5G Spectrum Auction:5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್ ಎಂಟ್ರಿ; ಜಿಯೋ, ಏರ್ ಟೆಲ್ ಗೆ ಬಿಗ್ ಶಾಕ್!

By Suvarna NewsFirst Published Jul 9, 2022, 8:39 PM IST
Highlights

*ಜುಲೈ 26ರಂದು ನಡೆಯಲಿರುವ 5ಜಿ ಸ್ಪೆಕ್ಟ್ರಂ ಹರಾಜು
*ಜಿಯೋ, ಏರ್ ಟೆಲ್, ವೋಡಾಫೋನ್ ಐಡಿಯಾ ಜೊತೆಗೆ ಅದಾನಿ ಗ್ರೂಪ್ ನಿಂದ ಬಿಡ್ ಸಲ್ಲಿಕೆ
*ಅದಾನಿ ಗ್ರೂಪ್ ಪ್ರವೇಶದಿಂದ ಹೆಚ್ಚಿದ ಸ್ಪರ್ಧೆ

ನವದೆಹಲಿ (ಜು.9): ಮುಖೇಶ್ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್ ಜಿಯೋ (Reliance Jio) ಹಾಗೂ ಸುನೀಲ್ ಭಾರತಿ ಮಿತ್ತಲ್ (Sunil Bharti Mittal) ನೇತೃತ್ವದ ಏರ್ ಟೆಲ್ ಗೆ (Airtel) ಏಷ್ಯಾದ (Asia) ನಂ.1 ಸಿರಿವಂತ ಗೌತಮ್ ಅದಾನಿ (Gautam Adani) ಶಾಕ್ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ನಡೆಯಲಿರುವ 5ಜಿ ತರಂಗಾಂತರಗಳ (5G spectrum) ಹರಾಜಿನಲ್ಲಿ ಭಾಗವಹಿಸುತ್ತಿರೋದನ್ನು ಅದಾನಿ ಗ್ರೂಪ್ (Adani Group) ದೃಢೀಕರಿಸಿದೆ 

ಏರ್ ಪೋರ್ಟ್ ನಿಂದ ಹಿಡಿದು ಇಂಧನ ತನಕದ ಉದ್ಯಮಗಳನ್ನು ಬೆಂಬಲಿಸಲು ಖಾಸಗಿ ನೆಟ್ ವರ್ಕ್ ಸೃಷ್ಟಿಗೆ ಮುಂದಾಗಿರೋದಾಗಿ ಅದಾನಿ ಗ್ರೂಪ್ ತಿಳಿಸಿದೆ. ಮುಂದಿನ ತಲೆಮಾರಿನ ಅಥವಾ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಒದಗಿಸುವ 5ಜಿ ತರಂಗಾಂತರಗಳ ಹಂಚಿಕೆಗೆ ಜುಲೈ  26ರಂದು ಹರಾಜು ನಡೆಯಲಿದೆ. ಇದರಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಕೆಗೆ ಶುಕ್ರವಾರ (ಜು.8) ಕೊನೆಯ ದಿನವಾಗಿತ್ತು. ಏರ್ ಟೆಲ್ ಸೇರಿದಂತೆ ಜಿಯೋ, ವೋಡಾಪೋನ್ ಐಡಿಯಾ (Vi) ಹಾಗೂ ಅದಾನಿ ಗ್ರೂಪ್ ಹೀಗೆ ಒಟ್ಟು 4 ಕಂಪನಿಗಳು ಅರ್ಜಿ ಸಲ್ಲಿಸಿವೆ. 

Inflation: ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಹಣದುಬ್ಬರ ತಗ್ಗುವ ನಿರೀಕ್ಷೆ: ಆರ್ ಬಿಐ ಗವರ್ನರ್

'ಈ ಹರಾಜಿನ ಮೂಲಕ ಭಾರತ ಮುಂದಿನ ತಲೆಮಾರಿನ 5ಜಿ ಸೇವೆಗಳನ್ನು ಪಡೆಯಲು ಸಿದ್ಧತೆ ನಡೆಸಿದೆ. ಈ ಮುಕ್ತ ಬಿಡ್ಡಿಂಗ್ ನಲ್ಲಿ ಅನೇಕ ಅರ್ಜಿದಾರರ ಜೊತೆಗೆ ನಾವು ಕೂಡ ಪಾಲ್ಗೊಳ್ಳುತ್ತಿದ್ದೇವೆ' ಎಂದು ಅದಾನಿ ಗ್ರೂಪ್ ಹೇಳಿಕೆಯೊಂದರಲ್ಲಿ ತಿಳಿಸಿದೆ. 'ವಿಮಾನ ನಿಲ್ದಾಣ, ಬಂದರುಗಳು, ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ, ಸಾಗಣೆ, ವಿತರಣೆ ಹಾಗೂ ವಿವಿಧ ಉತ್ಪಾದನಾ ಕಾರ್ಯಗಳಿಗೆ ಖಾಸಗಿ ನೆಟ್ ವರ್ಕ್ ಸೌಲಭ್ಯದ ಜೊತೆಗೆ ಸೈಬರ್ ಭದ್ರತೆ ಹೆಚ್ಚಿಸಲು ನಾವು 5ಜಿ ತರಂಗಾಂತರಗಳ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದೇವೆ' ಎಂದು ಕೂಡ ಅದು ಹೇಳಿದೆ.

