ಕಾರ್‌ ಇನ್ಸೂರೆನ್ಸ್‌ ಮೂರ್‌ ವರ್ಷಕ್ಕೆ ಮಾಡಿ, ಇದರಲ್ಲೇ ಲಾಭ!

Published : Feb 27, 2025, 12:47 PM ISTUpdated : Feb 27, 2025, 01:08 PM IST
ಕಾರ್‌ ಇನ್ಸೂರೆನ್ಸ್‌ ಮೂರ್‌ ವರ್ಷಕ್ಕೆ ಮಾಡಿ, ಇದರಲ್ಲೇ ಲಾಭ!

ಸಾರಾಂಶ

ಕಾರ್ ಮಾಲೀಕರಿಗೆ 3 ವರ್ಷಗಳ ಕಾರ್ ಇನ್ಶೂರೆನ್ಸ್ ಪಾಲಿಸಿ ಲಭ್ಯವಿದ್ದು, ಇದು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್‌ಗಳಿಗೆ ಕವರೇಜ್ ನೀಡುತ್ತದೆ. ಇದರಿಂದ ಪ್ರೀಮಿಯಂನಲ್ಲಿ ಉಳಿತಾಯ ಮತ್ತು ದೀರ್ಘಕಾಲದ ಕವರೇಜ್‌ನ ಲಾಭ ಪಡೆಯಬಹುದು.

ಕಾರು ಮಾಲೀಕರು ಪ್ರತೀ ವರ್ಷವೂ ಎಂದಿನಂತೆ ಒಂದು ವರ್ಷದ ಕಾರ್ ಇನ್ಶೂರೆನ್ಸ್ ರಿನೀವಲ್ ಮಾಡುವುದು ರೂಢಿ. ಅದು ಅವಶ್ಯ ಮತ್ತು ಅನಿವಾರ್ಯ ಕೂಡ. ಆದರೆ ಈಗ ನೀವು ಒಂದೇ ವರ್ಷಕ್ಕೆ ಇನ್ಶೂರೆನ್ಸ್ ಮಾಡಿಸಿಕೊಳ್ಳಬೇಕಿಲ್ಲ. ಬದಲಿಗೆ ಮೂರು ವರ್ಷದ ಕಾರ್ ಇನ್ಶೂರೆನ್ಸ್ ಅನ್ನು ಮಾಡಿಸಿಕೊಳ್ಳಬಹುದು. ಇದೀಗ ಥ್ರೀ ಪ್ಲಸ್ ಥ್ರೀ ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಪಾಲಿಸಿಗಳು ಲಭ್ಯವಿದೆ. ಅದರಿಂದ ದೊರೆಯುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ನೋಡೋಣ.

3+3 ಇಯರ್ ಓಡಿ+ಟಿಪಿ ಇನ್ಶೂರೆನ್ಸ್ ಪ್ಲಾನ್: ಈ ಹೊಸ ಯೋಜನೆಗಳು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್‌ಗಳಿಗೆ ಮೂರು ವರ್ಷಗಳ ಕವರೇಜ್ ಅನ್ನು ಒದಗಿಸುತ್ತದೆ. ಈ ಹಿಂದೆ ಟಿಪಿ ಇನ್ಶೂರೆನ್ಸ್ ಮೂರು ವರ್ಷಗಳಿಗೆ ಮಾನ್ಯವಾಗಿದ್ದರೂ ಓಡಿ ಕವರೇಜ್ ಅನ್ನು ವಾರ್ಷಿಕವಾಗಿ ರಿನೀವಲ್ ಮಾಡಿಸಬೇಕಿತ್ತು. ಆದರೆ ಈಗ ಈ ಮಾದರಿಯನ್ನು ಬದಲಿಸಲಾಗಿದ್ದು, ಹೊಸ ಕಾರುಗಳಿಗೆ ಮೂರು ವರ್ಷಗಳ ಓಡಿ ಮತ್ತು ಟಿಪಿ ಇನ್ಶೂರೆನ್ಸ್ ಅನ್ನು ನೀಡಲಾಗುತ್ತಿದೆ. ಹಾಗಾಗಿ ಪ್ರತೀ ವರ್ಷ ನವೀಕರಣ ಮಾಡುವ ಅಗತ್ಯ ಇರುವುದಿಲ್ಲ.

ಪ್ರೀಮಿಯಂನಲ್ಲಿ ಉಳಿತಾಯ: ಓಡಿ (ಓನ್ ಡ್ಯಾಮೇಜ್) ಇನ್ಶೂರೆನ್ಸ್ ನವೀಕರಣಕ್ಕಾಗಿ ಮೂರು ವರ್ಷ ಪ್ರತ್ಯೇಕವಾಗಿ ಪ್ರೀಮಿಯಂ ಕಟ್ಟುವ ಬದಲು ರಿಯಾಯಿತಿ ದರದಲ್ಲಿ ಒಂದೇ ಸಲ ಪ್ರೀಮಿಯಂ ಪಾವತಿಸಬಹುದು. ಪ್ರತೀ ವರ್ಷ ಪ್ರೀಮಿಯಂ ಜಾಸ್ತಿಯಾಗುವುದನ್ನು ತಪ್ಪಿಸುವುದರ ಜೊತೆಗೆ ಶೇ.10ರಷ್ಟು ರಿಯಾಯಿತಿಯನ್ನೂ ಪಡೆಯಬಹುದು.

