Credit Card Use: ಕ್ರೆಡಿಟ್ ಕಾರ್ಡ್ ಬಳಸೋವಾಗ ಈ 6 ಸ್ಮಾರ್ಟ್ ವಿಧಾನ ಬಳಸಿ, ಬಡ್ಡಿ ಚಿಂತೆ ಬಿಟ್ಹಾಕಿ!

Suvarna News   | Asianet News
Published : Mar 02, 2022, 08:16 PM IST
Credit Card Use: ಕ್ರೆಡಿಟ್ ಕಾರ್ಡ್ ಬಳಸೋವಾಗ ಈ 6 ಸ್ಮಾರ್ಟ್ ವಿಧಾನ ಬಳಸಿ, ಬಡ್ಡಿ ಚಿಂತೆ ಬಿಟ್ಹಾಕಿ!

ಸಾರಾಂಶ

*ಕ್ರೆಡಿಟ್ ಕಾರ್ಡ್ ಬಳಸಿದಷ್ಟು ಸರಳವಲ್ಲ ಬಿಲ್ ಪಾವತಿ *ಬಡ್ಡಿಅಥವಾ ದಂಡದಿಂದ ತಪ್ಪಿಸಿಕೊಳ್ಳಲು ಕೆಲವು ನಿಯಮ ಪಾಲಿಸೋದು ಅಗತ್ಯ *ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಗಡುವು ಮರೆಯಬೇಡಿ

Business Desk:ಬ್ಯಾಂಕ್ (Bank) ಖಾತೆಯಲ್ಲಿರೋ ಹಣ ಕಡಿತಗೊಳ್ಳದೆ ಬಯಸಿದ ವಸ್ತುಗಳನ್ನು ಕೊಳ್ಳಲು ಇರೋ ಏಕೈಕ ಮಾರ್ಗವೆಂದ್ರೆ ಅದು ಕ್ರೆಡಿಟ್ ಕಾರ್ಡ್ (Credit card).ಇದೇ ಕಾರಣಕ್ಕೆ ಬಹುತೇಕರು ಕ್ರೆಡಿಟ್ ಕಾರ್ಡ್ (Credit card) ಉಜ್ಜಿ ಬೇಕೆನಿಸಿದ್ದನ್ನು ಖರೀದಿಸುತ್ತಾರೆ. ಆದ್ರೆ ಆ ನಂತರ ಕ್ರೆಡಿಟ್ ಕಾರ್ಡ್(Credit card) ಬಿಲ್ ಪಾವತಿಸಲಾಗದೆ ಪರದಾಡುತ್ತಾರೆ. ನಿಗದಿತ ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ರೆ ವೆಚ್ಚ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಬಡ್ಡಿ(Interest) ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಬಳಸಲೇಬಾರದ? ಎಂಬ ಪ್ರಶ್ನೆ ಮೂಡಬಹುದು. ಖಂಡಿತಾ ಬಳಸಿ, ಆದ್ರೆ ಅದಕ್ಕೂ ಮುನ್ನ ಒಂದು ರೂಪಾಯಿ ಬಡ್ಡಿ ಪಾವತಿಸದೆ ಜಾಣತನದಿಂದ ಅದನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

ಕ್ರೆಡಿಟ್ ಕಾರ್ಡ್ ಎಲ್ಲಿ, ಹೇಗೆ ಖರ್ಚು ಮಾಡಬೇಕೆಂಬುದು ತಿಳಿದಿದ್ರೆ, ತಿಂಗಳ ಬಿಲ್ (Bill) ನಿಮಗೆ ಖಂಡಿತಾ ದೊಡ್ಡ ಸರ್ಪ್ರೈಸ್ ನೀಡೋದಿಲ್ಲ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಹೇಗೆ ಬಳಸಬೇಕು?
1.ಪೂರ್ಣ ಮೊತ್ತ ಪಾವತಿಸಿ
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ಸಾಮಾನ್ಯವಾಗಿ ಎರಡು ಮೊತ್ತಗಳಿರುತ್ತವೆ. ಒಂದು ಒಟ್ಟು ಬಾಕಿಯಿರೋ ಮೊತ್ತ (total due amount),ಇನ್ನೊಂದು ಕನಿಷ್ಠ ಮೊತ್ತ. ನಿಮ್ಮ ಬಿಲ್ ಮೊತ್ತಕ್ಕೆ ಶೇ.40ರಷ್ಟು ಬಡ್ಡಿ ಬೀಳಬಾರದೆಂದ್ರೆ 'ಕನಿಷ್ಠ ಬಾಕಿ ಮೊತ್ತ' ವನ್ನು ಸಂಪೂರ್ಣವಾಗಿ ಕಡೆಗಣಿಸಿ. ಅಂದ್ರೆ ಒಟ್ಟು ಬಾಕಿಯಿರೋ ಮೊತ್ತ ಮಾತ್ರ ಪಾವತಿಸಿ.  ಒಟ್ಟು ಬಾಕಿ ಮೊತ್ತ ಮಾತ್ರ ಗಣನೆಗೆ ಬರುತ್ತೆ. ಅಲ್ಲದೆ, ಇದನ್ನು ಪಾವತಿಸಿದ್ರೆ ನಿಮ್ಮ ಬಿಲ್ ಕ್ಲಿಯರ್. ಯಾವುದೇ ಬಡ್ಡಿ ಬೀಳೋದಿಲ್ಲ. ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿ ಬೇರೆ ಯಾವ ನಿಯಮ ಪಾಲಿಸಲು ಸಾಧ್ಯವಾಗದಿದ್ರೂ ಇದೊಂದನ್ನು ಮಾತ್ರ ತಪ್ಪದೆ ಪಾಲಿಸಿ.