5ಜಿ ತರಂಗಾಂತರಗಳ ಹರಾಜಿನಲ್ಲಿಅದಾನಿ ಗ್ರೂಪ್ ಪ್ರವೇಶದಿಂದ ಸ್ಪರ್ಧೆ ಹೆಚ್ಚಲಿದೆ ಎಂದು ಹೇಳಲಾಗಿದೆ. ಈ ತನಕ ಈ ಹರಾಜಿನಲ್ಲಿ ಜಿಯೋ ಹಾಗೂ ಭಾರತಿ ಏರ್ ಟೆಲ್ ಇಬ್ಬರೇ ಪ್ರಮುಖ ಬಿಡ್ಡರ್ಸ್ ಎಂದು ಭಾವಿಸಲಾಗಿತ್ತು.ಹರಾಜು ವೇಳಾಪಟ್ಟಿಯ ಪ್ರಕಾರ ಅರ್ಜಿದಾರರ ವಿವರಗಳನ್ನು ಜುಲೈ 12ರಂದು ಪ್ರಕಟಿಸಲಾಗುತ್ತದೆ. ಆ ಬಳಿಕ ಜುಲೈ 18ರಂದು ಬಿಡ್ ದಾರರ ಪೂರ್ವ ಅರ್ಹತೆ ಪರಿಸೀಲನೆ ನಡೆಯಲಿದೆ. ಇನ್ನು ಜುಲೈ 22 ಹಾಗೂ 23ರಂದು ಅಣುಕು ಹರಾಜು ನಡೆಯಲಿದೆ. 

ಜುಲೈ 26ರಂದು ನಡೆಯಲಿರುವ ಹರಾಜಿನಲ್ಲಿ ಕನಿಷ್ಠ 4.3 ಲಕ್ಷ ಕೋಟಿ ಮೌಲ್ಯದ ಒಟ್ಟು 72,097.85 ಮೆಗಾಹರ್ಟ್ಸ್‌ ತರಂಗಗಳನ್ನು ಹರಾಜಿಗೆ ಇಡಲಾಗಿದೆ.ಕಡಿಮೆ ಫ್ರೀಕ್ವೆನ್ಸಿ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ ಫ್ರೀಕ್ವೆನಿ (3300 MHz) ಹಾಗೂ ಅಧಿಕ ಫ್ರೀಕ್ವೆನಿಯ (26 GHz) ಬ್ಯಾಂಡ್ ಗಳ ಹರಾಜು ನಡೆಯಲಿದೆ. 

ಆಮ್ನೆಸ್ಟಿಇಂಡಿಯಾ ಮಾಜಿ ಸಿಇಒ Aakar Patelಗೆ 61 ಕೋಟಿ ದಂಡ

ಈ ತನಕ ಭಾರತದ ಇಬ್ಬರು ಟಾಪ್ ಶ್ರೀಮಂತ ಉದ್ಯಮಿಗಳಾದ ಅಂಬಾನಿ ಹಾಗೂ ಅದಾನಿ ನಡುವೆ ನೇರ ಮುಖಾಮುಖಿ ಸ್ಪರ್ಧೆ ನಡೆದಿರಲಿಲ್ಲ. ಆದರೆ, ಇದೀಗ 5ಜಿ ತರಂಗಾಂತರಗಳ ಹರಾಜಿನಲ್ಲಿ ಇಬ್ಬರೂ ಮುಖಾಮುಖಿ ಆಗುತ್ತಿದ್ದಾರೆ. ಅಂಬಾನಿ ತೈಲ ಹಾಗೂ ಪೆಟ್ರೋಕೆಮಿಕಲ್ಸ್ ಉದ್ಯಮಗಳಿಂದ ಟೆಲಿಕಾಮ್ ಹಾಗೂ ರಿಟೇಲ್ ಕ್ಷೇತ್ರಕ್ಕೆ ತನ್ನ ಉದ್ಯಮ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದರೆ, ಅದಾನಿ ಬಂದರು ಕ್ಷೇತ್ರದಿಂದ ಕಲ್ಲಿದ್ದಲು, ಇಂಧನ ವಿತರಣೆ ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಉದ್ಯಮ ವಿಸ್ತರಣೆ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಇವರಿಬ್ಬರ ಆಸಕ್ತಿ ಹಾಗೂ ಆಯ್ಕೆಗಳು ಮುಖಾಮುಖಿಯಾಗುತ್ತಿವೆ. ಅದಾನಿ ಪೆಟ್ರೋಕೆಮಿಕಲ್ ಕ್ಷೇತ್ರಕ್ಕೆ ಕಳೆದ ಕೆಲವು ತಿಂಗಳ ಹಿಂದೆ ಪ್ರವೇಶ ನೀಡಿದ್ದಾರೆ. ಅತ್ತ ಅಂಬಾನಿ ನವೀನ ಇಂಧನ ಉದ್ಯಮಕ್ಕೆ ಕೈ ಹಾಕಿದ್ದಾರೆ. 

20 ವರ್ಷಗಳ ದೀರ್ಘಾವಧಿಗೆ ತರಂಗಾಂತರಗಳ ಹರಾಜು ನಡೆಯಲಿದೆ. ಈ ಬಾರಿ ಅರ್ಜಿದಾರರಿಗೆ ಪಾವತಿ ನಿಯಮಗಳನ್ನು ಸರಳಗೊಳಿಸಲಾಗಿದೆ. ಮುಂಗಡ ಪಾವತಿ ಕಡ್ಡಾಯ ಮಾಡಿಲ್ಲ.ಅಲ್ಲದೆ, ಹರಾಜಿನಲ್ಲಿ ಗೆದ್ದವರು 20 ವರ್ಷಗಳ ಕಾಲ ಕಂತಿನಲ್ಲಿ ಹಣ ಪಾವತಿಸಲು ಅವಕಾಶ ನೀಡಲಾಗಿದೆ. 

click me!