ಯುಟ್ಯೂಬ್ ನಲ್ಲಿ ಅಡುಗೆ ವಿಡಿಯೋ ಪೋಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಜನರಿದ್ದಾರೆ. ಆದ್ರೆ ನಮ್ಮ ಚಾನೆಲ್ ಮಾತ್ರ ಏಕೆ ಬೆಳೆಯುತ್ತಿಲ್ಲ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಯುಟ್ಯೂಬ್ (YouTube) ಮೂಲಕ ಹಣ ಗಳಿಸುವವರ ಸಂಖ್ಯೆ ಸಾಕಷ್ಟಿದೆ. ದಿನಕ್ಕೆ ಹತ್ತಾರು ಚಾನೆಲ್ (channel) ಗಳು ತಲೆ ಎತ್ತುತ್ತಿವೆ. ಕಂಟೆಂಟ್ ಕ್ರಿಯೇಟ್ ಮಾಡಿ, ವಿಡಿಯೋ ಅಪ್ಲೋಡ್ ಮಾಡಿದ್ರೆ ಮುಗೀತು, ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು ಅಂದ್ಕೊಂಡು ಯುಟ್ಯೂಬ್ ಗೆ ಬಂದ ಅದೆಷ್ಟೋ ಮಂದಿ ಫೇಲ್ ಆಗಿದ್ದಾರೆ. ನಿರೀಕ್ಷೆಯಷ್ಟು ಸಬ್ಸ್ಕ್ರೈಬರ್, ವೀವ್ಸ್ ಅವರಿಂದ ಪಡೆಯೋಕೆ ಸಾಧ್ಯವಾಗ್ತಿಲ್ಲ. ಇತ್ತೀಚಿಗೆ ಕುಕ್ಕಿಂಗ್ ಯುಟ್ಯೂಬ್ ನಡೆಸುತ್ತಿದ್ದ ನಳಿನಿ ಉನಾಗರ ನಿರ್ಧಾರ ಎಲ್ಲರ ಗಮನ ಸೆಳೆದಿತ್ತು. ಯುಟ್ಯೂಬ್ ಚಾನೆಲ್ ಗೆ 8 ಲಕ್ಷ ಖರ್ಚು ಮಾಡಿದ್ದ ನಳಿನಿ, ಮೂರು ವರ್ಷ ಯುಟ್ಯೂಬ್ ಗಾಗಿ ತಮ್ಮ ಸಮಯ ಮೀಸಲಿಟ್ಟಿದ್ದರು. ಆದ್ರೂ ಅವರ ನಿರೀಕ್ಷೆಯಂತೆ ಹಣ ಬರಲಿಲ್ಲ. ಹಾಗಾಗಿ ಯುಟ್ಯೂಬ್ ಗೆ ವಿದಾಯ ಹೇಳುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು. ಬರೀ ನಳಿನಿ ಮಾತ್ರವಲ್ಲ, ಅನೇಕರು ಯುಟ್ಯೂಬ್ ಚಾನೆಲ್ ನಲ್ಲಿ ವಿಫಲರಾಗಿದ್ದಾರೆ. ನೀವೂ ಅಡುಗೆ ಯುಟ್ಯೂಬ್ ಚಾನೆಲ್ (Cooking YouTube Channel) ಶುರು ಮಾಡ್ಬೇಕು ಅಂದ್ರೆ ಕೆಲವೊಂದು ಟಿಪ್ಸ್ ಫಾಲೋ ಮಾಡಿ.
ಅಡುಗೆ ಯುಟ್ಯೂಬ್ ಚಾನೆಲ್ ಹೇಗೆ ಮಾಡ್ಬೇಕು? :
undefined
ವಿಭಾಗದ ಆಯ್ಕೆ : ಅಡುಗೆಯೇ ಒಂದು ವಿಭಾಗವಾಗಿದ್ರೂ ಅದ್ರಲ್ಲಿ ನಾನಾ ವೆರೈಟಿ ಇದೆ. ಹಾಗಾಗಿ ಮೊದಲು ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಲು ಬಯಸ್ತೀರಿ ಎಂಬುದನ್ನು ನಿರ್ಧರಿಸಬೇಕು. ವೆಜ್, ನಾನ್ ವೆಜ್, ಹಸಿ ತರಕಾರಿ ಆಹಾರ, ಕೇಕ್, ಸಲಾಡ್, ಮನೆ ಅಡುಗೆ, ಸ್ಟ್ರೀಟ್ ಫುಡ್ ಅಥವಾ ಹಳ್ಳಿ ಅಡುಗೆ ಇದ್ರಲ್ಲಿ ಯಾವುದು ನಿಮಗೆ ಬೆಸ್ಟ್ ಎಂಬುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ.