Banking Ombudsman Report:ಈ ಬಾರಿಯೂ ಗ್ರಾಹಕರ ಅಳಲು ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್‌ ಕುರಿತೇ!

2.ಯಾವುದಕ್ಕೆ ಕ್ರೆಡಿಟ್ ಕಾರ್ಡ್ ಬಳಸ್ಬೇಕು ಎಂದು ಮೊದಲೇ ನಿರ್ಧರಿಸಿ
ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ ತಲೆನೋವು ತರಬಾರದೆಂದ್ರೆ ಲಂಗುಲಗಾಮು ಇಲ್ಲದೆ ವ್ಯಯಿಸೋದನ್ನು ನಿಲ್ಲಿಸಿ. ಈ ರೀತಿ ಗೊತ್ತುಗುರಿಯಿಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿ ಆ ಬಳಿಕ ಬಿಲ್ ಪಾವತಿಸಲು ಹೆಣಗಾಡುತ್ತ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳೋ ಬದಲು ಮೊದಲೇ ಯಾವುದಕ್ಕೆ ಕ್ರೆಡಿಟ್ ಕಾರ್ಡ್ ಬಳಸಬೇಕು ಎಂಬುದನ್ನು ನಿರ್ಧರಿಸೋದು ಉತ್ತಮ. ಪ್ರತಿ ತಿಂಗಳು ಎಷ್ಟು ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬಲ್ಲಿರಿ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಅಷ್ಟೇ ಅಲ್ಲ, ಅಷ್ಟು ಮೊತ್ತಕ್ಕೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಇದ್ರಿಂದ ಬಿಲ್ ಬಂದ ಬಳಿಕ ಟೆನ್ಷನ್ ಮಾಡಿಕೊಳ್ಳೋದು, ಹಣ ಹೊಂದಿಸಲು ತಡಕಾಡೋದು ತಪ್ಪುತ್ತದೆ. 

3. ಕಡ್ಡಾಯ ವೆಚ್ಚಕ್ಕೆ ಮಾತ್ರ ಬಳಸಿ
ಇದು ಕ್ರೆಡಿಟ್ ಕಾರ್ಡ್ ಜಾಣತನದ ಬಳಕೆಗಿರೋ ಇನ್ನೊಂದು ನಿಯಮ. ಪ್ರತಿ ತಿಂಗಳು ಕಡ್ಡಾಯವಾಗಿ ಮಾಡಲೇಬೇಕಾದ ಒಂದಿಷ್ಟು ಪಾವತಿ ಅಥವಾ ಖರ್ಚುಗಳಿರುತ್ತವೆ. ಉದಾಹರಣೆಗೆ ವಿದ್ಯುತ್ ಬಿಲ್, ಮೊಬೈಲ್ ಬಿಲ್, ನೀರಿನ ಬಿಲ್, ದಿನಸಿ ಸಾಮಗ್ರಿಗಳು, ಸಾರಿಗೆ ವೆಚ್ಚ ಇತ್ಯಾದಿ ಖರ್ಚುಗಳು ಪ್ರತಿ ತಿಂಗಳು ಇರುತ್ತವೆ. ಇಂಥ ಅಗತ್ಯ ವೆಚ್ಚಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಇನ್ನು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ವಿಮೆ ಪ್ರೀಮಿಯಂ ಅಥವಾ ಆರೋಗ್ಯ ಸಂಬಂಧಿ ವೆಚ್ಚಗಳು ಬರುತ್ತವೆ. ಇಂಥ ವೆಚ್ಚಗಳಿಗೂ ಕ್ರೆಡಿಟ್ ಕಾರ್ಡ್ ಬಳಸಬಹುದು. ಶಾಪಿಂಗ್ ಸೇರಿದಂತೆ ಇತರ ಅನಗತ್ಯ ವೆಚ್ಚಗಳಿಗೆ ಕ್ರೆಡಿಟ್ ಕಾರ್ಡ್ ಬಳಕೆ ತಪ್ಪಿಸಿ. ಶಾಪಿಂಗ್ ಸಮಯದಲ್ಲಿ ನಗದು ಬದಲು ಕ್ರೆಡಿಟ್ ಕಾರ್ಡ್ ಬಳಸಿದ್ರೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ವ್ಯಯಿಸುತ್ತಾರೆ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ ಕೂಡ.

