಿಎಂಸಿ ಅಧಿಕಾರದ ಅವಧಿಯಲ್ಲಿ ಪಶ್ಚಿಮ ಬಂಗಾಳವನ್ನು ತೊರೆದ 6,688 ಕಂಪನಿಗಳು, ಕೇಂದ್ರದ ಮಾಹಿತಿ

Published : Jul 23, 2025, 01:58 PM IST
mamata banerjee

ಸಾರಾಂಶ

ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಈ ಸಾಮೂಹಿಕ ವ್ಯವಹಾರಗಳ ವಲಸೆಯು ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದ ಕೈಗಾರಿಕಾ ವಾತಾವರಣದ ಕರಾಳ ಚಿತ್ರಣವನ್ನು ಚಿತ್ರಿಸುತ್ತದೆ ಎಂದು ಆರೋಪಿಸಿದ್ದಾರೆ. 

ನವದೆಹಲಿ (ಜು.23): ಕಳೆದ 14 ವರ್ಷಗಳಲ್ಲಿ 6,688 ಕಂಪನಿಗಳು ಪಶ್ಚಿಮ ಬಂಗಾಳವನ್ನು (West Bengal) ತೊರೆದಿವೆ ಎಂದು ಮಂಗಳವಾರ ಕೇಂದ್ರ ಸರ್ಕಾರ (central government) ಸಂಸತ್ತಿಗೆ ತಿಳಿಸಿದೆ. 2011 ಏಪ್ರಿಲ್ 1 ರಿಂದ 2025 ಮಾರ್ಚ್ 31ರ ನಡುವೆ 6,688 ಕಂಪನಿಗಳು ತಮ್ಮ ನೋಂದಾಯಿತ ಕಚೇರಿಗಳನ್ನು ಪಶ್ಚಿಮ ಬಂಗಾಳದಿಂದ ಇತರ ರಾಜ್ಯಗಳಿಗೆ ಸ್ಥಳಾಂತರಿಸಿವೆ ಎಂದು ಕಾರ್ಪೊರೇಟ್ ವ್ಯವಹಾರಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ರಾಜ್ಯಸಭೆಯಲ್ಲಿ (Rajya Sabha) ತಿಳಿಸಿದರು. ಬಿಜೆಪಿ ಸಂಸದ ಮತ್ತು ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಸರ್ಕಾರ ಮೇ 2011ರಿಂದ ಅಧಿಕಾರ ವಹಿಸಿಕೊಂಡಿದೆ. ಕೇಂದ್ರ ಸಚಿವರ ಉತ್ತರದ ಬೆನ್ನಲ್ಲಿಯೇ ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ತೃಣಮೂಲ ಕಾಂಗ್ರೆಸ್ ವಿರುದ್ಧ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ. "ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ, 6688 ಕಂಪನಿಗಳು 2011 ಏಪ್ರಿಲ್ 1ಮತ್ತು 2025 ಮಾರ್ಚ್ 31ರ ನಡುವೆ ಪಶ್ಚಿಮ ಬಂಗಾಳದಿಂದ ಇತರ ಭಾರತೀಯ ರಾಜ್ಯಗಳಿಗೆ ತಮ್ಮ ನೋಂದಾಯಿತ ಕಚೇರಿಗಳನ್ನು ಸ್ಥಳಾಂತರಿಸಿವೆ. ಪಶ್ಚಿಮ ಬಂಗಾಳವನ್ನು ತೊರೆದ 6688 ಕಂಪನಿಗಳಲ್ಲಿ 110 ಕಂಪನಿಗಳು ಸ್ಥಳಾಂತರದ ಸಮಯದಲ್ಲಿ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿದ್ದವು" ಎಂದು ಅವರು ಹೇಳಿದ್ದಾರೆ.

ವಾಗ್ದಾಳಿಯನ್ನು ತೀಕ್ಷಣಗೊಳಿಸಿದ ಮಾಳವೀಯ ಅವರು, ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದ ಕೈಗಾರಿಕಾ ವಾತಾವರಣದ ಕರಾಳ ಚಿತ್ರಣವನ್ನು ಈ ಸಾಮೂಹಿಕ ವಲಸೆ ಚಿತ್ರಿಸುತ್ತದೆ ಎಂದು ಆರೋಪಿಸಿದ್ದಾರೆ. "ಒಂದು ಕಾಲದಲ್ಲಿ ಬಂಗಾಳವು ಉದ್ಯಮಶೀಲತೆಯ ಕೇಂದ್ರವಾಗಿತ್ತು, ಆದರೆ ಕಳಪೆ ಆಡಳಿತ, ನೀತಿ ಅಸ್ಥಿರತೆ ಮತ್ತು ಹೂಡಿಕೆದಾರರ ವಿಶ್ವಾಸದ ಕೊರತೆಯು ಕಂಪನಿಗಳನ್ನು ದೂರ ಓಡಿಸಿದೆ" ಎಂದು ಅವರು ಹೇಳಿದರು.

