
ನವದೆಹಲಿ[ಆ: ನಷ್ಟದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ನ ಷೇರು ಖರೀದಿಗೆ ಮೂರು ವಿದೇಶಿ ಕಂಪನಿಗಳು ಆಸಕ್ತಿ ತೋರಿವೆ. ಪನಾಮಾ ಮೂಲದ ಫಂಡ್ ಅವಂಟುಲೋ ಗ್ರೂಪ್ ಬಿಡ್ ಸಲ್ಲಿಸಿದ ಮೂರು ವಿದೇಶಿ ಸಂಸ್ಥೆಗಳ ಪೈಕಿ ಒಂದೆನಿಸಿದೆ.
ಆದರೆ, ಜೆಟ್ ಏರ್‌ವೆಸ್ ಖರೀದಿಗೆ ಉತ್ಸಾಹ ತೋರಿದ್ದ ಎತಿಹಾದ್ ಹಾಗೂ ಹಿಂದೂಜಾ ಗ್ರೂಪ್‌ಗಳು ಬಿಡ್ ಸಲ್ಲಿಕೆಯಿಂದ ಹಿಂದೆ ಸರಿದಿವೆ. ಅಲ್ಲದೇ ಯಾವುದೇ ವಿಮಾನಯಾನ ಸಂಸ್ಥೆಗಳು ಬಿಡ್‌ನಲ್ಲಿ ಭಾಗಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರೀಕ್ಷಿತ ಮಟ್ಟದ ಬಿಡ್ ಸಲ್ಲಿಕೆ ಆಗದ ಹಿನ್ನೆಲೆಯಲ್ಲಿ ಬ್ಯಾಂಕುಗಳ ಒಕ್ಕೂಟ ಗಡುವನ್ನು ಆ.3ರಿಂದ 10ರ ವರೆಗೆ ಮುಂದೂಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.