10 ರೂ ರೀಚಾರ್ಜ್, 365 ದಿನ ವ್ಯಾಲಿಡಿಟಿ; TRAI ಹೊಸ ನಿಯಮಗಳಿಗೆ ಕೋಟ್ಯಂತರ ಮೊಬೈಲ್ ಬಳಕೆದಾರರು ಹ್ಯಾಪಿ ಹ್ಯಾಪಿ

By Mahmad Rafik  |  First Published Dec 26, 2024, 3:53 PM IST

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದೇಶದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. 2G ಫೋನ್ ಬಳಕೆದಾರರಿಗೆ ಪ್ರತ್ಯೇಕ ಪ್ಲಾನ್‌ಗಳು, 365 ದಿನಗಳ ವ್ಯಾಲಿಡಿಟಿ ಮತ್ತು ಡ್ಯುಯಲ್ ಸಿಮ್ ಬಳಕೆದಾರರಿಗೆ ವಾಯ್ಸ್ ಓನ್ಲಿ ಪ್ಲಾನ್‌ಗಳು ಸೇರಿವೆ.


ನವದೆಹಲಿ:  ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ದೇಶದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. 10 ರೂಪಾಯಿ ರೀಚಾರ್ಜ್‌ನಿಂದ 365 ದಿನ ವ್ಯಾಲಿಡಿಟಿಯ ಪ್ಲಾನ್‌ಗಳ ಕುರಿತು TRAI ಹೊಸ ನಿಯಮಗಳನ್ನು ಪ್ರಕಟಿಸಿದೆ. ಡ್ಯುಯಲ್ ಸಿಮ್ ಬಳಕೆದಾರರು ವಾಯ್ಸ್ ಓನ್ಲಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. Airtel, Jio, Vodafone Idea ಮತ್ತು BSNL ನಾಲ್ಕು ಟೆಲಿಕಾಂ ಕಂಪನಿಗಳು  TRAI ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.  ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಂತ್ರಣದಲ್ಲಿ 12ನೇ ತಿದ್ದುಪಡಿ ಮಾಡುವ ಮೂಲಕ ಬಳಕೆದಾರರ ಹಿತಾಸಕ್ತಿಗಾಗಿ TRAI ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೆಲ ತಿಂಗಳ ಹಿಂದೆ ಟೆಲಿಕಾಂ ನಿಯಂತ್ರಕರು ಎಲ್ಲಾ ಮಧ್ಯಸ್ಥಗಾರರೊಂದಿಗೆ ವರ್ಚುವಲ್ ಸಭೆ ನಡೆಸಿದ ಬಳಿಕ ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. 

Telecom Regulatory Authority of India ಪ್ರಮುಖ ಹೊಸ ನಿಯಮಗಳು 

Tap to resize

Latest Videos

undefined

1.TRAI ಗ್ರಾಹಕ ಸಂರಕ್ಷಣಾ ನಿಯಂತ್ರಣವನ್ನು ತಿದ್ದುಪಡಿ ಪ್ರಕಾರ, 2G ಫೀಚರ್ ಫೋನ್ ಬಳಕೆದಾರರಿಗೆ ವಾಯ್ಸ್ ಮತ್ತು ಎಸ್‌ಎಂಎಸ್ ಹೊಂದಿರುವ ಪ್ರತ್ಯೇಕ ವಿಶೇಷ ಟ್ಯಾರಿಫ್ ವೋಚರ್ (STV) (ಪ್ರಿಪೇಯ್ಡ್ ಪ್ಲಾನ್) ಪ್ರಕಟಿಸುವುದು. ಈ ನಿಯಮದಿಂದ 2G ಫೀಚರ್ ಅಥವಾ ಕೀಪ್ಯಾಡ್ ಫೋನ್ ಹೊಂದಿರುವ ಬಳಕೆದಾರರಿಗೆ ದೊಡ್ಡಮಟ್ಟದಲ್ಲಿ ಹಣ ಉಳಿತಾಯವಾಗಲಿದೆ. ಗ್ರಾಮೀಣ ಭಾಗದ ಜನರು ಮತ್ತ ಹಿರಿಯ ನಾಗರಿಕರು ಈ ರೀತಿಯ ಫೋನ್‌ಗಳನ್ನು ಬಳಸುತ್ತಿರುತ್ತಾರೆ. 

2.ಗ್ರಾಹಕ ಸಂರಕ್ಷಣಾ ನಿಯಂತ್ರಣ ನಿಯಮದ ಪ್ರಕಾರ, ಬಳಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಟ್ಯಾರಿಫ್ ವೋಚರ್ (STV) ವ್ಯಾಲಿಡಿಟಿಯನ್ನು 90 ದಿನದಿಂದ 365 ದಿನಕ್ಕೆ ಅಂದ್ರೆ 1 ವರ್ಷಕ್ಕೆ ಹೆಚ್ಚಿಸಲಾಗಿದೆ. 

