
Business Desk:ಉದ್ಯೋಗ ಸಿಕ್ಕ ತಕ್ಷಣ ಹೂಡಿಕೆ ಬಗ್ಗೆ ಯೋಚಿಸೋರು ತುಂಬಾ ಕಡಿಮೆ. ಬಹುತೇಕರು ತೆರಿಗೆ ಉಳಿತಾಯದ ನಿಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆಯೇ ಹೊರತು ರಿಟರ್ನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಮೊದಲ ಉದ್ಯೋಗ ಸಿಕ್ಕಾಗ ವಯಸ್ಸು ಕೂಡ ಕಡಿಮೆ ಇರುತ್ತದೆ. ಹೀಗಾಗಿ ವೈಯಕ್ತಿಕ ಹಣಕಾಸು ಹಾಗೂ ಹೂಡಿಕೆ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಬಹುತೇಕರು ಹಣವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಆದರೆ, ಉದ್ಯೋಗ ದೊರಕಿದ ಕ್ಷಣದಿಂದ ಸಮರ್ಪಕವಾಗಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಸಾಧ್ಯವಿದೆ. ಉದ್ಯೋಗ ದೊರಕಿದ ತಕ್ಷಣ ಹೂಡಿಕೆ ಅಥವಾ ಉಳಿತಾಯವೇಕೆ, ಅದಕ್ಕೆ ಇನ್ನೂ ಸಮಯವಿದೆ. ಈಗ ದುಡಿದಿರುವ ಹಣವನ್ನು ಖರ್ಚು ಮಾಡುವ ಎಂಬ ಮನೋಭಾವ ಬೆಳೆಸಿಕೊಳ್ಳುವುದು ಕೂಡ ಸರಿಯಲ್ಲ. ಹಾಗಾದ್ರೆ ವೇತನ ಪಡೆಯುವ ಯುವಕ/ಯುವತಿಯರಿಗೆ ಜೀವನದಲ್ಲಿ ಬೇಗ ಆರ್ಥಿಕ ಸ್ಥಿರತೆ ನೀಡುವಂತಹ ಹೂಡಿಕೆ ಯೋಜ ನೆಗಳು ಯಾವುವು? ಇಲ್ಲಿದೆ ಮಾಹಿತಿ.
1.ಸ್ಥಿರ ಠೇವಣಿ (ಎಫ್ ಡಿ)
ನೀವು ಮಾರುಕಟ್ಟೆ ಪರಿಸ್ಥಿತಿಗಳಿಂದ ಪ್ರಭಾವಿತವಾಗದೆ ಸ್ಥಿರ ಆದಾಯ ಅಥವಾ ರಿಟರ್ನ್ ನಿರೀಕ್ಷಿಸುವರಾಗಿದ್ರೆ ಎಫ್ ಡಿಗಳಲ್ಲಿ ಹೂಡಿಕೆ ಮಾಡೋದು ಬೆಸ್ಟ್. ವಿವಿಧ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿಯ ಎಫ್ ಡಿ ಯೋಜನೆಗಳು ಈ ಹಿಂದಿನಿಂದಲೂ ಸುರಕ್ಷಿತ ಹೂಡಿಕೆಗಳು ಎಂದೇ ಪರಿಗಣಿಸಲ್ಪಟ್ಟಿವೆ. ಈಗಂತೂ ಎಫ್ ಡಿಗಳ ಮೇಲೆ ಉತ್ತಮ ಬಡ್ಡಿದರ ಕೂಡ ನೀಡಲಾಗುತ್ತಿದೆ. ಹೀಗಾಗಿ ನೀವು ಹೂಡಿಕೆಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡೋದಿಲ್ಲ ಎಂದಾದರೆ ಎಫ್ ಡಿಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ಅಂಚೆ ಕಚೇರಿ, ವಿವಿಧ ಬ್ಯಾಂಕ್ ಗಳಲ್ಲಿ ಎಫ್ ಡಿ ಮೇಲೆ ಎಷ್ಟು ಬಡ್ಡಿ ನೀಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಆ ಬಳಿಕ ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ.ಇನ್ನು ನೀವು ನಿಮ್ಮ ಎಫ್ ಡಿ ಆಧರಿಸಿ ಸಾಲ ಕೂಡ ಪಡೆಯಬಹುದು ಎಂಬುದು ನೆನಪಿರಲಿ.