10 ರೂ ರೀಚಾರ್ಜ್, 365 ದಿನ ವ್ಯಾಲಿಡಿಟಿ; TRAI ಹೊಸ ನಿಯಮಗಳಿಗೆ ಕೋಟ್ಯಂತರ ಮೊಬೈಲ್ ಬಳಕೆದಾರರು ಹ್ಯಾಪಿ ಹ್ಯಾಪಿ
ವಿಡಿಯೋ ರೆಕಾರ್ಡಿಂಗ್ ವಿಧಾನ : ನೀವು ದೊಡ್ಡ ಮಟ್ಟದಲ್ಲಿ ಸ್ಟುಡಿಯೋ ಸೆಟ್ ಮಾಡುವ ಅಗತ್ಯವಿಲ್ಲ. ನಿಮ್ಮ ಬಳಿ ವಿಡಿಯೋ ತಯಾರಿಸಲು ಮೂರು ವಸ್ತುಗಳಿದ್ದರೆ ಸಾಕು. ಒಂದು ಮೊಬೈಲ್, ಟ್ರೈಪಾಡ್ ಮತ್ತು ಮೈಕ್. ಇದಕ್ಕೆ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡ್ಬೇಕಾಗಿಲ್ಲ. ಇರುವ ಮೊಬೈಲ್ ನಲ್ಲಿಯೇ ಅಡುಗೆ ಮಾಡುವ ವಿಡಿಯೋವನ್ನು ರೆಕಾರ್ಡ್ ಮಾಡಿ. ವಿಡಿಯೋ ರೆಕಾರ್ಡ್ ಮಾಡುವ ವೇಳೆ ಬೆಳಕಿನ ಬಗ್ಗೆ ಸರಿಯಾಗಿ ಗಮನಿಸಿ. ನೀವು ಮಾಡ್ತಿರುವ ಅಡುಗೆ, ನೋಡುಗರಿಗೆ ಸ್ಪಷ್ಟವಾಗಿ ಕಾಣ್ಬೇಕು ಎಂಬುದು ನೆನಪಿರಲಿ.
ವಿಡಿಯೋ ಎಡಿಟಿಂಗ್ : ನೀವು ಲಾಂಗ್ ವಿಡಿಯೋ ಮಾಡಿದ್ರೆ ಒಳ್ಳೆಯದು. ಆ ವಿಡಿಯೋವನ್ನು ನೀವು ಎಡಿಟ್ ಮಾಡಿ ಅದನ್ನು ಮತ್ತಷ್ಟು ಸುಂದರಗೊಳಿಸಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ವಿಡಿಯೋ ಎಡಿಟಿಂಗ್ ಅಪ್ಲಿಕೇಷನ್ ಗಳಿದ್ದು ಅವುಗಳನ್ನು ನೀವು ಬಳಸಬಹುದು.
ವಿಡಿಯೋ ಅಪ್ಲೋಡ್ : ನಿಮ್ಮ ಯುಟ್ಯೂಬ್ ಚಾನೆಲ್ ಹೆಸರು ಸರಳವಾಗಿರಲಿ ಹಾಗೂ ಆಕರ್ಷಕವಾಗಿರಲಿ. ಅದಕ್ಕೆ ನೀವು ತಯಾರಿಸಿದ ಅಡುಗೆ ವಿಡಿಯೋವನ್ನು ಪೋಸ್ಟ್ ಮಾಡಬೇಕು. ವಿಡಿಯೋ ಪೋಸ್ಟ್ ಆದ ನಂತ್ರ Title, Description ಮತ್ತು Tags ಬಗ್ಗೆ ಹೆಚ್ಚು ಗಮನವಿರಲಿ. ಇದು ಚೆನ್ನಾಗಿದ್ರೆ ನಿಮ್ಮ ಯುಟ್ಯೂಬ್ ಹೆಚ್ಚು ಸಬ್ಸ್ಕ್ರೈಬ್ ಆಗುತ್ತೆ.
ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಪಡೆಯುವ 7 ಟ್ರಿಕ್
ಈ ವಿಷ್ಯದ ಬಗ್ಗೆ ಇರಲಿ ಗಮನ : ನಿಮ್ಮ ಅಡುಗೆ ಯುಟ್ಯೂಬ್ ಚಾನೆಲ್ ಹೆಚ್ಚೆಚ್ಚು ಗಳಿಸಬೇಕು ಅಂದ್ರೆ ನೀವು ಮತ್ತೊಂದಿಷ್ಟು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
• ಯುಟ್ಯೂಬ್ ಕಮ್ಯುನಿಟಿ ಗೈಡೆನ್ಸ್ ಫಾಲೋ ಮಾಡ್ಬೇಕು.
• ವಿಡಿಯೋದ ಆರಂಭಿಕ 30 ಸೆಕೆಂಡ್ ಹೆಚ್ಚು ಆಕರ್ಷಕವಾಗಿರಬೇಕು.
• ಟ್ರೆಂಡ್ ಆಧರಿಸಿ ನೀವು ಚಾನೆಲ್ ಗೆ ವಿಡಿಯೋ ಅಪ್ಲೋಡ್ ಮಾಡ್ಬೇಕು.
• ಯುಟ್ಯೂಬ್ ವಿಡಿಯೋಗಳನ್ನು ಡಿಲಿಟ್ ಮಾಡ್ಬೇಡಿ.
• ವಿಡಿಯೋ ಕ್ವಾಲಿಟಿ ಬಗ್ಗೆ ಗಮನ ಇರಲಿ
• ವಿಡಿಯೋ ಅಪ್ಲೋಡ್ ಮಾಡಲು ಒಂದು ನಿಯಮ ರೂಪಿಸಿಕೊಳ್ಳಿ. ಪ್ರತಿ ದಿನ ಅಥವಾ ವಾರಕ್ಕೆ ಎರಡು ವಿಡಿಯೋವನ್ನು ಅಪ್ಲೋಡ್ ಮಾಡ್ತಿದ್ದರೆ ಅದನ್ನು ನಿಲ್ಲಿಸಬೇಡಿ.
• ವಿಡಿಯೋವನ್ನು ಸರಿಯಾದ ಕೆಟಗರಿಯಲ್ಲಿ ಹಾಕಿ
• ತಕ್ಷಣ ಫಲಿತಾಂಶ ಬಯಸಬೇಡಿ. ಸಕ್ಸಸ್ ಗೆ ಆರರಿಂದ ವರ್ಷದ ಸಮಯ ಹಿಡಿಯುತ್ತದೆ ಎಂಬುದು ನೆನಪಿರಲಿ.