3.ಆನ್‌ಲೈನ್ ರೀಚಾರ್ಜ್ ಬಳಕೆ ಹೆಚ್ಚಾಗುತ್ತಿರೋದನ್ನು ಗಮನಿಸಿರುವ ಟ್ರಾಯ್, ಪಿಸಿಕಲ್ ವೋಚರ್‌ಗಳ ಬಣ್ಣ ಕೋಡಿಂಗ್ ಅನ್ನು ತೆಗೆದುಹಾಕಲು ನಿರ್ಧರಿಸಿದೆ. ಮೊದಲು ಪ್ರತಿ ವರ್ಗದ ರೀಚಾರ್ಜ್‌ಗೆ ಪ್ರತ್ಯೇಕ ಬಣ್ಣ ಕೋಡಿಂಗ್ ವ್ಯವಸ್ಥೆ ಇತ್ತು.

ಇದನ್ನೂ ಓದಿ: 365ಕ್ಕೆ 395ರ ಚೆಕ್‌ಮೆಟ್ ಕೊಟ್ಟ BSNL; ಏನಾಗ್ತಿದೆ ಅಂತ ಗೊಂದಲದಲ್ಲಿ ಸಿಲುಕಿದ ಏರ್‌ಟೆಲ್, ಜಿಯೋ

4.2012ರಲ್ಲಿ ಟೆಲಿಕಾಂ ಟ್ಯಾರಿಫ್ ಆರ್ಡರ್ 50ನೇ ತಿದ್ದುಪಡಿ ಪ್ರಕಾರ, ಕನಿಷ್ಠ 10 ರುಪಾಯಿ ಬೆಲೆಯ ವೋಚರ್ ಕಡ್ಡಾಯಗೊಳಿಸಿತ್ತು. ಟಾಪ್ ಅಪ್ ರೀಚಾರ್ಜ್‌ನಲ್ಲಿಯೂ 10 ರೂಪಾಯಿಯ ರೀಚಾರ್ಜ್ ಕಡ್ಡಾಯ ಮಾಡಿತ್ತು. ಬದಲಾದ ಸನ್ನಿವೇಶಗಳನ್ನು ಗಮನಿಸಿರುವ TRAI, ಈ 10 ರೂಪಾಯಿ ವೋಚರ್ ಆಯ್ಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈಗ ಟೆಲಿಕಾಂ ಕಂಪನಿಗಳು ಈಗ 10 ರೂಪಾಯಿಗಳ ಟಾಪ್-ಅಪ್ ಮತ್ತು ಯಾವುದೇ ಮೌಲ್ಯದ ಯಾವುದೇ ಟಾಪ್-ಅಪ್ ವೋಚರ್ ವಿತರಿಸುವ ಸ್ವಾತಂತ್ರ್ಯವನ್ನು ಹೊಂದಿವೆ. 1

ಜುಲೈ-2024ರಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿಕೊಂಡಿದ್ದವು. ಇದರ ಪರಿಣಾಮ ಎರಡು ಸಿಮ್ ಬಳಕೆದಾರರಿಗೆ ರೀಚಾರ್ಜ್ ದುಬಾರಿಯಾಗಿತ್ತು. ಬಳಕೆದಾರರ ಸಮಸ್ಯೆಗಳನ್ನು ಅರ್ಥಮಾಡಿಕೊಂಡ ಟೆಲಿಕಾಂ ನಿಯಂತ್ರಕ ಇದೀಗ ವಾಯ್ಸ್ ಮತ್ತು SMS ಸೇವೆಗಳನ್ನು ಬಳಸುವ ಬಳಕೆದಾರರಿಗೆ ಪರಿಹಾರವನ್ನು ನೀಡಿದೆ. ಟೆಲಿಕಾಂ ಕಂಪನಿಗಳು ಈಗ ಡ್ಯೂಯಲ್ ಸಿಮ್ ಬಳಕೆದಾರರಿಗೆ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: ಹೊಸ ವರ್ಷಕ್ಕೆ ಮತ್ತಷ್ಟು, ಮಗದಷ್ಟು; ಕಡಿಮೆ ಬೆಲೆಗೆ BSNL ಡೇಟಾ ಪ್ಲಾನ್‌ಗಳು

Follow the Telecom Regulatory Authority of India (TRAI) channel on WhatsApp: https://t.co/dDZE2f6cDC pic.twitter.com/Hzj9m7GQj2

— TRAI (@TRAI)
click me!