9 To 5 ಜಾಬ್ ಜೊತೆಯಲ್ಲಿಯೇ ಮಾಡಬಹುದಾದ ಬ್ಯುಸಿನೆಸ್ ಐಡಿಯಾ; ಕಡಿಮೆ ಕೆಲಸ, ಕೈ ತುಂಬಾ ಹಣ

By Mahmad Rafik  |  First Published Dec 26, 2024, 5:01 PM IST

9 ರಿಂದ 5ರವರೆಗೆ ಕೆಲಸ ಮಾಡುವವರು ಹೆಚ್ಚುವರಿ ಆದಾಯ ಗಳಿಸಲು ಹಲವು ಮಾರ್ಗಗಳಿವೆ. ಕೆಲಸದ ಜೊತೆಯಲ್ಲಿಯೇ ಮಾಡಬಹುದಾದ 5 ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ.


ಬೆಂಗಳೂರು: ಬೆಳಗ್ಗೆ  9 ರಿಂದ ಸಂಜೆ 5 ಗಂಟೆ ಕೆಲಸ ಮಾಡುವ ವರ್ಗದವರ ಆದಾಯದ ಮೂಲ ಒಂದೇ ಆಗಿರುತ್ತದೆ. ಬೇರೆ ಕೆಲಸ ಮಾಡೋಣ ಅಂದ್ರೆ ಸಮಯ ಇಲ್ಲವಲ್ಲಾ ಅಂತ ಗೋಳಾಡುತ್ತಿರುತ್ತಾರೆ. ಆದ್ರೆ ಇಂದು ನಾವು ನಿಮಗೆ 9 To 5 ಜಾಬ್ ಮಾಡ್ಕೊಂಡು, ಮನೆಯಲ್ಲಿಯೇ ಆರಾಮದಾಯಕವಾಗಿ ಮಾಡುವ ಕೆಲಸಗಳ ಮಾಹಿತಿ ಹೇಳುತ್ತಿದ್ದೇವೆ. ಕಡಿಮೆ ಸಮಯದಲ್ಲಿ ಕೆಲಸ ಮಾಡಿ ಹೆಚ್ಚು ಹಣ ಗಳಿಸುವ ಆಯ್ಕೆಗಳಿವೆ. ಕ್ರಮಬದ್ಧವಾಗಿ ಟೈಮ್ ಟೇಬಲ್ ಸೆಟ್ ಮಾಡಿಕೊಂಡರೆ ಯಾವುದೇ ಕೆಲಸ ಒತ್ತಡ ಆಗಲ್ಲ. ಫುಲ್ ಟೈಮ್ ವರ್ಕ್ ಮಾಡುತ್ತಿರುವ ಉದ್ಯೋಗಿಗಳು ಮಾಡಬಹುದಾದ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ. 

1.ಕಂಟೆಂಟ್ ಕ್ರಿಯೇಷನ್
ನಿಮ್ಮ ಬರವಣಿಗೆ ಉತ್ತಮವಾಗಿದ್ದರೆ ನೀವು ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡಬಹುದು. ಇಂದು ಆಟೋಮೊಬೈಲ್, ಸಿನಿಮಾ, ಫ್ಯಾಶನ್ ಸೇರಿದಂತೆ ಹಲವು ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಇಲ್ಲಿ ನೀವು ಬರೆಯುವ ಪ್ರತಿಯೊಂದು ಪದಕ್ಕೂ ಬೆಲೆ ಇರುತ್ತದೆ. ಹೆಚ್ಚುವರಿ ಆದಾಯಕ್ಕಾಗಿ ಇದು ಒಳ್ಳೆಯ ಆಯ್ಕೆಯಾಗಿದೆ. ಜಾಹೀರಾತುಗಳ ಕಂಟೆಂಟ್ ಕ್ರಿಯೇಟರ್‌ಗಳು ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ. 

Tap to resize

Latest Videos

undefined

2.ವಿಡಿಯೋ ಎಡಿಟಿಂಗ್ 
ನಿಮ್ಮ ಬಳಿಕ ವಿಡಿಯೋ ಎಡಿಟಿಂಗ್ ಸಿಸ್ಟಮ್ ಇದ್ರೆ, ಸಂಜೆ ಕೆಲಸದ ಬಳಿಕ ಕೇವಲ 2 ರಿಂದ 3 ಗಂಟೆ ಕೆಲಸ ಮಾಡಿ ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ಹಣ ಗಳಿಸಬಹುದು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ತಮ್ಮ ರೀಲ್ಸ್, ವಿಡಿಯೋ ಎಡಿಟ್ ಮಾಡಲು ಸಾವಿರಾರು ರೂಪಾಯಿ ಪಾವತಿಸಲು ಸಿದ್ಧವಿರುತ್ತಾರೆ. ಈ ರೀತಿಯ ಕೆಲವು ಗ್ರಾಹಕರು ನಿಮಗೆ ಸಿಕ್ಕರೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಬಹುದು. 