ಉದಾಹರಣೆಗೆ ವಾರ್ಷಿಕ ಓಡಿ ಇನ್ಶೂರೆನ್ಸ್ ನವೀಕರಣಕ್ಕೆ ಪ್ರತೀ ವರ್ಷ ಪ್ರೀಮಿಯಂನಲ್ಲಿ ಶೇ.5-10ರಷ್ಟು ಹೆಚ್ಚು ಪಾವತಿಸಬೇಕಾಗಿ ಬಂದರೆ ಮೂರು ವರ್ಷದ ಇನ್ಶೂರೆನ್ಸ್‌ನಲ್ಲಿ ಈ ಹೆಚ್ಚಳ ಇರುವುದಿಲ್ಲ ಮತ್ತು ಆರಂಭದಲ್ಲಿಯೇ ಶೇ.10 ರಿಯಾಯಿತಿ ಲಭ್ಯವಾಗುತ್ತದೆ.

ಪ್ರಯೋಜನದೀರ್ಘಾವಧಿಯಲ್ಲಿ ಹೆಚ್ಚು ಉಳಿತಾಯ ಮಾಡಬಹುದು. ಇಷ್ಟೇ ಅಲ್ಲ, ನೀವು ಒಮ್ಮೆ ಕ್ಲೇಮ್ ಮಾಡಿದರೂ ಪ್ರೀಮಿಯಂ ಮೂರು ವರ್ಷಗಳವರೆಗೆ ಲಾಕ್ ಆಗಿರುತ್ತದೆ. ಒಂದು ವರ್ಷದ ಓಡಿ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಂದು ಸಲ ಕ್ಲೇಮ್ ಮಾಡಿದ ಬಳಿಕ ಪ್ರೀಮಿಯಂ ಹೆಚ್ಚಾಗಬಹುದು. ಆದರೆ ಇಲ್ಲಿ ಹಾಗಾಗುವುದಿಲ್ಲ.

ದೀರ್ಘಕಾಲದ ಕವರೇಜ್: ವಾರ್ಷಿಕ ಇನ್ಶೂರೆನ್ಸ್‌ಗಳಲ್ಲಿ ಪ್ರೀಮಿಯಂ ಹೆಚ್ಚಾಗುವುದರ ಜೊತೆಗೆ ಅನೇಕ ಹೊಸ ನಿಯಮಗಳು ಎದುರಾಗುವ ಸಾಧ್ಯತೆ ಇರುತ್ತದೆ. ನಿಬಂಧನೆಗಳು ಬದಲಾಗಲೂಬಹುದು. ಆಯ್ಕೆ ಮಾಡಿದ ಪ್ಲಾನ್ ಬದಲಾಗಬಹುದು ಕೂಡ. ಆದರೆ ಮೂರು ವರ್ಷದ ಯೋಜನೆಯಲ್ಲಿ ಈ ಎಲ್ಲಾ ಕಿರಿಕಿರಿಗಳಿಂದ ಪಾರಾಗಬಹುದು. ದೀರ್ಘಕಾಲದ ಕವರೇಜ್ ಲಾಭ ಹೊಂದಬಹುದು.

 

ಪರಿವಾಹನ ಪೋರ್ಟಲ್‌ನಲ್ಲಿ ಕಾರು ವಿಮೆ ಸ್ಥಿತಿಯನ್ನು ಪರಿಶೀಲಿಸುವುದೇ ಹೇಗೆ

ಇವಿ, ಹೈಬ್ರಿಡ್‌ ಕಾರುಗಳಿಗೂ ಲಾಭದಾಯಕ: ಈ ಮೂರು ವರ್ಷದ ಯೋಜನೆಗಳು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಮಾಲೀಕರಿಗೂ ಲಾಭಕರವಾಗಿವೆ. ಈ ಕಾರುಗಳ ಘಟಕಗಳು ದುಬಾರಿಯಾಗಿರುತ್ತವೆ, ಅದರಲ್ಲೂ ಬ್ಯಾಟರಿ ದುಬಾರಿಯಾಗಿರುತ್ತವೆ. ಇವಿ ವಾಹನದ ಬಹುತೇಕ ವೆಚ್ಚ ಇದಕ್ಕೆ ಹೋಗುತ್ತದೆ. ಹಾಗಾಗಿ ಬ್ಯಾಟರಿ ದುರಸ್ತಿ ಮಾಡುವ ಅಥವಾ ಬದಲಾಯಿಸುವುದಕ್ಕೆ ಜಾಸ್ತಿ ಹಣ ಖರ್ಚಾಗುತ್ತದೆ. ಆದ್ದರಿಂದ ಈ ಕಾರುಗಳಿಗೆ ಸಮಗ್ರ ಕವರೇಜ್ ಅವಶ್ಯ. 3+3 ಯೋಜನೆಯನ್ನು ಪಡೆಯುವ ಮೂಲಕ ಇವಿ ಮತ್ತು ಹೈಬ್ರಿಡ್ ಕಾರುಗಳ ಮಾಲೀಕರು ಆರ್ಥಿಕ ಭದ್ರತೆ ಹೊಂದಬಹುದು. ಜೊತೆಗೆ ಆ್ಯಡ್‌ಆನ್‌ಗಳನ್ನೂ ಆರಿಸಿಕೊಳ್ಳಬಹುದು.

ಮಾಲೀಕರೇ ಗಮನಿಸಿ, ನಿಮ್ಮ ಕಾರು ಸ್ನೇಹಿತರಿಗೆ ಕೊಟ್ಟರೆ ಜೈಲೂಟ ಫಿಕ್ಸ್!

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅರ್ಹ ಸಲಹೆಗಾರರನ್ನು ಸಂಪರ್ಕಿಸಿ ಈ ನಿಟ್ಟಿನಲ್ಲಿ ಮುಂದುವರಿಯಬಹುದು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