ಸೆಕ್ಸ್ ವರ್ಕರ್ಸ್ ಗೆ ಖುಷಿ ಸುದ್ದಿ..! ವಿಳಾಸ ಪುರಾವೆಯಿಲ್ಲದಿದ್ದರೂ ಸಿಗುತ್ತೆ Aadhaar Card

By Suvarna NewsFirst Published Mar 2, 2022, 2:52 PM IST
Highlights

ಆಧಾರ್ ಕಾರ್ಡ್ ಪಡೆಯುವಾಗ ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಅದ್ರಲ್ಲಿ ವಿಳಾಸ ಪುರಾವೆಯೂ ಒಂದು. ಅನೇಕರಿಗೆ ವಿಳಾಸವೇ ಇರುವುದಿಲ್ಲ. ಅಂಥವರಲ್ಲಿ ಲೈಂಗಿಕ ಕಾರ್ಯಕರ್ತರು ಸೇರ್ತಾರೆ. ಅವರಿಗೆ ಆಧಾರ್ ನೀಡುವ ವಿಷ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಘೋಷಣೆ ಮಾಡಿದೆ.
 

ಭಾರತ (India)ದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ್ ಕಾರ್ಡ್‌ (Aadhaar card) ಕಡ್ಡಾಯವಾಗಿದೆ. ಮತದಾರರ ಚೀಟಿ,ಪಾಸ್ಪೋರ್ಟ್,ರೇಷನ್ ಕಾರ್ಡ್ ನಂತೆಯೇ ಆಧಾರ್ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಅನೇಕ ಸೇವೆಗಳ ಜೊತೆಗೆ ಖಾಸಗಿ ಸೇವೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಪಡೆಯುವುದು ಅನಿವಾರ್ಯ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಜನರಿಗೆ ಆಧಾರ್ ಸುಲಭವಾಗಿ ಲಭ್ಯವಾಗಲಿ ಎಂಬ ಕಾರಣಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತನ್ನ ಯೋಜನೆಯಲ್ಲಿ ಸಾಕಷ್ಟು ನವೀಕರಣಗಳನ್ನು ಮಾಡ್ತಾ ಬಂದಿದೆ. ಆಧಾರ್ ಪಡೆಯುವುದು ಈಗ ಮೊದಲಿಗಿಂತ ಸುಲಭ. ಹಾಗೇ ವಿಳಾಸ ಬದಲಾವಣೆ ಸೇರಿದಂತೆ ನವಜಾತ ಶಿಶುವಿನ ಆಧಾರ್ ಕೂಡ ಸುಲಭವಾಗಿ ತಯಾರಿಸಬಹುದು. ಈಗ ಸೆಕ್ಸ್ ವರ್ಕರ್ಸ್ (Sex Workers) ಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ : ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ನೀಡುವ ಸಂಬಂಧ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಲೈಂಗಿಕ ಕಾರ್ಯಕರ್ತರು ಇನ್ಮುಂದೆ ಸುಲಭವಾಗಿ ಆಧಾರ್ ಕಾರ್ಡ್ ಪಡೆಯಬಹುದು. ಆಧಾರ್ ಕಾರ್ಡ್ ನೀಡುವುದಕ್ಕಾಗಿ ಬೇರೆ ಯಾವುದೇ ವಿಳಾಸ ಪ್ರಮಾಣಪತ್ರ ನೀಡಬೇಕಾಗಿಲ್ಲ. ಅಂದ್ರೆ ಅಡ್ರೆಸ್ ಪ್ರೂಫ್ ಇಲ್ಲಿದೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ಲಭ್ಯವಾಗಲಿದೆ.

Indian Billionaire: ಭಾರತದಲ್ಲಿ ಏರಿದ ದೊಡ್ಡ ಕುಳಗಳ ಲೆಕ್ಕ!

ಸಾಮಾನ್ಯವಾಗಿ ಭಾರತದ ನಾಗರಿಕ ಆಧಾರ್ ಕಾರ್ಡ್ ಪಡೆಯಬೇಕೆಂದ್ರೆ ಯುಐಡಿಎಐ ಅರ್ಜಿದಾರರ ಹೆಸರು, ಲಿಂಗ, ವಯಸ್ಸು ಮತ್ತು ವಿಳಾಸ ಮತ್ತು ಇಮೇಲ್ ಅಥವಾ ಮೊಬೈಲ್ ಸಂಖ್ಯೆ  ಸಲ್ಲಿಸಿಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನು ನೀಡಬೇಕು. ಆ ನಂತರ ಮಾತ್ರ ಆಧಾರ್ ಕಾರ್ಡ್ ನೀಡುವ ನಿಯಮವಿದೆ. ಆದ್ರೆ ಲೈಂಗಿಕ ಕಾರ್ಯಕರ್ತರಿಗೆ ಆಧಾರನ್ನು ಸುಲಭವಾಗಿ ನೀಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದೆ. 