3.ಪುಸ್ತಕ ಮಾರಾಟ 
ಸೋಶಿಯಲ್ ಮೀಡಿಯಾ ದುನಿಯಾದಲ್ಲಿಯೂ ಪುಸ್ತಕ ಓದುವ ಜನರಿದ್ದಾರೆ. ಕೆಲಸದಿಂದ ಬಂದಾಕ್ಷಣ ಜನಸಂದಣಿ ಇರೋ ಪ್ರದೇಶದಲ್ಲಿ ಸಣ್ಣದಾದ ಸ್ಟಾಲ್ ಹಾಕಿಕೊಂಡು ಪುಸ್ತಕ ಮಾರಾಟ ಮಾಡಬಹುದು. ಇದು ಸಹ ಒಳ್ಳೆಯ ಬ್ಯುಸಿನೆಸ್ ಆಗಿದೆ. 

ಇದನ್ನೂ ಓದಿ: ತುಂಬಾ ಓದಿದ್ದೇನೆ ಅಂತ ಹಮ್ಮು ಗಿಮ್ಮು ಬೇಡ; ನಿಮ್ಮೂರಿನಲ್ಲಿಯೇ ಈ 3 ಬ್ಯುಸಿನೆಸ್ ಆರಂಭಿಸಿ, ಕೈ ತುಂಬಾ ಹಣ ಎಣಿಸಿ

4.ಟ್ಯೂಷನ್ 
ಒಂದು ವೇಳೆ ನೀವು ಶಿಕ್ಷಕ/ಕಿಯಾಗಿ ಕೆಲಸ ಮಾಡುತ್ತಿದ್ದರೆ ಮನೆಯಲ್ಲಿಯೇ ಮಕ್ಕಳಿಗೆ ಪಾಠ ಮಾಡಿ ತಿಂಗಳಿಗೆ ಸಾವಿರಾರರು ರೂಪಾಯಿ ಹಣ ಸಂಪಾದಿಸುವ ಜನರನ್ನು ನೋಡಿರುತ್ತವೆ. ಕೇವಲ ಒಂದು ಗಂಟೆಯ ಟ್ಯೂಷನ್‌ಗೆ ಓರ್ವ ವಿದ್ಯಾರ್ಥಿಯಿಂದ ತಿಂಗಳಿಗೆ 500 ರೂ.ಗಿಂತಲೂ ಹೆಚ್ಚು ಶುಲ್ಕ ಪಡೆಯಬಹುದು. 10 ರಿಂದ 15 ವಿದ್ಯಾರ್ಥಿಗಳು ನಿಮ್ಮ ಬಳಿ ಬರುತ್ತಿದ್ರೆ ತಿಂಗಳಿಗೆ 10 ಸಾವಿರ ರೂ.ವರೆಗೂ ಹಣ ಮಾಡಬಹುದು. 

5.ತಿಂಡಿ ಮಾರಾಟ 
ರಜಾ ದಿನಗಳಲ್ಲಿ ತಿಂಡಿಗಳನ್ನು ತಯಾರಿಸಿ ಪ್ಯಾಕ್ ಮಾಡಿಕೊಂಡು ಸ್ಟೋರ್ ಮಾಡೋದು. ಸಂಜೆ ಕೆಲಸದ ಬಳಿಕ ಪ್ರತಿದಿನವೂ ಸಣ್ಣದಾದ ಸ್ಟಾಲ್ ಹಾಕಿಕೊಂಡು ತಿಂಡಿಗಳನ್ನು ಮಾರಾಟ ಮಾಡಬಹುದು. ಒಮ್ಮೆ ನಿಮ್ಮ ತಿಂಡಿಯ ರುಚಿ ಗ್ರಾಹಕರಿಗೆ ಇಷ್ಟವಾದ್ರೆ, ಮತ್ತೊಮ್ಮೆ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. 

ಇದನ್ನೂ ಓದಿ: 2025ಕ್ಕೆ ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳು: ಪ್ರತಿದಿನ ಎಣಿಸಬಹುದು ಹಣ

click me!