ರಾಜ್ಯಸಭೆಯಲ್ಲಿ ಸಚಿವರು ನೀಡಿದ ಲಿಖಿತ ಉತ್ತರದ ಪ್ರಕಾರ, 2015-16, 2016-17 ಮತ್ತು 2017-18ರಲ್ಲಿ, 869, 918 ಮತ್ತು 1,027 ಕಂಪನಿಗಳು ತಮ್ಮ ನೋಂದಾಯಿತ ಕಚೇರಿಗಳನ್ನು ಪಶ್ಚಿಮ ಬಂಗಾಳದಿಂದ ಇತರ ರಾಜ್ಯಗಳಿಗೆ ಸ್ಥಳಾಂತರಿಸಿವೆ. ಈ ಮೂರು ವರ್ಷಗಳ ಅವಧಿಯು ತೃಣಮೂಲ ಕಾಂಗ್ರೆಸ್ ಸರ್ಕಾರದ ಮೊದಲ ಮತ್ತು ಎರಡನೇ ಅವಧಿಗೆ ಹೊಂದಿಕೆಯಾಗುತ್ತದೆ.

ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಹಿಂದೆ, ಭಟ್ಟಾಚಾರ್ಯ ಕೂಡ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ದಾಳಿ ಮಾಡಲು ಪಶ್ಚಿಮ ಬಂಗಾಳದಿಂದ ಕೈಗಾರಿಕೆಗಳ ವಲಸೆಯ ವಿಷಯವನ್ನು ಎತ್ತಿದರು.

ಸೋಮವಾರ ಕೋಲ್ಕತ್ತಾದಲ್ಲಿ ನಡೆದ ಹುತಾತ್ಮರ ದಿನದ ರ್ಯಾಲಿಯ ಆ ಆರೋಪಗಳಿಗೆ ಬ್ಯಾನರ್ಜಿ ತಮ್ಮ ಉತ್ತರ ನೀಡಿದ್ದಾರೆ. "ಬಂಗಾಳದಲ್ಲಿ ಉದ್ಯೋಗವಿಲ್ಲದ ಕಾರಣ ಜನರು ಹೊರಗೆ ಹೋಗುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ನಾನು ನಿಮಗೆ ಡೇಟಾವನ್ನು ನೀಡುತ್ತೇನೆ. 2014-18ರವರೆಗೆ, 23,000 ಜನರು ಭಾರತವನ್ನು ತೊರೆದರು. 2019 ರಲ್ಲಿ, 7,000. 2020 ರಲ್ಲಿ, 5,000. 2021 ರಲ್ಲಿ, 7,500. 2022 ರಲ್ಲಿ, 8,000. 2023 ರಲ್ಲಿ, 5,100. 2024 ರಲ್ಲಿ, 4,300 ಮತ್ತು 2025 ರಲ್ಲಿ, 3,500 ಜನರು ದೇಶವನ್ನು ತೊರೆದರು. MEA ದತ್ತಾಂಶದ ಪ್ರಕಾರ, 17,10,890 ಜನರು ದೇಶವನ್ನು ತೊರೆದಿದ್ದಾರೆ. ಮತ್ತೊಂದೆಡೆ, ಯಾವುದೇ ಕೈಗಾರಿಕೋದ್ಯಮಿ ಬಂಗಾಳವನ್ನು ಬಿಡಬೇಕಾಗಿಲ್ಲ. ವಾಸ್ತವವಾಗಿ, ಬಂಗಾಳದಲ್ಲಿ ವ್ಯವಹಾರ ಬೆಳೆಯುತ್ತಿರುವುದರಿಂದ ಅವರು ಇಲ್ಲಿಗೆ ಬರುತ್ತಿದ್ದಾರೆ" ಎಂದು ಅವರು ಹೇಳಿಕೊಂಡಿದ್ದರು.

 

PREV
1017
ಪಶ್ಚಿಮ ಬಂಗಾಳದಿಂದ ಕಂಪನಿಗಳ ವಲಸೆ
ಪಶ್ಚಿಮ ಬಂಗಾಳದಿಂದ ವಲಸೆ ಹೋದ ಕಂಪನಿಗಳ ಪೈಕಿ 2017-18ರಲ್ಲಿ ಗರಿಷ್ಠ. ಆ ವರ್ಷ 1017 ಕಂಪನಿಗಳು ವಲಸೆ ಹೋಗಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?