ಲೈಂಗಿಕ ಕಾರ್ಯಕರ್ತರಿಗೆ ವಿನಾಯಿತಿ : ಸೆಕ್ಸ್ ವರ್ಕರ್ಸ್ ವಿಷಯದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿಯಮಗಳನ್ನು ಸಡಿಲಗೊಳಿಸಿದೆ. NACO ಅಥವಾ ರಾಜ್ಯದ ಆರೋಗ್ಯ ಇಲಾಖೆಯ ಗೆಜೆಟೆಡ್ ಅಧಿಕಾರಿಯಿಂದ ಲೈಂಗಿಕ ಕಾರ್ಯಕರ್ತೆಯೊಬ್ಬರು ಪಡೆದ ಪ್ರಮಾಣಪತ್ರವನ್ನು ಯುಐಡಿಎಐ ಮಾನ್ಯ ಮಾಡಲಿದೆ. NACO ,ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಇಲಾಖೆಯಾಗಿದೆ.   

GST COLLECTION: ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ

ಸುಪ್ರೀಂನಲ್ಲಿದೆ ಪ್ರಕರಣ : ಸೆಕ್ಸ್ ವರ್ಕರ್ಸ್ ಗೆ ಆಧಾರ್ ನೀಡುವ ವಿಷ್ಯಕ್ಕೆ ಸಂಬಂಧಿಸಿದಂತೆ 2011ರಿಂದಲೇ ಸುಪ್ರೀಂ ಕೋರ್ಟ್ ನಲ್ಲಿ ನಿರಂತರ ವಿಚಾರಣೆ ನಡೆಯುತ್ತಿದೆ.  ನ್ಯಾಯಮೂರ್ತಿ ಎಲ್.ಎನ್. ರಾವ್ ಇದ್ರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಯುಐಡಿಎಐ ಲೈಂಗಿಕ ಕಾರ್ಯಕರ್ತೆಯರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನೊಳಗೊಂಡ ಅಫಿಡೆವಿಟ್ ಸುಪ್ರೀಂ ಕೋರ್ಟ್ ಮುಂದಿಟ್ಟಿದೆ. ಇದ್ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಯೋಜನೆ ವಿಷ್ಯವೂ ಸೇರಿದೆ. ಜನವರಿ 10ರಂದು ಯುಐಡಿಎಐಗೆ ಸುಪ್ರೀಂ ಕೋರ್ಟ್ ಪ್ರಶ್ನೆಯೊಂದನ್ನು ಕೇಳಿತ್ತು. ಅದಕ್ಕೆ ಯುಐಡಿಎಐ ಉತ್ತರದ ರೂಪದಲ್ಲಿ ಅಫಿಡೆವಿಟ್ ಸಲ್ಲಿಸಿದೆ. NACO ಬಳಿಯಿರುವ ಲೈಂಗಿಕ ಕಾರ್ಯಕರ್ತರ ಮಾಹಿತಿಯನ್ನು ವಿಳಾಸ ದಾಖಲೆ ರೂಪದಲ್ಲಿ ಪರಿಗಣಿಸಿ,ಅವರಿಗೆ ಆಧಾರ್ ನೀಡಲಾಗುತ್ತದೆಯೇ ಎಂದು ಸುಪ್ರೀಂ ಕೋರ್ಟ್, ಯುಐಡಿಎಐಗೆ ಕೇಳಿತ್ತು. ಅದಕ್ಕೆ ಉತ್ತರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯಸ್ ಎಂದಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಈ ನಿರ್ಧಾರ ಲೈಂಗಿಕ ಕಾರ್ಯಕರ್ತರಿಗೆ ಸಾಮಾನ್ಯ ಜೀವನ ನಡೆಸಲು ನೆರವಾಗಲಿದೆ ಎಂಬ ಭರವಸೆ ಮೂಡಿಸಿದೆ. 

click me!