ಸರ್ಕಾರಿ ಕೆಲಸವೇ ಆಗ್ಬೇಕು, ಐಟಿ ಕಂಪನಿಯಲ್ಲೇ ಕೆಲಸ ಮಾಡ್ಬೇಕೆಂದು ಕುಳಿತ್ರೆ ಅನೇಕ ಬಾರಿ ಊಟಕ್ಕೂ ಹಣವಿರೋದಿಲ್ಲ. ಹಾಗಾಗಿ ಸ್ವಂತ ಕಾಲಿನ ಮೇಲೆ ನಿಲ್ಲುವ ಪ್ರಯತ್ನ ಮಾಡ್ಬೇಕು. ತಲೆ ಉಪಯೋಗಿಸಿ ಕೆಲ ಸುಲಭ ಕೆಲಸ ಶುರು ಮಾಡ್ಬೇಕು.
ನಿರುದ್ಯೋಗಿ (Unemployed) ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ವಿದ್ಯಾಭ್ಯಾಸ (Education) ಮುಗಿಸಿದ ಜನರು ಸಣ್ಣಪುಟ್ಟ ಉದ್ಯೋಗ ಮಾಡಿ ಒಂದಿಷ್ಟು ಹಣ ಗಳಿಸಲು ಮುಂದಾಗ್ತಾರೆ. ಆದ್ರೆ ಉದ್ಯೋಗ ಈಗ ಅನೇಕರಿಗೆ ಕನಸಾಗಿದೆ. ಸರ್ಕಾರಿ ಉದ್ಯೋಗ (Government employment ) ಸಿಗಲಿ ಎಂದು ಅನೇಕರು ನಿರಂತರ ಪ್ರಯತ್ನ ಮಾಡ್ತಾರೆ. ಸರ್ಕಾರ ಕೆಲ ಆಯ್ದ ಹುದ್ದೆಗಳಿಗೆ ಮಾತ್ರ ನೇಮಕ ಮಾಡುವುದ್ರಿಂದ ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲು ಸಾಧ್ಯವಿಲ್ಲ. ಹಾಗಂತ ಕೆಲಸ (Work) ವಿಲ್ಲದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕೈನಲ್ಲಿ ಕೆಲಸ, ಜೇಬಿನಲ್ಲಿ ಹಣ (Money) ವಿದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ತಂದೆ – ತಾಯಿ ಹಣದಲ್ಲಿ ಎಷ್ಟು ದಿನ ಜೀವನ ನಡೆಸಲು ಸಾಧ್ಯ?. ಒಂದೇ ಕಡೆ ಕುಳಿತು ನೀವು ಸ್ವಲ್ಪ ಮಟ್ಟಿಗೆ ಹಣ ಗಳಿಸಬಹುದಾದ ಕೆಲಸಗಳಿವೆ. ಆಧುನಿಕ ಯುಗದಲ್ಲಿ ಮೊಬೈಲ್ (Mobile) , ಲ್ಯಾಪ್ಟಾಪ್ (Laptop) ಗೆ ಬೇಡಿಕೆ ಹೆಚ್ಚಾಗ್ತಿದೆ. ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿಯು ಲ್ಯಾಪ್ ಟಾಪ್ ಮತ್ತು ಮೊಬೈಲ್ ಬಳಸ್ತಿದ್ದಾನೆ. ಇದರಿಂದಾಗಿ ಅದರ ರಿಪೇರಿಗೂ ಬೇಡಿಕೆ ಹೆಚ್ಚಾಗಿದೆ. ನಿಮಗೆ ಕೆಲಸವಿಲ್ಲದಿದ್ದರೆ ಮೊಬೈಲ್ ಮತ್ತು ಲ್ಯಾಪ್ಟಾಪ್ ದುರಸ್ತಿ ಕೇಂದ್ರವನ್ನು ತೆರೆಯುವ ಮೂಲಕ ನೀವು ಸುಲಭವಾಗಿ ಹಣವನ್ನು ಗಳಿಸಬಹುದು. ಹೆಚ್ಚುತ್ತಿರುವ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳ ಪ್ರವೃತ್ತಿಯಿಂದಾಗಿ ಅವುಗಳನ್ನು ರಿಪೇರಿ ಮಾಡುವವರ ಬೇಡಿಕೆಯೂ ಹೆಚ್ಚುತ್ತಿದೆ.
ಲ್ಯಾಪ್ಟಾಪ್ ಮತ್ತು ಮೊಬೈಲ್ ರಿಪೇರಿ ಒಂದು ಕೌಶಲ್ಯವಾಗಿದೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ನೀವು ಅದರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೊಂದಿರಬೇಕು.
ಅನೇಕರಿಗೆ ರಿಪೇರಿ ತಿಳಿದಿರುವುದಿಲ್ಲ. ಅಂಥವರು ಲ್ಯಾಪ್‌ಟಾಪ್ ಮತ್ತು ಮೊಬೈಲ್ ರಿಪೇರಿ ಮಾಡುವುದನ್ನು ಆನ್‌ಲೈನ್‌ನಲ್ಲಿ ಕಲಿಯಬಹುದು. ಆದರೆ ಇನ್ಸ್ಟಿಟ್ಯೂಟ್‌ಗೆ ಹೋಗುವುದು ಉತ್ತಮ. ಕೋರ್ಸ್ ಮಾಡಿದ ನಂತರ ನೀವು ಸ್ವಲ್ಪ ಸಮಯದವರೆಗೆ ರಿಪೇರಿ ಕೇಂದ್ರದಲ್ಲಿ ಕೆಲಸ ಮಾಡಿದರೆ ನಂತರ ಸ್ವಂತ ವ್ಯವಹಾರ ಶುರು ಮಾಡ್ಬಹುದು.
ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು ? : ನೀವು ಲ್ಯಾಪ್‌ಟಾಪ್ ಮತ್ತು ಮೊಬೈಲ್ ರಿಪೇರಿಯಲ್ಲಿ ಪರಿಣತರಾಗಿದ್ದರೆ ನಿಮ್ಮ ಸ್ವಂತ ದುರಸ್ತಿ ಕೇಂದ್ರವನ್ನು ತೆರೆಯಬೇಕು. ಜನ ಸುಲಭವಾಗಿ ಬರುವಂತಹ ಜಾಗದಲ್ಲಿ ,ಯಾರಿಗೂ ತೊಂದರೆ ಆಗದಂತೆ ಲ್ಯಾಪ್‌ಟಾಪ್ ದುರಸ್ತಿ ಕೇಂದ್ರ ತೆರೆಯಬೇಕು. ನೀವು ತೆರೆಯುವ ಜಾಗದಲ್ಲಿ ಈಗಾಗಲೇ ಕಂಪ್ಯೂಟರ್ ರಿಪೇರಿ ಕೇಂದ್ರಗಳಿದೆಯೇ ಎಂಬುದನ್ನು ನೋಡಿಕೊಳ್ಳಿ.
25 ಸಾವಿರ ಹೂಡಿಕೆಯಿಂದ ಸಿಗುತ್ತೆ 3 ಲಕ್ಷ ಲಾಭ
ರಿಪೇರಿ ಕೇಂದ್ರದ ಬಗ್ಗೆ ಪ್ರಚಾರ ಮಾಡಲು ನೀವು ಸಾಮಾಜಿಕ ಜಾಲತಾಣದ ಸಹಾಯವನ್ನು ತೆಗೆದುಕೊಳ್ಳಬಹುದು. ಇದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ. ಹಾಗೆಯೇ ನಿಮ್ಮ ಕೆಲಸ ಸರಿಯಾಗಿದ್ದರೆ ಬಾಯಿಂದ ಬಾಯಿಗೆ ಹೋಗಿ, ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಲ್ಯಾಪ್ಟಾಪ್ ಮತ್ತು ಮೊಬೈಲ್ ರಿಪೇರಿ ಮಾಡುವ ಕೇಂದ್ರವನ್ನು ತೆರೆಯುವ ಮೊದಲು ನೀವು ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಬೇಕು. ರಿಪೇರಿಗೆ ಬೇಕಾದ ಸಾಮಗ್ರಿಗಳನ್ನು ನೀವು ಇಟ್ಟಿರಬೇಕು.
ಎಷ್ಟು ಖರ್ಚು ? ಎಷ್ಟು ಗಳಿಕೆ ? : ಪಟ್ಟಣ ಅಥವಾ ನಗರದಲ್ಲಿ ದುರಸ್ತಿ ಕೇಂದ್ರವನ್ನು ತೆರೆದರೆ ದೊಡ್ಡ ಮಟ್ಟದಲ್ಲಿ ಲಾಭ ಗಳಿಸಬಹುದು. 2 ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡಿ ಕಂಪ್ಯೂಟರ್ ರಿಪೇರಿ ಕೇಂದ್ರ ಆರಂಭಿಸಬಹುದು. ರಿಪೇರಿ ಮಾಡುವುದರ ಹೊರತಾಗಿ ನೀವು ದಿನ ಕಳೆದಂತೆ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ಮೊಬೈಲ್ ಮತ್ತು ಲ್ಯಾಪ್‌ಟಾಪ್ ರಿಪೇರಿ ಶುಲ್ಕ ತುಂಬಾ ಹೆಚ್ಚಾಗಿದೆ. ಹಾಗಾಗಿ ನೀವು ತಿಂಗಳಿಗೆ 70-80 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಗಳಿಕೆ ನಿಮ್ಮ ಕೆಲಸದ ಮೇಲೆ ನಿರ್ಧಾರವಾಗುತ್ತದೆ. ನೀವು ರಿಪೇರಿ ಕೇಂದ್ರವನ್ನು ಮನೆಯಲ್ಲೂ ತೆರೆಯಬಹುದು. ಆಗ ಕೇಂದ್ರಕ್ಕೆ ಬಾಡಿಗೆ ನೀಡುವುದು ಉಳಿಯುತ್ತದೆ.