NPS ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಚಿಂತನೆ; ವಿತ್ ಡ್ರಾ ನಿಯಮದಲ್ಲಿ ಶೀಘ್ರ ಬದಲಾವಣೆ ಸಾಧ್ಯತೆ
2.ರಿಕರಿಂಗ್ ಡೆಫಾಸಿಟ್ (ಆರ್ ಡಿ): ರಿಕರಿಂಗ್ ಡೆಫಾಸಿಟ್ ಗಳು (ಆರ್ ಡಿ) ಕೂಡ ಸ್ಥಿರ ಠೇವಣಿಗಳಂತೆ ಸುರಕ್ಷಿತ ಹೂಡಿಕೆ ಯೋಜನೆಗಳಾಗಿವೆ. ಆದರೆ, ಆರ್ ಡಿಯಲ್ಲಿ ನೀವು ನಿಯಮಿತವಾಗಿ ಹೂಡಿಕೆ ಮಾಡೋದು ಅಗತ್ಯ. ಅಂದರೆ ಆರ್ ಡಿಯಲ್ಲಿ ನೀವು ಎಫ್ ಡಿಯಂತೆ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಕಾಗಿಲ್ಲ. ಬದಲಿಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತ ಬರಬೇಕು.
3.ಚಿನ್ನದಲ್ಲಿ ಹೂಡಿಕೆ: ಚಿನ್ನದ ಮೇಲಿನ ಹೂಡಿಕೆ ಸದಾ ಕಾಲ ಅತ್ಯಂತ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ ನೀಡುವಂತಹದ್ದು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಚಿನ್ನದ ಮೇಲೆ ಕೂಡ ಹೂಡಿಕೆ ಮಾಡಬಹುದು. ಚಿನ್ನದ ಮೇಲಿನ ಹೂಡಿಕೆ ಉತ್ತ ರಿಟರ್ನ್ಸ್ ನೀಡುವ ಕಾರಣ ಈ ನಿಟ್ಟಿನಲ್ಲಿ ನೀವು ಯೋಚಿಸಬಹುದು.
ಈ ಮೂರು ಪ್ರಮುಖ ಬ್ಯಾಂಕ್ ಗಳ ಎಫ್ ಡಿ ಮೇಲಿನ ಬಡ್ಡಿದರ ಇಳಿಕೆ, ಕಾರಣವೇನು?
4.ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಪಿಪಿಎಫ್ ಸರ್ಕಾರದ ಬೆಂಬಲಿತ ಹೂಡಿಕೆ ಯೋಜನೆಯಾಗಿದೆ. ಇದು ಹೂಡಿಕೆಗೆ ಅತ್ಯಂತ ಸುರಕ್ಷಿತ ಯೋಜನೆಯಾಗಿದ್ದು, ಉತ್ತಮ ರಿಟರ್ನ್ ಕೂಡ ಸಿಗುತ್ತದೆ. ಪ್ರಸ್ತುತ ವಾರ್ಷಿಕ ಶೇ.7.1 ಬಡ್ಡಿ ನೀಡುತ್ತಿದೆ. ಪಿಪಿಎಫ್ ಮೇಲಿನ ಬಡ್ಡಿದರವನ್ನು ತ್ರೈಮಾಸಿಕದ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ. ಪಿಪಿಎಫ್ ಖಾತೆಯಲ್ಲಿ ಹೂಡಿಕೆದಾರರು ವಾರ್ಷಿಕ ಕನಿಷ್ಠ 500ರೂ. ಹಾಗೂ ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು.
5.ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (ಎಸ್ ಐಪಿ): ಎಸ್ ಐಪಿಗಳು ಕೂಡ ಆರ್ ಡಿಯಂತೆ. ಆದರೆ, ಇದು ಮಾರ್ಕೆಟ್ ರಿಸ್ಕ್ ಅನ್ನು ಒಳಗೊಂಡಿದೆ. ನೀವು ಇದರಲ್ಲಿ ನೀವು ಹೂಡಿಕೆ ವಿಧಾನ ಹಾಗೂ ಮೊತ್ತವನ್ನು ಆಯ್ಕೆ ಮಾಡಿಕೊಂಡು ಆ ಬಳಿಕ ಹೂಡಿಕೆ ಪ್ರಾರಂಭಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.