4.ಬಿಲ್ ಪಾವತಿ ಗಡುವು ನೆನಪಿರಲಿ
ಬಹುತೇಕ ಬಿಲ್ ಗಳು ಪ್ರತಿ ತಿಂಗಳ ಪ್ರಾರಂಭದಲ್ಲಿ ಬರುತ್ತವೆ. ಆದ್ರೆ ಕ್ರೆಡಿಟ್ ಕಾರ್ಡ್ ಬಿಲ್ ಹಾಗಲ್ಲ. ಅದು ಎಲ್ಲರಿಗೂ ಒಂದೇ ದಿನಾಂಕದಂದು ಬರೋದಿಲ್ಲ. ಅಂದ್ರೆ ಒಬ್ಬರಿಗೆ 6ನೇ ತಾರೀಖು ಸೃಷ್ಟಿಯಾದ್ರೆ, ಮತ್ತೊಬ್ಬರಿಗೆ 15ಕ್ಕೆ ಸಿದ್ಧಗೊಳ್ಳುತ್ತೆ. ಬಹುತೇಕರು ಕ್ರೆಡಿಟ್ ಕಾರ್ಡ್ ಬಿಲ್ಗೆ ಬಡ್ಡಿ ಅಥವಾ ದಂಡ ಪಾವತಿಸಲು ಕಾರಣ ಅಂತಿಮ ದಿನಾಂಕ ಮರೆತಿರೋದು. ಫೋನ್ ನಲ್ಲಿ ಮಾಸಿಕ ಡ್ಯೂ ಡೇಟ್ ರಿಮೈಂಡರ್ ಸೆಟ್ ಮಾಡಿಟ್ಟುಕೊಂಡ್ರೆ ಮರೆಯದೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಲು ಸಾಧ್ಯವಾಗುತ್ತದೆ.

Credit Card : ಉಚಿತವಾಗಿರಲ್ಲ ಕ್ರೆಡಿಟ್ ಕಾರ್ಡ್! ಗ್ರಾಹಕರಿಗೆ ಗೊತ್ತಿಲ್ಲದೆ ವಸೂಲಿ ಮಾಡಲಾಗುತ್ತೆ ಈ ಶುಲ್ಕ

5.ಕೊನೆಯ ಕ್ಷಣದ ತನಕ ಕಾಯಬೇಡಿ
ಬಿಲ್ ಅನ್ನು ಅಂತಿಮ ದಿನವೇ ಪಾವತಿಸುತ್ತೇನೆ ಎಂದು ಸುಮ್ಮನೆ ಕೂರಬೇಡಿ. ಕೆಲವೊಮ್ಮೆ ಡಿಜಿಟಲ್ ಪಾವತಿ ವಿಫಲವಾಗೋದೂ ಇರುತ್ತೆ. ಹೀಗಾದ್ರೆ ದಂಡ ಅಥವಾ ಬಡ್ಡಿ ಬೀಳೋದು ಗ್ಯಾರಂಟಿ.

6.ಅಟೋ ಪೇ ಮಾಡಿಡಿ
ನಿಮ್ಮ ಬ್ಯಾಂಕ್ ಖಾತೆಯಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಅಟೋ ಪೇ ಆಕ್ಟಿವೇಟ್ ಮಾಡಿಡೋದು ಉತ್ತಮ. ಇದ್ರಿಂದ ಡ್ಯೂ ಡೇಟ್ ಮಿಸ್ ಆಗೋದಿಲ್ಲ. ಡ್ಯೂ ಡೇಟ್ ಗಿಂತ ಎಷ್ಟು ದಿನ ಮುಂಚೆ ಪಾವತಿಸಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು. ಇದ್ರಿಂದ ನಿಗದಿತ ದಿನಾಂಕದಂದು ಬಿಲ್ ಪಾವತಿಯಾಗುತ್ತೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